ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯ ಕೊನೆಯ ಬಜೆಟ್ ನ್ನು ಇಂದು ಮಂಡಿಸಿದರು. ಚುನಾವಣೆಯನ್ನು ದೃಷ್ಟಿಯಲ್ಲಿಯೇ ಬಜೆಟ್‍ನ್ನು ಮಂಡಿಸಲಾಗಿದೆ ಎಂದು ರಾಜಕೀಯ ಪಂಡಿತರು ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಒಟ್ಟಾರೆಯಾಗಿ 247 ಕೋಟಿ ರೂ.ಗಳನ್ನು ಅನುದಾನವನ್ನು ಮೀಸಲಿರಿಸಲಾಗಿದೆ.
ರಾಜ್ಯದಲ್ಲಿ ನವೋದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಕಲಬುರಗಿಯಲ್ಲಿ ದೇಶ್‍ಪಾಂಡೆ ಫೌಂಡೇಷನ್‍ರವರ ಸಹಯೋಗದೊಂದಿಗೆ ಒಂದು ಇನ್‍ಕ್ಯೂಬೇಷನ್ ಸೆಂಟರ್ ಅನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ.
Advertisement
ಹಾರ್ಡ್‍ವೇರ್ ಉಪಕರಣಗಳು ಮತ್ತು ಸೆಮಿಕಂಡಕ್ಟರ್ ಚಿಪ್‍ಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು India Electronics and Semiconductor Association (IESA) ಸಹಯೋಗದೊಂದಿಗೆ Semiconductor fabless Accelerator Lab (SFAL)ನ್ನು ಸ್ಥಾಪನೆ.
Advertisement
Advertisement
ಕೃಷಿ ವಲಯದಲ್ಲಿ ವಿಶ್ವಾಸಪೂರ್ವಕ ನವೀನ ಆವಿಷ್ಕಾರಗಳನ್ನು ಉತ್ತೇಜಿಸುವ ಹಾಗೂ ಪೋಷಿಸುವ ಸಲುವಾಗಿ ಕೇಂದ್ರ ಸರ್ಕಾರದ ಸಂಸ್ಥೆಯಾದ Centre for Cellular and Molecular Platforms (C-CAMP)ನ ಸಹಯೋಗದೊಂದಿಗೆ ಅಗ್ರಿ-ಇನ್ನೋವೇಷನ್ ಕೇಂದ್ರವೊಂದನ್ನು ಸ್ಥಾಪನೆ. ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ನಾವಿನ್ಯತೆಯನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ನಾವೀನ್ಯತಾ ಪ್ರಾಧಿಕಾರ’ Karnataka Innovation Authority (KIA)ವನ್ನು ಸ್ಥಾಪನೆ.
Advertisement
ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು/ ಉದ್ದಿಮೆಗಳು/ ನವೋದ್ಯಮಗಳನ್ನು ವಿಶೇಷ ಗಮನದಲ್ಲಿ ಇಟ್ಟುಕೊಂಡು ಉತ್ಪನ್ನ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಐಪಿ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ಹೊಸ ಯೋಜನೆಯನ್ನು ಪ್ರಾರಂಭ. ಪೇಟೆಂಟ್‍ಗಳ ವಿವರಗಳನ್ನು ಒಂದೆಡೆ ಸಂಗ್ರಹಿಸಿ ತಾಳೆ ನೋಡಲು ಹಾಗೂ ಪೇಟೆಂಟ್ ವಿನಿಮಯಕ್ಕೆ ಅನುಕೂಲವಾಗುವಂತೆ ಪೇಟೆಂಟ್‍ಗಳ ಭಂಡಾರವನ್ನು ಸೃಜನೆಗೆ ನಿಧಿ ಮೀಸಲು. ಇದು ನಾವಿನ್ಯತೆಯನ್ನು ಉತ್ತೇಜಿಸಲು ನೆರವಾಗಲಿದೆ. ಉದ್ಯಮಗಳ ವಿನ್ಯಾಸ ಹಾಗೂ ಉತ್ಪನ್ನಗಳ ವಿನ್ಯಾಸವನ್ನು ಉತ್ತೇಜಿಸುವ ಉದ್ದೇಶದಿಂದ ‘ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಡಿಸೈನ್’ಅನ್ನು ಸ್ಥಾಪನೆ. ಸೂಕ್ತ ಕಾನೂನು ಜಾರಿಯಾಗುವವರೆಗೆ ಹೊಸ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳನ್ನು ಕಾನೂನಿನ ಚೌಕಟ್ಟಿನೊಳಗೆ ತರುವ ಉದ್ದೇಶದಿಂದ ‘ಲೀಗಲ್ ಫ್ರೇಮ್‍ವರ್ಕ್ ಫಾರ್ ಇನ್ನೊವೇಶನ್’ಅನ್ನು ಸ್ಥಾಪಿಸಲಾಗುವುದು. ಇದರಿಂದ ಅಂತಹ ತಂತ್ರಜ್ಞಾನಗಳನ್ನು ರಾಜ್ಯದಲ್ಲಿ ಅಳವಡಿಸಲು ಅನುಕೂಲವಾಗಲಿದೆ.
ದೀರ್ಘ ಅವಧಿಯ ಹೆರಿಗೆ ರಜೆ ಅಥವಾ ವ್ಯಾಸಂಗ ರಜೆಯಲ್ಲಿ ತೆರಳುವ ಐಟಿ ವಲಯದ ಮಹಿಳೆಯರು ಮತ್ತೆ ಉದ್ಯೋಗ ಕೈಗೊಳ್ಳಲು ಆತ್ಯಾಧುನಿಕ ತಂತ್ರಜ್ಞಾನದ ಕೌಶಲ್ಯದ ಕೊರತೆ ಅಡ್ಡಿಯಾಗುತ್ತಿರುವುದು ಕಂಡುಬಂದಿದೆ. ಇಂತಹ ಮಹಿಳೆಯರಿಗೆ ನೆರವಾಗಲು ಅವರ ಕೌಶಲ್ಯ ಅಭಿವೃದ್ಧಿಗೆ ನಿರ್ದಿಷ್ಟ ಕಾರ್ಯಕ್ರಮಗಳ ರಚನೆ. ವಿಜ್ಞಾನ ಮತ್ತು ಎಂಜಿನಿಯರಿಂಗ್‍ನ ಪಿ.ಹೆಚ್.ಡಿ. ಸಂಶೋಧಕರಿಗೆ ಡಿ.ಎಸ್.ಟಿ. ಶಿಷ್ಯವೇತನವನ್ನು ಪ್ರಾರಂಭಿಸಲು 1 ಕೋಟಿ ರೂ. ಅನುದಾನ.
ಬೆಳಗಾವಿಯಲ್ಲಿ 3 ಕೋಟಿ ರೂ.ಗಳ ವೆಚ್ಚದಲ್ಲಿ ಮಿನಿ 3-ಡಿ ತಾರಾಲಯವನ್ನು ನಿರ್ಮಾಣ. 2018-19ನೇ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಒಟ್ಟಾರೆಯಾಗಿ 247 ಕೋಟಿ ರೂ. ಹಣ ಮೀಸಲು.