ಬೆಂಗಳೂರು: ತೆರಿಗೆ ಭಾರ, ಸಬ್ಸಿಡಿ ಖೋತಾ, ಮಠ ಮಾನ್ಯಗಳಿಗೆ ಅನುದಾನ ಕಟ್, ಇದು ಯಡಿಯೂರಪ್ಪ ಮಂಡಿಸಲಿರುವ ಬಜೆಟ್‍ನ ಹೈಲೈಟ್ಸ್ ಎನ್ನಲಾಗಿದೆ. ಇವತ್ತು ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಹಣಕಾಸು ಸಚಿವರಾಗಿರುವ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ.
ಹಣಕಾಸು ಸಚಿವರಾಗಿ 7ನೇ ಬಜೆಟ್ ಮಂಡಿಸುತ್ತಿರುವ ಯಡಿಯೂರಪ್ಪ ಕೃಷಿ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು, ಕೆಲ ವಸ್ತುಗಳಿಗೆ ತೆರಿಗೆ ಹಾಕಲಿದ್ದಾರೆ. ಹಣಕಾಸು ಪರಿಸ್ಥಿತಿ ತೀರಾ ಹದಗೆಡದಿದ್ದರೂ, ಬಿಗಿ ಪರಿಸ್ಥಿತಿ ಇರುವುದನ್ನ ಯಡಿಯೂರಪ್ಪ ಹಲವು ಸಂದರ್ಭಗಳಲ್ಲಿ ಒಪ್ಪಿಕೊಂಡಿದ್ದು, ಯಡಿಯೂರಪ್ಪ ಬಜೆಟ್ ಮೊದಲಿನಂತೆ ಧಾರಾಳತನ ಇರಲ್ಲ ಎನ್ನಲಾಗಿದೆ.
Advertisement
Advertisement
ಈ ಬಾರಿ ಮಠ ಮಾನ್ಯಗಳಿಗೆ ಪ್ರತ್ಯೇಕ ಅನುದಾನ ಇಲ್ಲ ಎನ್ನಲಾಗಿದ್ದು, ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರದ ಹಲವು ಹಳೆ ಯೋಜನೆಗಳು ಮುಂದುವರಿಸಲು ನಿರ್ಧಾರ ಮಾಡಿದ್ದಾರಂತೆ. ಕಳೆದ ಬಾರಿಗಿಂತ ಬಜೆಟ್ ಗಾತ್ರ 5% ರಿಂದ 7% ಮಾತ್ರ ಹೆಚ್ಚಳ ಸಾಧ್ಯತೆಯಿದ್ದು, 2 ಲಕ್ಷದ 46 ಸಾವಿರ ಕೋಟಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ರೈತರಿಗೆ 5 ಬಂಪರ್:
> ರೈತರ ಸಾಲದ ಮೇಲಿನ ಸುಸ್ತಿಬಡ್ಡಿ ಮನ್ನಾ
> ರೈತರಿಗೆ ಪ್ರತ್ಯೇಕವಾದ 1 ಸ್ಕೀಂ ಘೋಷಣೆ
> ಯಶಸ್ವಿನಿ ಯೋಜನೆ ಪುನಾರಂಭಿಸುವ ಬಗ್ಗೆ ಘೋಷಣೆ
> ಸಾವಯವ ಕೃಷಿ, ಭೂಚೇತನ ಕಾರ್ಯಕ್ರಮಕ್ಕೆ ವಿಶೇಷ ಪ್ಯಾಕೇಜ್
> ಮೋದಿ ಕನಸಿನ ರೈತರ ಆದಾಯ ದ್ವಿಗುಣಕ್ಕೆ ಯೋಜನೆ
Advertisement
ಮೇಜರ್ ಸ್ಕೀಂ ಪ್ರಕಟ:
> ಬಡವರಿಗೆ ಒಂದು ಬಂಪರ್ ಸ್ಕೀಂ ಘೋಷಣೆ
> ಅನ್ನಭಾಗ್ಯ ಜೊತೆ ದಿನಸಿ ಭಾಗ್ಯ ಘೋಷಣೆ
> ಗಾರ್ಮೆಂಟ್ಸ್ ಮಹಿಳಾ ನೌಕರರಿಗೆ ಉಚಿತ ಬಸ್‍ಪಾಸ್
> ಬಡಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ವಿಮೆ ಯೋಜನೆ ಸಾಧ್ಯತೆ
> ಶಾಸಕರ ನಿಧಿಯಿಂದಲೇ ದೆಹಲಿ ಮಾದರಿಯಲ್ಲಿ ಶಾಲೆಗಳ ಅಭಿವೃದ್ಧಿ
> ದೆಹಲಿ ಮೊಹಲ್ಲಾ ಕ್ಲಿನಿಕ್ ಮಾದರಿ ಸ್ಕೀಂ ಘೋಷಣೆ?
ಬಜೆಟ್‍ನಲ್ಲಿ ಬಿಗ್‍ಶಾಕ್:
> ಅಬಕಾರಿ ಸುಂಕ ಹೆಚ್ಚಳ
> ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಹೆಚ್ಚಳ
> ಅಕ್ರಮ ಭೂಒತ್ತುವರಿದಾರರಿಗೆ ಭಾರೀ ದಂಡ ಸಾಧ್ಯತೆ
> ಹೊಸ ಮರಳು ನೀತಿ ಜಾರಿ
ನೀರಾವರಿ ಯೋಜನೆಗೆ ಬಂಪರ್
> ನೀರಾವರಿ ಯೋಜನೆಗೆ ಬಂಪರ್ ಘೋಷಣೆ
> ಮಹದಾಯಿ ಯೋಜನೆಗೆ ವಿಶೇಷ ಪ್ಯಾಕೇಜ್
> ಹೊಸ ಜಲಾಶಯಗಳ ನಿರ್ಮಾಣದ ಬಗ್ಗೆ ಘೋಷಣೆ ಸಾಧ್ಯತೆ
> ಏತ ನೀರಾವರಿ ಯೋಜನೆಗಳ ಘೋಷಣೆ
> ಕೆರೆ ತುಂಬಿಸುವ ಯೋಜನೆಗಳ ಘೋಷಣೆ ಸಾಧ್ಯತೆ