ಚಿಕ್ಕಮಗಳೂರು: ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಜಿಲ್ಲೆಯ ಶಾಸಕರ ನಿಯೋಗ ಮನವಿ ಸಲ್ಲಿಸಿದೆ.
ಸಿಟಿ ರವಿ, ಎಂ. ಕೆ ಪ್ರಾಣೇಶ್, ಎಂ.ಪಿ.ಕುಮಾರಸ್ವಾಮಿ, ಡಿ.ಎಸ್.ಸುರೇಶ, ಬೆಳ್ಳಿ ಪ್ರಕಾಶ್ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಡಿ.ಎನ್.ಜೀವರಾಜ್ ಅವರಿದ್ದ ನಿಯೋಗ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕೆಂಬುದು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದೆ ಎಂದು ಸಿಎಂ ಬಳಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನಿವಾಸದಲ್ಲಿ ಕಾಣಿಸಿಕೊಂಡ ಜೆಡಿಎಸ್ ಶಾಸಕ ಪುಟ್ಟರಾಜು
Advertisement
Advertisement
ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಅನುಕೂಲವಾಗುವಂತೆ ಮುಂಬರುವ ಬಜೆಟ್‍ನಲ್ಲಿ ಘೋಷಿಸಬೇಕು. ಮೂಡಿಗೆರೆ ಪಟ್ಟಣದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯವನ್ನು ತೋಟಗಾರಿಕೆ ವಿಶ್ವವಿದ್ಯಾಲಯ ಎಂದು ಘೋಷಿಸಬೇಕೆಂದೂ ಮನವಿ ಮಾಡಿದ್ದಾರೆ.
Advertisement
ಈ ಸಂದರ್ಭದಲ್ಲಿ ಜಿಲ್ಲೆಯ ಶಾಸಕ ಮಿತ್ರರು ಹಾಗೂ ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಶ್ರೀ ಎಂ. ಕೆ ಪ್ರಾಣೇಶ್, ಶಾಸಕರಾದ ಶ್ರೀ ಎಂ.ಪಿ.ಕುಮಾರಸ್ವಾಮಿ, ಶ್ರೀ ಡಿ.ಎಸ್.ಸುರೇಶ, ಶ್ರೀ ಬೆಳ್ಳಿ ಪ್ರಕಾಶ್ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಡಿ.ಎನ್.ಜೀವರಾಜ್ ಜೊತೆಗಿದ್ದರು.
2/2
— C T Ravi ???????? ಸಿ ಟಿ ರವಿ (@CTRavi_BJP) January 27, 2022
Advertisement
ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದಬೆ-ದಬೆ ಫಾಲ್ಸ್, ದತ್ತಪೀಠ, ಮಾಣಿಕ್ಯಾಧಾರಾ, ಹೊನ್ನಮ್ಮನಹಳ್ಳ ಈ ಎಲ್ಲಾ ಪ್ರವಾಸಿ ತಾಣಗಳನ್ನು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ದತ್ತಪೀಠ-ಮುಳ್ಳಯ್ಯನಗಿರಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅದಕ್ಕಾಗಿ ಮುಂಬರುವ 2022-23 ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ 10 ಕೋಟಿ ರೂ. ಅನುದಾನ ಘೋಷಿಸುವಂತೆ ನಿಯೋಗ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಮಗಳನ್ನು ಒಳ್ಳೆ ಶಾಲೆಗೆ ಸೇರಿಸಬೇಕೆಂದು ಎಟಿಎಂ ದರೋಡೆಗೆ ಯತ್ನಿಸಿದ ಕಾರ್ಮಿಕ
ಶಾಸಕರು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.