ಬೆಂಗಳೂರು: ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ‘ರೈತಸಿರಿ’ ಯೋಜನೆ ಅಡಿ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ನಗದು ಪ್ರೋತ್ಸಾಹ ನೀಡಲಾಗುವುದು. ಇದಕ್ಕಾಗಿ 10 ಕೋಟಿ ರೂ. ಅನುದಾನ ನೀಡಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ
ಕೃಷಿಗೆ ಸಿಕ್ಕಿದ್ದು ಏನು?
– ಕೃಷಿ ಭಾಗ್ಯ ಯೋಜನೆಗೆ 250 ಕೋಟಿ ರೂ. ಅನುದಾನ. ಶೂನ್ಯ ಬಂಡವಾಳ ಕೃಷಿ ಯೋಜನೆಗೆ 40 ಕೋಟಿ ರೂ., ಸಾವಯವ ಕೃಷಿ ಯೋಜನೆಗೆ 35 ಕೋಟಿ ರೂ. ಅನುದಾನ
Advertisement
– ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹ, ಅರ್ಹ ಉದ್ದಿಮೆದಾರರು, ನವೋದ್ಯಮಿಗಳಿಗೆ ಶೇ. 50 ಪ್ರೋತ್ಸಾಹಧನ, 2 ಕೋಟಿ ರೂ. ಅನುದಾನ. ಇಸ್ರೇಲ್ ಮಾದರಿ ಕೃಷಿ ಯೋಜನೆಗೆ 145 ಕೋಟಿ ರೂ.
Advertisement
– ಮಳೆ ಹೆಚ್ಚು ಬೀಳುವ ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರೇರಣೆ – ಹೆಕ್ಟೇರ್ ಗೆ 7,500 ರೂ. ಪ್ರೋತ್ಸಾಹಧನ ನೀಡುವ ‘ಕರಾವಳಿ ಪ್ಯಾಕೇಜ್’ಗೆ 5 ಕೋಟಿ ರೂ. ಅನುದಾನ. ‘ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ’ ಗೆ 2019-20 ನೇ ಸಾಲಿನಲ್ಲಿ 368 ಕೋಟಿ ರೂ. ಅನುದಾನ.
Advertisement
Advertisement
– ರಾಜ್ಯದ ಅತಿ ಹೆಚ್ಚು ಬರಪೀಡಿತ ಹಾಗೂ ಅಂತರ್ಜಲ ಮಟ್ಟ ಕುಸಿದಿರುವ 100 ತಾಲ್ಲೂಕುಗಳಲ್ಲಿ 2024ರ ವರೆಗೆ ಬರನಿರೋಧಕ ಜಲಾನಯನ ಚಟುವಟಿಕೆ ಕೈಗೊಳ್ಳಲು 100 ಕೋಟಿ ಅನುದಾನ.
– ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯ ಉನ್ನತೀಕರಣ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದ ಅಭಿವೃದ್ದಿ ಕಾರ್ಯಗಳಿಗೆ ತಲಾ 5 ಕೋಟಿ ರೂ. ನಿಗದಿ. ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮಾ ಯೋಜನೆ ಜಾರಿಗೆ ತರುವ ಬಗ್ಗೆ ಪರಿಶೀಲನೆ.
– ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಸಂಸ್ಥೆ ಸ್ಥಾಪನೆಗೆ ಕ್ರಮ. 2019-20 ರಲ್ಲಿ 10 ಕೋಟಿ ರೂ. ಅನುದಾನ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv