ಬೆಂಗಳೂರು: ಮಾರ್ಚ್ 15ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಮಾರ್ಚ್ 15 ರಿಂದ 28ರ ತನಕ ಬಜೆಟ್ ಅಧಿವೇಶನ ನಡೆಸಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕ್ಯಾಬಿನೆಟ್ ಬಳಿಕ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು. ಈ ವೇಳೆ ಎಸ್‍ಸಿ, ಎಸ್‍ಟಿ ಬಡ್ತಿ ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಸುಪ್ರೀಂ ಕೋರ್ಟ್ ತೀರ್ಪಿನ ಸಂಪೂರ್ಣ ಅಧ್ಯಯನದ ಬಳಿಕ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.
Advertisement
ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿ 27 ಕೋಟಿ ರೂಪಾಯಿ ವೆಚ್ಚದಲ್ಲಿ ವಿಂಡ್ಸರ್ ಮ್ಯಾನರ್‍ನಿಂದ ಹೆಬ್ಬಾಳದ ಕಡೆಗೆ 2 ಕಿಮೀ ರಸ್ತೆ ಅಗಲೀಕರಣಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಹೇಳಿದರು.
Advertisement
ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆಯಕಲ್ಲಿ ಮಾರ್ಚ್ ವೇಳೆಗೆ ಮೇವಿನ ಕೊರತೆಯಾಗುವ ಮುನ್ಸೂಚನೆ ಸಿಕ್ಕಿದೆ. ನೆರೆರಾಜ್ಯಗಳಲ್ಲೂ ಮೇವಿನ ಅಭಾವವಿದ್ದು, ಅಲ್ಲಿದ್ದ ಬರುತ್ತಿದ್ದ ಮೇವು ಸ್ಥಗಿತಗೊಂಡಿದೆ, ಹೀಗಾಗಿ ಮೇವಿಗಾಗಿ ಇತರ ರಾಜ್ಯಗಳಲ್ಲಿ ಸಹಾಯ ಕೇಳಲಾಗುವುದು ಎಂದು ಹೇಳಿದರು.
Advertisement
362 ಗೆಜೆಟೆಡ್ ಪ್ರೊಬೇಷನರಿ ಮರು ನೇಮಕಾತಿಗೆ ಸಂಬಂಧಿಸಿದಂತೆ ಕೆಎಟಿ ಆದೇಶಕ್ಕೆ ಸಂಬಂಧಿಸಿದಂತೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಕೆಎಟಿ ಆದೇಶ ಮಾನ್ಯ ಮಾಡಲು ಸಿಎಂ ಮುಂದಾಗಿದ್ದರು. ಆದರೆ ಈ ಕುರಿತು ಸಂಪೂರ್ಣ ಮಾಹಿತಿಯ ಕೊರತೆ ಇರುವ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಹಿನ್ನೆಲೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ, ತಿರ್ಮಾನ ಮಾಡಲಾಗುವುದು ಎಂದು ತಿಳಿಸಿದರು.