ಬೆಂಗಳೂರು: ಹಲವು ಗೊಂದಲಗಳ ನಡುವೆಯೂ ಇಂದು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸಿದರು. ಸಿಎಂ ಬಜೆಟ್ ಮಂಡನೆ ಮಾಡಲು ಆರಂಭಿಸುತ್ತಿದ್ದಂತೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿ, ಕೊನೆಗೆ ಸಭಾತ್ಯಾಗ ಮಾಡಿ ಹೊರ ನಡೆದರು. ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ತವರು ಜಿಲ್ಲೆ ಹಾಸನ ಮತ್ತು ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರ ಇಲಾಖೆ ಮತ್ತು ಜಿಲ್ಲೆಗೂ ಭರಪೂರ ಅನುದಾನವನ್ನು ಸಿಎಂ ಬಜೆಟ್ ನಲ್ಲಿ ನೀಡಿದ್ದಾರೆ.
ಹಾಸನಕ್ಕೆ ಸಿಕ್ಕಿದ್ದೇನು..?
* ಬೆಳಗಾವಿ ವಿಟಿಯು ಮರುವಿಂಗಡಣೆ ಮಾಡಿ ಹಾಸನದಲ್ಲಿ ಹೊಸ ತಾಂತ್ರಿಕ ವಿದ್ಯಾಲಯ.
* ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ, ಹಾಸನ ಜಿಲ್ಲಾ ಕ್ರೀಡಾಂಗಣ ಸೌಲಭ್ಯ ಮೇಲ್ದರ್ಜೆಗೆ ಏರಿಕೆ.
* ಕೆಐಎಡಿಬಿಯಿಂದ ಹಾಸನ ಜಿಲ್ಲೆಯ ಅರಸೀಕೆರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ.
* ಅರಸೀಕೆರೆಯಲ್ಲಿ 200 ಬಂಧಿ ಸಾಮರ್ಥ್ಯದ ಉಪ ಕಾರಾಗೃಹ ನಿರ್ಮಾಣ.
* ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕುಗಳ ಹಳ್ಳಿಗಳಿಗೆ ಕಾಚೇನಹಳ್ಳಿ 3ನೇ ಹಂತದ ಏತ ನೀರಾವರಿ ಯೋಜನೆಗೆ 100 ಕೋಟಿ ರೂ.
Advertisement
Advertisement
* ಒಂಟಿಗುಡ್ಡ ಏತ ನೀರಾವರಿ ಯೋಜನೆಯ ನಾಲೆ ನಿರ್ಮಾಣಕ್ಕೆ 54 ಕೋಟಿ ರೂ.
* ಹೇಮಾವತಿ ನದಿಯಿಂದ ಹೊಳೆನರಸೀಪುರ ತಾ. ಚಾಕೇನಹಳ್ಳಿ ಕಟ್ಟೆಗೆ ಕೆರೆ ತುಂಬಿಸುವ ಯೋಜನೆ.
* ಹೇಮಾವತಿ ನದಿಯಿಂದ ಕುಡಿಯುವ ನೀರಿನ ಯೋಜನೆಗೆ 120 ಕೋಟಿ ರೂ.
* ಅರಕಲಗೂಡು ತಾಲೂಕಿನ 150 ಕೆರೆ ಹಾಗೂ 50 ಕಟ್ಟೆ ತುಂಬಿಸುವ ಯೋಜನೆ.
* ಯಗಚಿ ನದಿಯ ರಣಘಟ್ಟ ಪಿಕಪ್‍ನಿಂದ ನೀರು ಪಡೆದು ಬೇಲೂರು ಹೋಬಳಿಯ ದ್ವಾರಸಮುದ್ರ ಕೆರೆ, ಕರಿಕಟ್ಟೆಹಳ್ಳಿ ಕೆರೆ ಮತ್ತು ಇತರೆ ಕೆರೆಗಳನ್ನು ತುಂಬಿಸುವ ಯೋಜನೆಗೆ 100 ಕೋಟಿ ರೂ.
