ಬೆಂಗಳೂರು: ರಾಜ್ಯದ ಸಮಗ್ರ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡದೇ, ರೈತರ ಸಾಲಾ ಯೋಜನೆಯನ್ನು ಹೆಚ್ಚಿನ ಸಂಖ್ಯೆಯ ರೈತರಿಗೆ ವಿಸ್ತರಿಸದೇ, ಯಥಾಸ್ಥಿತಿ ವಾದವನ್ನು ಪ್ರತಿಪಾದಿಸುವ ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್ ಎಂದು ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಕುರಿತು ಜೆಡಿಎಸ್ ಹಿರಿಯ ನಾಯಕ ಟಿ.ಎ ಶರವಣ ಗೇಲಿ ಮಾಡಿದ್ದಾರೆ.
Advertisement
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಇಲಾಖಾವಾರು ವಿವರ ನೀಡದೇ ಕೇವಲ ಅಂಕಿ ಅಂಶಗಳ ಚಮತ್ಕಾರ ಮಾಡುವ ಬಜೆಟ್ ಆಗಿದೆ. ಕೃಷಿ, ಕೈಗಾರಿಕೆ, ಸಮಾಜಕಲ್ಯಾಣ, ಶಿಕ್ಷಣ, ನೀರಾವರಿ, ಈ ಪ್ರಮುಖ ವಲಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದೇ, ಇರುವ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲಾಗಿದೆ ಟೀಕಿಸಿದ್ದಾರೆ. ಇದನ್ನೂ ಓದಿ: ಇದೊಂದು ನಿರಾಶಾದಾಯಕ ಬಜೆಟ್: ದಿನೇಶ್ ಗೂಳಿಗೌಡ
Advertisement
Advertisement
ವಿಧವೆಯರಿಗೆ ಮತ್ತು ವಯೋವೃದ್ಧರಿಗೆ ಹೆಚ್ಚಿಸಿರುವ ಪಿಂಚಣಿ, ಏನೇನೂ ಸಾಲದಾಗಿದ್ದು, ಕನಿಷ್ಠ ಒಂದು ಸಾವಿರ ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಅವರಿಗೆ ಹೆಚ್ಚಿಸಿರುವ ಗೌರವ ಕೂಡ, ಅತ್ಯಂತ ಕಡಿಮೆಯಾಗಿದ್ದು, ಸರಾಸರಿ 2 ಸಾವಿರ ರೂ. ಗಳನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಈ ಬಜೆಟ್ ನಲ್ಲಿ, ಸಿಕ್ಕಿರುವುದು ಬರೀ ಶೂನ್ಯ ಮಾತ್ರ. ಮೇಕೆದಾಟು ಯೋಜನೆಗೆ, ತುಂಗಭದ್ರಾ ಹೂಳೆತ್ತುವ ಯೋಜನೆ, ಮಹದಾಯಿ ಯೋಜನೆ, ಈ ಯೋಜನೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಹಣ ಕಣ್ಣೊರೆಸುವ ತಂತ್ರವಾಗಿದೆ. ಇದರಲ್ಲಿ 2 ಯೋಜನೆಗಳ ವಿವಾಧ ನ್ಯಾಯಾಲಯ ಮತ್ತು ಟ್ರಿಬ್ಯೂನಲ್ ನಲ್ಲಿದ್ದು, ಅವು ಇತ್ಯರ್ಥವಾಗುವವರೆಗೆ ಹಣ, ಬಿಡುಗಡೆ ಮಾಡಬೇಕಿಲ್ಲ ಎಂದು ಗೊತ್ತಿದ್ದರೂ, ಬಜೆಟ್‍ನಲ್ಲಿ ಹಣ ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಇದನ್ನೂ ಓದಿ: Karnataka Budget: ತವರು ಜಿಲ್ಲೆಗೆ 15 ಕಾರ್ಯಕ್ರಮಗಳನ್ನು ಘೋಷಿಸಿದ ಸಿಎಂ
Advertisement
ಬಿ ಖಾತೆಯನ್ನು ಎ ಖಾತೆಯನ್ನಾಗಿ ಬದಲಾಯಿಸವು ಕೈಗೊಂಡಿರುವಂತ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಯು ಸರಳೀಕರಣಗೊಳಿಸುವಂತೆ ಅವರು ಸರ್ಕಾರಕ್ಕೆ ವಿನಂತಿಸಿದ್ದಾರೆ. ಕಾರ್ಮಿಕರಿಗೆ, ಕೃಷಿ ಕೂಲಿಕಾರರಿಗೆ, ಸರ್ಕಾರದಿಂದ ಯಾವುದೇ ನೆರವು ಘೋಷಿಸಿಲ್ಲ ಎಂದು ವಿಷಾದಿಸಿದ್ದಾರೆ.