ಉಡುಪಿ: ಜನರು 7 ಕೆಜಿ ತೂಕವನ್ನು ಹೊತ್ತುಕೊಂಡು ಹೋಗಲು ಸಮಸ್ಯೆ ಎದುರಿಸುವ ಕುರಿತು ವರದಿಯಾದ ಕಾರಣ ಸರ್ಕಾರ ಬಜೆಟ್ ನಲ್ಲಿ 5 ಕೆಜಿ ಅಕ್ಕಿ ಮಾತ್ರ ನೀಡಲು ಮುಂದಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿದ್ದಾರೆ. 7 ಕೆಜಿ ಭಾರ ಹೊರಲು ಆಗದ ಕಾರಣ ಸರ್ಕಾರದ 5 ಕೆಜಿ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಇಲಾಖೆಯಲ್ಲಿ ವರದಿ ಬಂದಿರುತ್ತದೆ. ಆದರೆ ಈ ಬಾರಿ ಸಕ್ಕರೆ ಪ್ರಮಾಣವನ್ನು 1 ಕೆಜಿ ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ವೆ ಮಾಡಿ ಈ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.
Advertisement
Advertisement
ಹಿಂದುತ್ವ ಪರ ಬಜೆಟ್: ಸಿಎಂ ಕುಮಾರಸ್ವಾಮಿ ಹಿಂದೂ ಪರ ಇದ್ದು, ಬ್ರಾಹ್ಮಣ ಅಭಿವೃದ್ದಿ ಮಂಡಳಿ ರಚಿಸಿ 25 ಕೋಟಿ ರೂ ನೀಡಿದ್ದಾರೆ. ಹಿಂದುಳಿದ ಮಠಗಳಿಗೂ ವಿಶೇಷ ಅನುದಾನ ನೀಡಲಾಗಿದೆ. ಅಲ್ಲದೇ ಕೆಲ ಹಿಂದುಗಳಿದ ಮಠಗಳಿಗೂ ಅನುದಾನ ನೀಡಿದ್ದಾರೆ. ಅವರ ಕಾರ್ಯ ಮೆಚ್ಚುವಂತಹದ್ದು ಎಂದು ತಿಳಿಸಿದರು.
Advertisement
ಬಿಜೆಪಿ ವಿರುದ್ಧ ವಾಗ್ದಾಳಿ, ಸಿಎಂ ಕುಮಾರಸ್ವಾಮಿ ಅವರ ಬಜೆಟ್ ಕುರಿತು ಬಿಜೆಪಿ ಶಾಸಕರು ನೀಡಿದ್ದ ಹೇಳಿಕೆಗೆ ಮಜಿ ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದು, ಕರಾವಳಿ ಶಾಸಕರಿಗೆ ಸಾಮಾನ್ಯ ಪರಿಜ್ಞಾನವಿಲ್ಲ. ಬಜೆಟ್ ಪುಸ್ತಕ ಪ್ರಿಂಟ್ ಹೋಗುವ ವೇಳೆ ಬೇಡಿಕೆ ಪಟ್ಟಿ ತೆಗೆದುಕೊಂಡು ಹೋಗುತ್ತಾರೆ. ಬಿಜೆಪಿ ಶಾಸಕರ ಅಸಡ್ಡೆ ಎದ್ದು ಕಾಣುತ್ತದೆ. ಪ್ರಚಾರಕ್ಕಾಗಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ಏನು ಕೊಡುಗೆ ನೀಡಿದೆ? ಉಡುಪಿ ಜಿಲ್ಲೆಗೆ ಮೋದಿ ದೊಡ್ಡ ಕೊಡುಗೆ ಏನು ನೀಡಿಲ್ಲ. ಹೀಗಾಗಿ ಕರಾವಳಿ ಶಾಸಕರಿಗೆ ರಾಜ್ಯದ ಬಜೆಟ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
Advertisement
https://www.youtube.com/watch?v=1hOAPp7fbjw