ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಈಗಾಗಲೇ 34 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲಾಗಿದ್ದು, ಒಟ್ಟಾರೆಯಾಗಿ ಕೃಷಿ ವಲಯಕ್ಕೆ ಬಜೆಟ್‍ನಲ್ಲಿ ಸಿಕ್ಕಿರುವ ಮಾಹಿತಿ ಈ ಕೆಳಗಿನಂತಿದೆ.
ಕೃಷಿಗೆ –
1. ಕೋಲಾರ, ಚಿತ್ರದುರ್ಗ, ಕೊಪ್ಪಳ, ಮತ್ತು ಗದಗ ಮೊದಲ ಹಂತದಲ್ಲಿ ತಲಾ 500 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ಮೀಸಲು.
2.ಆಂಧ್ರ ಪ್ರದೇಶ ಸರ್ಕಾರವು ಜಾರಿಗೊಳಿಸುತ್ತಿರುವ ಶೂನ್ಯ ಬಂಡವಾಳ ಸಹಜ ಕೃಷಿ ಪದ್ದತಿಯನ್ನು ರಾಜ್ಯದ ರೈತರು ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯ. ಈ ಯೋಜನೆಗಾಗಿ 50 ಕೋಟಿ ರೂ. ಮೀಸಲು
3. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಹಾಗು ಕೃಷಿ ಸಂಬಂಧಿತ ಇಲಾಖೆಗಳ ಸಚಿವರನ್ನೊಳಗೊಂಡ ಕೃಷಿ ಸಮನ್ವಯ ಉನ್ನಯ ಸಮಿತಿಯ ರಚನೆ. ಈ ಸಮಿತಿಯಿಂದ ಮೂರು ತಿಂಗಳಿಗೊಮ್ಮೆ ಸಭೆ
4. ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಮಾಡಲು ಸರ್ಕಾರದಿಂದ ಪ್ರಯತ್ನ.
Advertisement
5. ರೈತರ ಸಂಘಟನೆ ಹಾಗು ಸಾಮಥ್ರ್ಯ ಬಲವರ್ಧನೆ ಮಾಡಲು ರಾಜ್ಯದ ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಓ)ನೀತಿ ಜಾರಿ.
6. ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮಾರ್ಗಸೂಚಿಯಂತೆ ಸೂಕ್ತ ಯೋಜನೆಗಳಿಗೆ ಮಂಜೂರಾತಿ. ಸಿರಿಧಾನ್ಯ, ಬೇಳೆಕಾಳುಗಳು, ಎಣ್ಣೆ ಕಾಳುಗಳು, ಮುಸುಕಿನ ಜೋಳ ಇತ್ಯಾದಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ
Advertisement
7. ಪರಿಸರ ಸ್ನೇಹಿ ಡಿಟರ್ಜಂಟ್ ಉದ್ಯಮದ ಅವಕಾಶಕ್ಕೆ ಸಹಾಯ. ಅಂಟುವಾಳ ಕಾಯಿ ಆಧಾರಿತ ಅನುಕೂಲವಾಗುವಂತೆ ಅಂಟುವಾಳ ಕಾಯಿ ಮರಗಳ ವ್ಯಾಪಕ ಬೇಸಾಯಕ್ಕಾಗಿ ಕಾರ್ಯಕ್ರಮ ಅನುಷ್ಠಾನ. ಕಾರ್ಯಕ್ರಮಕ್ಕಾಗಿ 10 ಕೋಟಿ. ರೂ.ನಿಗದಿ
8. ಪರಿಶುದ್ಧ ಎಣ್ಣೆಯ ಮಾರಾಟಕ್ಕಾಗಿ ನಂದಿನಿ ಮತ್ತು ಇ-ಮಾರ್ಕೆಟಿಂಗ್ ಯೋಜನೆಗಳನ್ನು ಅನುಷ್ಠಾನಗೊಳಿಸಲು 5 ಕೋಟಿ ರೂ. ಮೀಸಲು.
Advertisement
9. ರೈತರಿಗೆ ತಂತ್ರಜ್ಞಾನ ಪರಿಚಯಪಡಿಸಲು ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ 3 ಕೋಟಿ ರೂ.
10. ಡ್ರೋಣ್‍ಗಳನ್ನು ಬಳಸಿ ಬೆಳೆ ಪರಿಸ್ಥಿತಿಯ ಮಾಹಿತಿ, ನೀರಾವರಿಯಲ್ಲಿ ಸೆನ್ಸರ್ ಸೇರಿದಂತೆ ಹಲವು ನವೋದ್ಯಮಗಳು ಹೊಸ ಅವಿಷ್ಕಾರಗಳಿಗೆ ಉತ್ತೇಜನ.
Advertisement