ಬಿಬಿಎಂಪಿ
– 8015 ಕೋಟಿ ರೂ. ಅಂದಾಜು ವೆಚ್ಚದ ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ 2019-20ರಲ್ಲಿ 2,300 ಕೋಟಿ ರೂ. ಅನುದಾನ
– ಎಲಿವೇಟೆಡ್ ಕಾರಿಡಾರ್ ಯೋಜನೆಗೆ 2019-20ನೇ ಸಾಲಿನಲ್ಲಿ 1,000 ಕೋಟಿ ರೂ. ಅನುದಾನ.
– ಬೆಂಗಳೂರಿನಲ್ಲಿ 5 ಲಕ್ಷ ಬೀದಿ ದೀಪಗಳನ್ನು ಎಲ್ಇಡಿ ದೀಪಗಳಾಗಿ ಪರಿವರ್ತನೆ
– ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸಲು ಕ್ರಮ
– ಬೆಂಗಳೂರಿನಲ್ಲಿ ಕೆ.ಪಿ.ಸಿ.ಎಲ್ ವತಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ 400 ಮೆಟ್ರಿಕ್ ಟನ್ ಸಾಮರ್ಥ್ಯದ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪನೆ
– ಬೆಂಗಳೂರು ನಗರದಲ್ಲಿ “ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆ ನೀತಿ” ಜಾರಿ; 10,000 ವಾಹನಗಳ ನಿಲುಗಡೆಗೆ 87 ಆಯ್ದ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ
– 195 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳ ಮತ್ತು ಕೆ.ಆರ್.ಪುರಂ ಫ್ಲೈ ಓವರ್ ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ
– ಗೊರಗುಂಟೆಪಾಳ್ಯದಲ್ಲಿ ಹೊಸ ಅಂಡರ್ ಪಾಸ್ ನಿರ್ಮಾಣ
Advertisement
ಬೆಂಗಳೂರು ಸಬ್-ಅರ್ಬನ್ ರೈಲು ವ್ಯವಸ್ಥೆ
– 23,093 ಕೋಟಿ ರೂ. ಅಂದಾಜು ಮೊತ್ತದ ಬೆಂಗಳೂರು ಉಪ ನಗರ ರೈಲು ಸೇವೆ ಯೋಜನೆಗೆ ಚಾಲನೆ.
ವಿಶೇಷ ಉದ್ದೇಶಿತ ವಾಹಕ, ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲು ಕ್ರಮ
– ಹೆಬ್ಬಾಳ, ಬೈಯಪ್ಪನಹಳ್ಳಿ, ಕೆ.ಆರ್.ಪುರಂ, ಕಾಡುಗೋಡಿ, ಚಲ್ಲಘಟ್ಟ ಮತ್ತು ಪೀಣ್ಯ ಪ್ರದೇಶಗಳಲ್ಲಿ ಬಹುಮಾದರಿ ಪ್ರಯಾಣ
– ಬೆಂಗಳೂರಿನ ಪ್ರಮುಖ ಸ್ಥಳಗಳಾದ ಯಶವಂತಪುರ, ಬನಶಂಕರಿ, ವಿಜಯನಗರ, ಪೀಣ್ಯ ಮತ್ತು ಇತರೆ ಪ್ರದೇಶಗಳಲ್ಲಿ ಮೆಟ್ರೊ ರೈಲು ಮತ್ತು ಟಿಟಿಎಂಸಿಗಳ ಅಂತರ್ ಕ್ರಮ ಸಂಯೋಜನೆ ವಿನ್ಯಾಸ ಹಾಗೂ ಮೂಲಸೌಕರ್ಯ ಅಭಿವೃದ್ಧಿ.
– ಟೈರ್-2 ನಗರಗಳಲ್ಲಿ ಒಂದು ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆ ಜಾರಿ ಹಾಗೂ ಸುಧಾರಿತ ಸಂಚಾರ
– ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಬಗ್ಗೆ ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಕೆ ಪರಿಶೀಲನೆ
Advertisement
Advertisement
ಮೆಟ್ರೋ
– ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂ ಮತ್ತು ಹೆಬ್ಬಾಳ ಮಾರ್ಗವಾಗಿ ಹೊರ ವರ್ತುಲ ರಸ್ತೆ ವಿಮಾನ ನಿಲ್ದಾಣ ಮಾರ್ಗ ನಿರ್ಮಾಣ; 16,579 ಕೋಟಿ ರೂ. ಅನುದಾನ
– ಕೆಂಗೇರಿ ಮೆಟ್ರೋ ಜಾಲದ ಪಶ್ಚಿಮ ತುದಿ ವಿಸ್ತರಿಸಿ ಚಲ್ಲಘಟ್ಟದಲ್ಲಿ ಹೆಚ್ಚುವರಿ ನಿಲ್ದಾಣವನ್ನು ಸ್ಥಾಪಿಸಲಾಗುವುದು
Advertisement
ಬಿಡಿಎ
– 17,200 ಕೋಟಿ ರೂ. ವೆಚ್ಚದ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2019-20ನೇ ಸಾಲಿಗೆ 1,000 ಕೋಟಿ ರೂ. ಅನುದಾನ.
ಬೆಂಗಳೂರು ಜಲ ಮಂಡಳಿ
– ಬೆಂಗಳೂರಿನಲ್ಲಿರುವ ಜಲ ಸಂಪನ್ಮೂಲ ಬಳಸಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಹರಿಸುವ ಯೋಜನೆ;
– ಬಿಎಂಆರ್ ಡಿಎ ಪ್ರದೇಶದಲ್ಲಿ ಮಳೆನೀರು ಕೊಯ್ಲು, ಎಲ್ಲ ಕರೆ ಹಾಗೂ ನೀರು ನಿಲ್ಲುವ ತಾಣಗಳ ಸಂರಕ್ಷಣೆ, ತ್ಯಾಜ್ಯ ನೀರು ಮರುಬಳಕೆ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಪಕ್ಕ ಇರುವ ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಡಲು ಕ್ರಮ ಇದರಿಂದ 1400 ಎಂಎಲ್ಡಿ ನೀರು ಹೆಚ್ಚುವರಿಯಾಗಿ ಲಭ್ಯ. ಈ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ರಚನೆ; ಯೋಜನೆಗೆ 50 ಕೋಟಿ ರೂ. ಅನುದಾನ.
– ಜೈಕಾ ನೆರವಿನೊಂದಿಗೆ 5,550 ಕೋಟಿ ರೂ. ಗಳ ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತ ಅನುಷ್ಠಾನಕ್ಕೆ 2019-20ರಲ್ಲಿ 500 ಕೋಟಿ ರೂ. ಅನುದಾನ.
– ಬೆಂಗಳೂರು ನಗರದಲ್ಲಿ 914 ಸ್ಥಳಗಳಲ್ಲಿ ಮಳೆ ನೀರು ಚರಂಡಿಗೆ ತ್ಯಾಜ್ಯನೀರು ಸೇರುವುದನ್ನು ತಡೆಗಟ್ಟಲು 2 ವರ್ಷದಲ್ಲಿ 76.55 ಕೋಟಿ ರೂ. ಕಾಮಗಾರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv