ಬೆಂಗಳೂರು: 2018-19ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಗೆ 995 ಕೋಟಿ ರೂ.ಗಳನ್ನು ಸಿದ್ದರಾಮಯ್ಯ ಬಜೆಟ್ ನಲ್ಲಿ ಮೀಸಲಿಟ್ಟಿದ್ದಾರೆ.
ಹೊಸ ಯೋಜನೆಗಳು
ಪ್ರಸಕ್ತ ವರ್ಷದಲ್ಲಿ ಅಪರೂಪದ (ಎಕ್ಸಾಟಿಕ್) ಹಣ್ಣುಗಳಾದ ಪ್ಯಾಷನ್ ಹಣ್ಣು, ರಾಂಬೂತಾನ್, ದುರಿಯನ್, ಡ್ರಾಗನ್ ಹಣ್ಣು, ಲಿಚ್ಚಿ, ಮ್ಯಾಂಗೋಸ್ಟೀನ್, ಆಪಲ್ ಬರ್, ಬೆಣ್ಣೆಹಣ್ಣು, ನೇರಳೆ, ಸ್ಟ್ರಾಬೆರಿ ಇತ್ಯಾದಿ. ಹಾಗೂ ಹೊಸ ಮತ್ತು ಬೀಜ ರಹಿತ ಸೀತಾಫಲ ಮತ್ತು ಸೀಬೆಯ ಆಯವ್ಯಯ 2018-19 19 ತಳಿಗಳನ್ನು ಬೆಳೆಯಲು ಕೇಂದ್ರ ಪುರಸ್ಕೃತ ಹಾಗೂ ರಾಜ್ಯವಲಯ ಯೋಜನೆಗಳಡಿ ಪ್ರಾಧಾನ್ಯತೆ ನೀಡಿ ಉತ್ತೇಜನ ನೀಡಲಾಗುವುದು.
ರಾಸಾಯನಿಕ ಔಷಧಿಗಳ ಸಿಂಪರಣೆಯನ್ನು ಕಡಿತಗೊಳಿಸಲು ಹಾಗೂ ತೋಟಗಾರಿಕೆ ಬೆಳೆಗಳನ್ನು ಕೀಟ ಮತ್ತು ರೋಗಗಳಿಂದ ರಕ್ಷಿಸಿ ಅಧಿಕ ಇಳುವರಿ ಪಡೆಯಲು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ಸಮಗ್ರ ಪೀಡೆ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆಗಾಗಿ ರೈತರಿಗೆ ನೆರವು ನೀಡಲಾಗುವುದು. ಈ ಉದ್ದೇಶಕ್ಕಾಗಿ 2018-19ನೇ ಸಾಲಿಗೆ 10 ಕೋಟಿ ರೂ. ಅನುದಾನ ನೀಡಲಾಗುವುದು.
ನಗರ ಮತ್ತು ನಗರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟೊಮ್ಯಾಟೋ, ದಪ್ಪ ಮೆಣಸಿನಕಾಯಿ, ಬದನೆ ಮತ್ತು ಸೊಪ್ಪು-ತರಕಾರಿ ಬೆಳೆಗಳನ್ನು ಬೆಳೆಯಲು ಹೈಡ್ರೋಪೋನಿಕ್ಸ್ (Hydroponic) ತಂತ್ರಜ್ಞಾನದ ಉಪಯೋಗವನ್ನು ಉತ್ತೇಜಿಸಲಾಗುವುದು.
ಕಳೆದ 3 ವರ್ಷಗಳಿಂದ ಸತತ ಬರ ಪರಿಸ್ಥಿತಿಯಿಂದ ತೆಂಗಿನ ತೋಟಗಳು ಹಾನಿಗೊಳಗಾಗಿವೆ. ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ಮುಂದಿನ 5 ವರ್ಷಗಳಲ್ಲಿ ಸಮಗ್ರ ನಿರ್ವಹಣಾ ಪದ್ಧತಿಯನ್ನು ಅನುಸರಿಸುವ ಸಲುವಾಗಿ, ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಮತ್ತು ಮರುನಾಟಿ ಮೂಲಕ ಈ ತೋಟಗಳನ್ನು ಪುನಶ್ಚೇತನಗೊಳಿಸಲಾಗುವುದು. ಇದನ್ನು ಓದಿ: ರಾಜ್ಯ ಬಜೆಟ್ 2018- ಸಾಲ ಮನ್ನಾ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