ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ದಾಖಲೆಯ 14ನೇ ಬಜೆಟ್ (Karnataka Budget) ಮಂಡಿಸಿದ್ದು, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವ ಅನುಸರಿಸಿ ಅಯವ್ಯಯ ಮಂಡಿಸಿದ್ದಾರೆ. ಗ್ಯಾರಂಟಿ ಭಾಗ್ಯಗಳ (Guarantee Scheme) ಜೊತೆಗೆ ಸರ್ವರಿಗೂ ತೆರಿಗೆ ಹೊರೆಯನ್ನು ಹೊರಿಸಿದ್ದಾರೆ.
ಮಧ್ಯಾಹ್ನ 12:9ಕ್ಕೆ ಸರಿಯಾಗಿ 128 ಪುಟಗಳ ಬಜೆಟ್ ಪ್ರತಿ ಓದಲು ಓದಲು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 2:55ಕ್ಕೆ ಭಾಷಣ ಮುಗಿಸಿದರು. ಬಜೆಟ್ ಗಾತ್ರ ಕಳೆದ ಬಾರಿಗಿಂತ 18,000 ಕೋಟಿ ಹೆಚ್ಚಾಗಿದೆ. ಅಯವ್ಯಯದ ಒಟ್ಟು ಗಾತ್ರ 3,27,747 ಕೋಟಿ ರೂ. ತಲುಪಿದೆ. ಈ ವರ್ಷ 5 ಗ್ಯಾರಂಟಿಗಳ ಅನುಷ್ಠಾನಕ್ಕಾಗಿ 35,000 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
Advertisement
ಬಸವರಾಜ ಬೊಮ್ಮಾಯಿ (Basavaraj Bommai) ಈ ಬಾರಿ 3,09,182 ಕೋಟಿ ರೂ. ಬಜೆಟ್ ಮಂಡಿಸಿದ್ದರು. ಹೆಚ್ಚುವರಿ ಹಣ ಹೊಂದಿಸಲು 85 ಸಾವಿರ ಕೋಟಿ ರೂ. ಸಾಲ ಮಾಡಲು ಸರ್ಕಾರ ಮುಂದಾಗಿದೆ.
Advertisement
Advertisement
ಪಂಚ ಗ್ಯಾರಂಟಿಗಳಿಗೆ ಎಷ್ಟು ಹಣ?
ಈ ವರ್ಷದ ಆಗಸ್ಟ್‌ನಿಂದ ಮಾರ್ಚ್‌ವರೆಗೆ ಒಟ್ಟು 35,410 ಕೋಟಿ ರೂ. ಅಗತ್ಯವಿದೆ. ಮುಂದಿನ ಹಣಕಾಸು ವರ್ಷದಲ್ಲಿ ವಾರ್ಷಿಕ 52,062 ಕೋಟಿ ರೂ.ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ Vs ಬೊಮ್ಮಾಯಿ – ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಸಿಕ್ಕಿದೆ?
Advertisement
ಯಾವುದಕ್ಕೆ ಎಷ್ಟು?
– ಅನ್ನ ಭಾಗ್ಯ -10,275 ಕೋಟಿ ರೂ.
– ಶಕ್ತಿ ಯೋಜನೆ -2,800 ಕೋಟಿ ರೂ.(ವಾರ್ಷಿಕ 4,000 ಕೋಟಿ ರೂ.)
– ಗೃಹ ಜ್ಯೋತಿ – 9,000 ಕೋಟಿ ರೂ.(ವಾರ್ಷಿಕ 13,500 ಕೋಟಿ ರೂ.)
– ಗೃಹ ಲಕ್ಷ್ಮಿ – 17,500 ಕೋಟಿ ರೂ.(ವಾರ್ಷಿಕ 30,000 ಕೋಟಿ ರೂ.)
– ಯುವನಿಧಿ – 250 ಕೋಟಿ ರೂ.(ವಾರ್ಷಿಕ 1,000 ಕೋಟಿ ರೂ.)
ಜನ ಸಾಮಾನ್ಯರಿಗೆ ತೆರಿಗೆಯ ಭಾರ
ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಅಬಕಾರಿ ಸುಂಕ, ಆಸ್ತಿ ನೋಂದಣಿ ದರ, ವಾಹನ ನೋಂದಣಿ ದರವನ್ನು ಹೆಚ್ಚಿಸಿದ್ದಾರೆ. ಈ ಮೂಲಕ ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆಯನ್ನು ಹಾಕಿದ್ದಾರೆ.
