ಬೆಂಗಳೂರು: ಕುಮಾರಸ್ವಾಮಿಯವರು ಬಜೆಟ್‍ನಲ್ಲಿ ಸಮಾಜ ಕಲ್ಯಾಣಕ್ಕೆ ಒಟ್ಟು 11,788 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ.
ಸಿಕ್ಕಿದ್ದು ಏನು?
ಗಂಗಾ ಕಲ್ಯಾಣ ಯೋಜನೆಯಡಿ ನಿಗದಿತ ಅವಧಿಯೊಳಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ 3 ವರ್ಷಗಳಲ್ಲಿ ಹಂತ-ಹಂತವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುವುದು ಮತ್ತು ಹಾಲಿ ಜಾರಿಯಲ್ಲಿರುವ ಸಹಾಯಧನ ಮಿತಿ 2.50 ಲಕ್ಷ ರೂ.ಗಳಿಗೆ ಹಾಗೂ 3.50 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
Advertisement
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿರುದ್ಯೋಗಿ 5,000 ಯುವಕ/ಯುವತಿಯರಿಗರ “ಸಾಮಾಜಿಕ ಉದ್ಯಮಶೀಲತಾ ಯೋಜನೆ”ಯಡಿ ಸರ್ಕಾರಿ ಮತ್ತು ಬ್ರಾಡೆಂಡ್ ಸಂಸ್ಥೆಗಳ ಸಹಯೋಗದೊಂದಿಗೆ ಆದಾಯ ತರುವ ಅರ್ಥಿಕ ಚಟುವಟಿಕೆಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಲು ಸರ್ಕಾರದಿಂದ ಗರಿಷ್ಟ 10 ಲಕ್ಷ ರೂ. ಆರ್ಥಿಕ ನೆರವು.
Advertisement
ವಿವಿಧ ಜೆಲ್ಲೆಗಳಲ್ಲಿ ಪ್ರಮುಖ ಕೈಗಾರಿಕಾ, ತಾಂತ್ರಿಕ ಮತ್ತು ಸೇವಾ ಕ್ಷೇತ್ರದ ಸಂಸ್ಥೆಗಳ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ 5,000 ನಿರುದ್ಯೋಗಿಗಳಿಗೆ 15 ಕೋಟಿ ರೂ. ವೆಚ್ಚದಲ್ಲಿ ಸ್ವ ಉದ್ಯೋಗಾಧಾರಿತ ತಾಂತ್ರಿಕ ತರಬೇತಿಗಳನ್ನು ನೀಡಲಾಗುವುದು.
Advertisement
ಹೈದ್ರಬಾದ್ ಕರ್ನಾಟಕ ಕಲಂ 371 (ಜೆ) ವ್ಯಾಪ್ತಿಗೆ ಬರುವ ಕಲಬುರಗಿ ನಗರದಲ್ಲಿ ಖಾಸಗಿ ತರಬೇತಿ ಕೇಂದ್ರಗಳ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಪದವೀಧರರಿಗೆ ಯು.ಪಿ.ಎಸ್.ಸಿ/ಕೆ.ಪಿ.ಎಸ್.ಸಿ ಬ್ಯಾಂಕಿಂಗ್ ಇತ್ಯಾದಿ ಸಂಸ್ಥೆಗಳಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.
Advertisement
“ಪ್ರಗತಿ ಕಾಲೋನಿ” ಯೋಜನೆ ರೂಪಿಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೋನಿ/ತಾಂಡಗಳನ್ನು ಹಂತ ಹಂತವಾಗಿ ಸಮಗ್ರ ಅಭಿವೃದ್ಧಿ ಪಡಿಸಲು ತಲಾ ಕನಿಷ್ಟ 1 ಕೋಟಿ ರೂ.ಗಳಿಂದ ಗರಿಷ್ಟ 5 ಕೋಟಿ ರೂ.ಗಳವರೆಗೆ ಅನುದಾನ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಪ್ರತಭಾನ್ವಿತ ಕ್ರೀಡಾಪಟುಗಳು ಆಯಾ ಕ್ರೀಡೆಗಳಲ್ಲಿ ಹೆಚ್ಚಿನ ಪ್ರಾವೀಣ್ಯತೆ ಪಡೆಯಲು ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ತರಬೇತಿ.
ಆಯ್ದ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡಗಳ ಮದರಿ/ನವಗ್ರಾಮಗಳ ನಿರ್ಮಾಣ ಕೈಗೊಳ್ಳಲಾಗುವುದು. ಅದರಲ್ಲಿ ಆದಿವಾಸಿ ಸಮುದಾಯಗಳಿಗೆ ಆದ್ಯತೆ ನೀಡಲಾಗುವುದು.
ಪರಿಶಿಷ್ಟ ಪಂಗಡದ ಯುವಕರು ಹಾಗೂ ನಿರುದ್ಯೋಗಿಗಳಿಗೆ ನೆರವಾಗಲು ಪ್ರವಾಸೋದ್ಯಮ, ಸಾರಿಗೆ, ಕೆಎಂಎಫ್ ಇತ್ಯಾದಿ ಇಲಾಖೆಗಳ ಸಹಯೋಗದೊಂದಿಗೆ ಟ್ಯಾಕ್ಸಿ, ಹೋಂ ಸ್ಟೇ ಇತರೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುವುದು.
ಭೂ ಒಡೆತನ ಯೊಜನೆಯಡಿ ಜಾಮೀನ್ನು ಪಡೆದ ರೈತರ ಮಹಿಳೆಯರ ಜಾಮೀನುಗಳಿಗೆ ಕೊಳವೆ ಬಾವಿ ಮತ್ತು ಕೃಷಿ ಯಂತ್ರೋಪಕರಣಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.
ರಾಜ್ಯದಲ್ಲಿ ಹಲವು ದಶಕಗಳಿಂದ ಹಿಂದುಳಿದ ಹಾಗೂ ಶೋಷಿತಗೊಂಡ ಹಲವಾರು/ಸಮುದಾಯಗಳಿದ್ದು, ಈ ವರ್ಗಗಳು ಸರ್ಕಾರದ ಹಲವಾರು ಯೋಜನೆಗಳಡಿಯಲ್ಲಿ ದೊರೆಯುವ ಯಾವುದೇ ಸೌಲಭ್ಯ/ಸವಲತ್ತುಗಳಿಂದ ವಂಚಿತವಾಗಿರುತ್ತದೆ. ಸಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಅತಿ ಸೂಕ್ಷ ಸಮುದಾಯಗಳಾಗಿರುತ್ತವೆ. ಆದ್ದರಿಂದ ಶಿಳ್ಳೇಕ್ಯಾತ, ದೊಂಬಿದಾಸ, ಗೌಳಿ, ಹೆಳವ, ಶಿಕಾರಿಗಳು, ಹಾವಾಡಿಗ, ಕಂಚುಗಾರ, ಕಮ್ಮಾರ, ದರ್ಜಿ, ದೇವಡಿಗ, ಬುಡಬುಡಿಕೆ, ತಗಲ, ಬಡಿಗೆ, ಹಟ್ಗಾರ, ಕರೆಒಕ್ಕಲಿಗ ಇತ್ಯಾದಿ ಸಮಾಜಗಳ ಅಭಿವೃದ್ಧಿಗೆ 10 ಕೋಟಿ ರೂ.ಗಳ ಅನುದಾನವನ್ನು ಮೀಸಲು.