ಬೆಂಗಳೂರು: 2023-24ನೇ ಸಾಲಿನ ಬಜೆಟ್ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶುಕ್ರವಾರ ಮಂಡಿಸಿದರು. ರಾಜ್ಯ ಸರ್ಕಾರದ ಬಜೆಟ್ನ (Karnataka Budget 2023) ಒಟ್ಟು ಆದಾಯ ಗಳಿಕೆ ಮತ್ತು ವೆಚ್ಚವನ್ನು ರೂಪಾಯಿ (100 ಪೈಸೆ)ಯಲ್ಲಿ ಲೆಕ್ಕಾಚಾರ ಹಾಕುವುದು ವಾಡಿಕೆ. ಅದರಂತೆ ಸರ್ಕಾರದ ಆದಾಯದ ಗಳಿಕೆ ಹೇಗೆ ಮತ್ತು ಯಾವುದಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಒಂದು ರೂಪಾಯಿ ಗಳಿಕೆ ಹೇಗೆ?
ರಾಜ್ಯ ತೆರಿಗೆ ಆದಾಯದಿಂದ ಸರ್ಕಾರಕ್ಕೆ 54 ಪೈಸೆ ಬಂದರೆ, ಸಾಲದಿಂದ 26 ಪೈಸೆ ಲಭ್ಯವಾಗಲಿದೆ. ಅಂತೆಯೇ ಕೇಂದ್ರ ತೆರಿಗೆ ಪಾಲಿನಿಂದ ರಾಜ್ಯ ಸರ್ಕಾರಕ್ಕೆ 12 ಪೈಸೆ ಸಿಗಲಿದೆ. ಕೇಂದ್ರ ಸರ್ಕಾರದ ಸಹಾಯಧನವಾಗಿ 4 ಪೈಸೆ ಲಭಿಸಲಿದೆ. ಜೊತೆಗೆ ರಾಜ್ಯ ತೆರಿಗೆಯೇತರ ರಾಜಸ್ವದಿಂದ 4 ಪೈಸೆ ಸಿಗಲಿದೆ. ಇದನ್ನೂ ಓದಿ: ಸರ್ಕಾರಿ ಪಿಯು, ಡಿಗ್ರಿ ಕಾಲೇಜಿನಲ್ಲಿ ಉಚಿತ ಶಿಕ್ಷಣ – 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ
1 ರೂಪಾಯಿಯಲ್ಲಿ ಯಾವುದಕ್ಕೆ ಎಷ್ಟು ಖರ್ಚು?
ಸಾಲ ತೀರಿಸಲು ರಾಜ್ಯ ಸರ್ಕಾರ ಬೊಕ್ಕಸದಿಂದ 19 ಪೈಸೆ ಎತ್ತಿಡಬೇಕಿದೆ. ಇತರ ಸಾಮಾನ್ಯ ಸೇವೆಗಳಿಗಾಗಿ 18 ಪೈಸೆ ವ್ಯಯಿಸಲಿದೆ. ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿಗೆ 17 ಪೈಸೆ, ಇತರೆ ಆರ್ಥಿಕ ಸೇವೆಗಳಿಗಾಗಿ 15 ಪೈಸೆ, ಶಿಕ್ಷಣಕ್ಕೆ 11 ಪೈಸೆ ತೆಗೆದಿರಿಸಬೇಕು. ಸಮಾಜ ಕಲ್ಯಾಣಕ್ಕೆ 8 ಪೈಸೆ, ಆರೋಗ್ಯಕ್ಕೆ 5 ಪೈಸೆ ವೆಚ್ಚ ಮಾಡಲಿದೆ. ಇತರ ಸಾಮಾಜಿಕ ಸೇವೆಗಳಿಗಾಗಿ 4 ಪೈಸೆ, ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ 3 ಪೈಸೆಯನ್ನು ಸರ್ಕಾರ ತೆಗೆದಿರಿಸಬೇಕು. ಇದನ್ನೂ ಓದಿ: ಯುವಸ್ನೇಹಿ, ಬದುಕಿನ ದಾರಿ ಯೋಜನೆ ಪ್ರಕಟ – ಯುವಜನತೆಗೆ ಸಿಗುತ್ತೆ ಹಣ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k