ಮದ್ಯ ದುಬಾರಿ
– ಅಬಕಾರಿ ಸುಂಕ 20%ರಷ್ಟು ಹೆಚ್ಚಳ
– ಘೋಷಿತ 18 ಸ್ಲಾಬ್‍ಗಳ ಮೇಲಿನ ಸುಂಕ ಹೆಚ್ಚಳ
– ಎಲ್ಲಾ ರೀತಿಯ ಮದ್ಯಗಳ ದರ ಏರಿಕೆ
– ಬಿಯರ್ ಮೇಲಿನ ಹೆಚ್ಚುವರಿ ಸುಂಕ 10% ಹೆಚ್ಚಳ ( 175 %ರಿಂದ 185% ಹೆಚ್ಚಳ)
ಅಬಕಾರಿ ತೆರಿಗೆ ಸಂಗ್ರಹ ಗುರಿ ಹೆಚ್ಚಳ
– 2022-23ರ ಬಜೆಟ್ – 29,000 ಕೋಟಿ ರೂ. ಸಂಗ್ರಹ ಗುರಿ
– 2023-24ರ ಬಜೆಟ್ – 36,000 ಕೋಟಿ ರೂ. ಸಂಗ್ರಹ ಗುರಿ
– ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹ ಗುರಿ: 7,000 ಕೋಟಿ
ಆಸ್ತಿ ನೋಂದಣಿ ದುಬಾರಿ
ರಾಜ್ಯದ ಎಲ್ಲಾ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳವಾಗಲಿದೆ. ಇದನ್ನೂ ಓದಿ: Karnataka Budget: 1 ರೂಪಾಯಿ ಬಂದಿದ್ಹೇಗೆ? ಹೋಗಿದ್ದು ಹೇಗೆ?
ಮುದ್ರಾಂಕ, ನೋಂದಣಿ ಗುರಿ ಎಷ್ಟು?
– 2022-23ರ ಬಜೆಟ್ – 15,000 ಕೋಟಿ ರೂ. ಸಂಗ್ರಹ ಗುರಿ
– 2023-24ರ ಬಜೆಟ್ – 25,000 ಕೋಟಿ ರೂ. ಸಂಗ್ರಹ ಗುರಿ
– ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹ ಗುರಿ 10,000 ಕೋಟಿ
ವಾಹನ ನೋಂದಣಿ ದುಬಾರಿ
– ಮೋಟಾರು ವಾಹನ ತೆರಿಗೆ ಪರಿಷ್ಕರಣೆ
– ವಾಹನ ಮೋಟಾರ್ ತೆರಿಗೆ ಶೇ.7ರಷ್ಟು ಹೆಚ್ಚಳ
– ಆಯ್ದ ವಾಹನಗಳಿಗೆ ತೆರಿಗೆ ಹೆಚ್ಚಳ
– ಕಾರು, ಬೈಕ್, ವಾಹನಗಳ ನೋಂದಣಿ ದುಬಾರಿ
ಮೊಟಾರು ವಾಹನ ತೆರಿಗೆ ಗುರಿ ಎಷ್ಟು?
– 2022-23ರ ಬಜೆಟ್ – 8,007 ಕೋಟಿ ರೂ. ಸಂಗ್ರಹ ಗುರಿ
– 2023-24ರ ಬಜೆಟ್ – 11,500 ಕೋಟಿ ರೂ. ಸಂಗ್ರಹ ಗುರಿ
– ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹ ಗುರಿ: 3,493 ಕೋಟಿ
ವಾಣಿಜ್ಯ ತೆರಿಗೆ ಗುರಿ ಎಷ್ಟು?
– 2022-23ರ ಬಜೆಟ್ – 72,010 ಕೋಟಿ ರೂ. ಸಂಗ್ರಹ ಗುರಿ
– 2023-24ರ ಬಜೆಟ್ – 98,650 ಕೋಟಿ ರೂ. ಸಂಗ್ರಹ ಗುರಿ
– ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹ ಗುರಿ: 26,640 ಕೋಟಿ
Web Stories