ಬೆಂಗಳೂರು: ಸಿಎಂ ಕುಮಾರಸ್ವಾಮಿ 2019-20ರ ಬಜೆಟ್‍ನಲ್ಲಿ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದಾರೆ. ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.150 ರಿಂದ ಶೇ.175ಕ್ಕೆ ಏರಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಕುಮಾರಸ್ವಾಮಿ ಕಳೆದ ಬಾರಿ ಮಂಡಿಸಿದ್ದ ಬಜೆಟ್ ನಲ್ಲಿ ಅಬಕಾರಿ ಇಲಾಖೆಗೆ 19,750 ಕೋಟಿ ರೂ.ನಷ್ಟು ಗುರಿ ನೀಡಲಾಗಿತ್ತು. 2019-20ನೇ ಆರ್ಥಿಕ ವರ್ಷಕ್ಕೆ 20,950 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ನೀಡಲಾಗಿದೆ. ಫೆ.14ರ ವೇಳೆಗೆ 17 ಸಾವಿರ ಕೋಟಿ ರೂ. ಸಂಗ್ರಹವಾಗಿದೆ.
ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಕಡಿಮೆ ಆಲ್ಕೋಹಾಲಿಕ್ ಬಿವರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಏರಿಸಲು ನಿರ್ಧರಿಸಿದೆ. ರೈತರ ಸಾಲ ಮನ್ನಾ ಮತ್ತಿತರ ವಲಯಗಳಿಗೆ ಸಂಪನ್ಮೂಲ ಸಂಗ್ರಹಕ್ಕಾಗಿ ಅಬಕಾರಿ ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗಿದ್ದು, ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಿದ್ದಾರೆ.
ಎಷ್ಟು ಅಬಕಾರಿ ಸುಂಕ ಹೆಚ್ಚಳ?
ಬಿಯರ್ ಮೇಲೆ ಹಾಲಿ ಶೇ.150 ಇದ್ದು ಶೇ.175ಕ್ಕೆ ಏರಿಕೆ.
ಡ್ರಾಟ್ ಬಿಯರ್ ಮೇಲೆ ಹಾಲಿ ಶೇ.115 ಅಬಕಾರಿ ಸುಂಕವಿದ್ದು, ಶೇ.150ಕ್ಕೆ ಏರಿಕೆ
ಮೈಕ್ರೊ ಬ್ರಿವರಿಯಲಿ ತಯಾರಾಗುವ ಬಿಯರ್ ಪ್ರತಿ ಲೀಟರ್ 5 ರೂ.ನಿಂದ 10 ರೂ.ಗೆ ಏರಿಕೆ
ಪ್ರತಿ ಲೀಟರ್ ಬಲ್ಕ್ ಬಿಯರ್ ಗೆ ಹೆಚ್ಚುವರಿ ಅಬಕಾರಿ ಶುಲ್ಕ 12.50 ರಿಂದ 25 ರೂ.ಗೆ ಹೆಚ್ಚಳ
ಲೋ ಆಲ್ಕೋಹಾಲಿಕ್ ಬಿವೆರೇಜಸ್ (ಎಲ್.ಎ.ಬಿ) ಹಾಲಿ ಇರುವ ಪ್ರತಿ ಬಲ್ಕ್ ಲೀಟರ್ 5 ರೂ. ನಿಂದ 10 ರೂ.ಗೆ ಏರಿಕೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv