ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 3.27 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ (Karnataka Budget) ಅನ್ನು ಶುಕ್ರವಾರ ಮಂಡಿಸಿದರು. ಬಜೆಟ್‌ನ ಒಟ್ಟು ಆದಾಯ ಗಳಿಕೆ ಮತ್ತು ವೆಚ್ಚವನ್ನು ರೂಪಾಯಿಯಲ್ಲಿ ಲೆಕ್ಕಾಚಾರ ಹಾಕಲಾಗಿದೆ. ಸರ್ಕಾರದ ಆದಾಯ ಗಳಿಕೆ ಹೇಗೆ ಮತ್ತು ಯಾವುದಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ಬಗ್ಗೆ ವಿವರ ಇಲ್ಲಿದೆ.
Advertisement
1 ರೂಪಾಯಿ ಗಳಿಕೆ ಹೇಗೆ?
ರಾಜ್ಯ ತೆರಿಗೆ ಆದಾಯದಿಂದ 54 ಪೈಸೆ ಬಂದರೆ, ಸಾಲದಿಂದ 26 ಪೈಸೆ ಸಿಗಲಿದೆ. ಕೇಂದ್ರ ತೆರಿಗೆ ಪಾಲಿನಿಂದ 12 ಪೈಸೆ ಬರಲಿದ್ದು, ಸಹಾಯಾನುದಾನದಿಂದ 4 ಲಭ್ಯವಾಗಲಿದೆ. ಕೇಂದ್ರ ಸರ್ಕಾರದ ಸಹಾಯಾನುದಾನದಿಂದ 4 ಪೈಸೆ ಸಿಗಲಿದ್ದು, ರಾಜ್ಯ ತೆರಿಗೆಯೇತರ ರಾಜಸ್ವದಿಂದ 4 ಪೈಸೆ ಬರಲಿದೆ. ಇದನ್ನೂ ಓದಿ: 3.27 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 4 ಗ್ಯಾರಂಟಿಗೆ ಬೇಕು 57,910 ಕೋಟಿ ರೂ – ಯಾವುದಕ್ಕೆ ಎಷ್ಟು?
Advertisement
Advertisement
ಒಂದು ರೂ.ನಲ್ಲಿ ಯಾವುದಕ್ಕೆ ಎಷ್ಟು ವೆಚ್ಚ?
ರಾಜ್ಯ ಸರ್ಕಾರ ಸಾಲ ತೀರಿಸಲು ಬೊಕ್ಕಸದಿಂದ 18 ಪೈಸೆ ತೆಗೆದಿರಿಸಬೇಕಿದೆ. ಇತರ ಸಾಮಾನ್ಯ ಸೇವೆಗಳು ಹಾಗೂ ಇತರೆ ಆರ್ಥಿಕ ಸೇವೆಗಳಿಗಾಗಿ ತಲಾ 17 ಪೈಸೆ ವೆಚ್ಚ ಮಾಡಲಿದೆ. ಕೃಷಿ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೆ 15 ಪೈಸೆ ವ್ಯಯಿಸಲಿದೆ. ಸಮಾಜ ಕಲ್ಯಾಣಕ್ಕೆ 13 ಪೈಸೆ ವೆಚ್ಚ ಮಾಡಲಿದೆ. ಶಿಕ್ಷಣಕ್ಕೆ 10, ಆರೋಗ್ಯ ಹಾಗೂ ಇತರೆ ಸಾಮಾಜಿಕ ಸೇವೆಗಳಿಗಾಗಿ ತಲಾ 4 ಪೈಸೆ ತೆಗೆದಿರಿಸಬೇಕಿದೆ. ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ 2 ಪೈಸೆ ವೆಚ್ಚ ಮಾಡಲಿದೆ.
Advertisement
ಸಿಎಂ ಸಿದ್ದರಾಮಯ್ಯ ಅವರು 14ನೇ ಬಜೆಟ್ ಮಂಡಿಸುವ ಮೂಲಕ ತಮ್ಮ ದಾಖಲೆಯನ್ನೇ ಮುರಿದಿದ್ದಾರೆ. 2 ಗಂಟೆ 50 ನಿಮಿಷಗಳ ಕಾಲ ಬಜೆಟ್ ಪ್ರತಿಯನ್ನು ಸಿದ್ದರಾಮಯ್ಯ ಓದಿದರು. ಇದನ್ನೂ ಓದಿ: Karnataka Budget 2023- ಕೃಷಿ, ತೋಟಗಾರಿಕಾ ಇಲಾಖೆ ಉತ್ತೇಜನಕ್ಕೆ ಸಿಕ್ಕಿದ್ದೇನು?
Web Stories