Advertisement
* ಎತ್ತಿನ ಹೊಳೆ ಕುಡಿಯುವ ನೀರಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅರಸೀಕೆರೆ ತಾಲೂಕಿನ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ 15 ಕೋಟಿ ರೂ.
* ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಬೇಲೂರು, ಅರಸೀಕೆರೆ ತಾಲೂಕುಗಳ ರಸ್ತೆಗಳ ಅಭಿವೃದ್ಧಿಗೆ 60 ಕೋಟಿ ರೂ.
* ಎತ್ತಿನಹೊಳೆ ಯೋಜನೆಯಡಿ ಸಕಲೇಶಪುರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ 12 ಕೋಟಿ ರೂ.
* ಹಾಸನ ವಿಮಾನ ನಿಲ್ದಾಣದ ಅಭಿವೃದ್ಧಿ
Advertisement
ಡಿಕೆ ಶಿವಕುಮಾರ್ ಅವರ ಇಲಾಖೆ ಹಾಗೂ ಜಿಲ್ಲೆಯೂ ಹೆಚ್ಚಿನ ಅನುದಾನ ಸಿಕ್ಕಿದೆ.
* ಜಲಸಂಪನ್ಮೂಲ ಇಲಾಖೆಗೆ 2019-20 ರಲ್ಲಿ ಒಟ್ಟು 17,212 ಕೋಟಿ ರೂ. ಅನುದಾನ.
* ಏತ ನೀರಾವರಿ ಯೋಜನೆಗಳಿಗೆ 1,563 ಕೋಟಿ ರೂ.
* ಕೆರೆ ತುಂಬಿಸುವ ಯೋಜನೆಗಳಿಗೆ 1,680 ಕೋಟಿ ರೂ.
* ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ 445 ಕೋಟಿ ರೂ.
* ನೀರಾವರಿ ಯೋಜನೆಗಳಿಗೆ 477 ಕೋಟಿ ರೂ.
* ಕಾಲುವೆ ಆಧುನೀಕರಣ-ಅಭಿವೃದ್ಧಿ ಕಾಮಗಾರಿಗಳಿಗೆ 860 ಕೋಟಿ ರೂ.
* ಬ್ರಿಡ್ಜ್ ಮತ್ತು ಬ್ಯಾರೇಜ್ ನಿರ್ಮಾಣ ಕಾಮಗಾರಿಗಳಿಗೆ 160 ಕೋಟಿ ರೂ.
* 506 ಕೋಟಿ ರೂ. ಹಾಗೂ ಮಂಚನಬೆಲೆ ಜಲಾಶಯ ಕೆಳಭಾಗದ ಉದ್ಯಾನವನ ಅಭಿವೃದ್ಧಿ
* ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಗೆ 125 ಕೋಟಿ ರೂ.
* ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರದ ಪುನಶ್ಚೇತನ ಕಾಮಗಾರಿಗಳಿಗೆ 75 ಕೋಟಿ ರೂ. ಅನುದಾನ ನಿಗದಿ.
* ರಾಮನಗರದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನಗಳ ಸಂಸ್ಕರಣ ಘಟಕ
* ರಾಮನಗರದಲ್ಲಿ ರೇಷ್ಮೆ ಮಾರುಕಟ್ಟೆಯ ಆಧುನೀಕರಣ ಮತ್ತು ಬಲವರ್ಧನೆ- 5 ಕೋಟಿ
* ಚನ್ನಪಟ್ಟಣದ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್‍ನ ಫಿಲೇಚರ್ ಜಾದಲ್ಲಿ ರೇಷ್ಮೆ ವಲಯದ ಸಾಧನೆಗಳ ಪ್ರದರ್ಶನ, ರೇಷ್ಮೆ ಉತ್ಪನ್ನಗಳ ಮಾರಾಟ-10 ಕೋಟಿ
* ಹಾರೋಹಳ್ಳಿ ತಾಲೂಕಾಗಿ ಘೋಷಣೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv