ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು (CM Siddaramaiah) ಇಂದು 3,27,747 ಕೋಟಿ ರೂಪಾಯಿಯ ಬಜೆಟ್ (Budget) ಮಂಡಿಸಿದ್ದಾರೆ. ಈ ಪೈಕಿ ಯುವ ನಿಧಿಯನ್ನು ಹೊರತು ಪಡಿಸಿ 57,910 ಕೋಟಿ ರೂ. ಹಣವನ್ನು ಚುನಾವಣಾ ಸಮಯದಲ್ಲಿ ಕಾಂಗ್ರೆಸ್ (Congress) ಘೋಷಣೆ ಮಾಡಿದ 4 ಗ್ಯಾರಂಟಿ ಸ್ಕೀಂಗಳಿಗೆ (Guarantee Scheme) ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಯಾವುದಕ್ಕೆ ಎಷ್ಟು?
‘ಶಕ್ತಿ’ ಯೋಜನೆ
ರಾಜ್ಯ ಸರ್ಕಾರದ ಸ್ವಾಮ್ಯದ ಎಲ್ಲಾ 4 ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಸೌಲಭ್ಯ. ಪ್ರತಿ ದಿನ ಸರಾಸರಿ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರಿಗೆ ಅನುಕೂಲ: ವಾರ್ಷಿಕ 4,000 ಕೋಟಿ ರೂ. ವೆಚ್ಚ. ಇದನ್ನೂ ಓದಿ: Karnataka Budget 2023- ನೀರಾವರಿಗೆ ಯೋಜನೆಗೆ ಸಿಕ್ಕಿದ್ದು ಏನು?
Advertisement
Advertisement
ಗೃಹ ಜ್ಯೋತಿ
200 ಯುನಿಟ್ ವರೆಗಿನ ಗೃಹ ಬಳಕೆ ವಿದ್ಯುತ್ ಉಚಿತ. 2 ಕೋಟಿಗೂ ಹೆಚ್ಚು ಗ್ರಾಹಕರಿಗೆ ಅನುಕೂಲ. ವಾರ್ಷಿಕ 13,910 ಕೋಟಿ ರೂ. ವೆಚ್ಚ.
Advertisement
ಗೃಹ ಲಕ್ಷ್ಮಿ
ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ನೆರವು ನೇರ ವರ್ಗಾವಣೆ; 30,000 ಕೋಟಿ ರೂ. ವೆಚ್ಚ. ಇದನ್ನೂ ಓದಿ: Karnataka Budget 2023 – NEP ರದ್ದು, ಬರಲಿದೆ ರಾಜ್ಯದ್ದೇ ಹೊಸ ಶಿಕ್ಷಣ ನೀತಿ
Advertisement
ಅನ್ನ ಭಾಗ್ಯ
ಎಲ್ಲ ಅರ್ಹ ಫಲಾನುಭವಿಗಳಿಗೆ ಕೆ.ಜಿ. ಹೆಚ್ಚುವರಿ ಆಹಾರಧಾನ್ಯ ವಿತರಣೆ, ಆಹಾರಧಾನ್ಯ ಲಭ್ಯವಾಗುವವರೆಗೆ ಪ್ರತಿ ಫಲಾನುಭವಿಗೆ 170 ರೂ. ನಂತೆ ಡಿಬಿಟಿ ಮೂಲಕ ನಗದು ವರ್ಗಾವಣೆ, ವಾರ್ಷಿಕ 10,000 ಕೋಟಿ ರೂ. ವೆಚ್ಚ.
ಯುವನಿಧಿ:
ಯುವ ನಿಧಿ ಯೋಜನೆಯನ್ನು 2022-23ರಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣ ಸೇರಿದಂತೆ ಎಲ್ಲಾ ಪದವಿ ಪೂರೈಸಿದ ಯುವಕ ಯುವತಿಯರಿಗೆ ನೀಡಲು ತೀರ್ಮಾನಿಸಲಾಗಿದೆ. ನೋಂದಣಿ ಮಾಡಿಕೊಂಡ ದಿನದಿಂದ 2 ವರ್ಷದ ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡಲಾಗುತ್ತದೆ.
ಉಳಿದ 4 ಯೋಜನೆಗೆ ನಿಗದಿ ಮಾಡಿದಂತೆ ಈ ಯೋಜನೆಗೆ ಹಣ ಈಗ ನಿಗದಿ ಮಾಡಿಲ್ಲ. ಯೋಜನೆಗೆ ಕೌಶಲ್ಯಾಭಿವೃದ್ಧಿ ಇಲಾಖೆಗೆ ನೀಡಲಾಗಿರುವ ಅನುದಾನದಲ್ಲಿ ಬಳಕೆ ಮಾಡಲಾಗುತ್ತದೆ.
Web Stories