Bengaluru City

2017-18ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಕೃಷಿಗೆ 5,080 ಕೋಟಿ ರೂ. ಅನುದಾನ ಪ್ರಕಟ

Published

on

2017-18ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಕೃಷಿಗೆ 5,080 ಕೋಟಿ ರೂ. ಅನುದಾನ ಪ್ರಕಟ
Share this

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇಂದು ವಿಧಾನಸಭೆಯಲ್ಲಿ 2017-18ನೇ ಸಾಲಿನ ಬಜೆಟ್ ಮಂಡಿಸಿದ್ದು, ಕೃಷಿಗೆ 5,080 ಕೋಟಿ ರೂ. ಅನುದಾನವನ್ನು ಪ್ರಕಟಿಸಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು

– ಕೃಷಿ ಭಾಗ್ಯ ಯೋಜನೆ ಕರಾವಳಿ, ಮಲೆನಾಡು ಪ್ರದೇಶಗಳ ಎಲ್ಲಾ ತಾಲೂಕುಗಳಿಗೆ ವಿಸ್ತರಣೆ – 600 ಕೋಟಿ
– ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ – 31.5 ಲಕ್ಷ ಹೆಕ್ಟೇರ್ ಪ್ರದೇಶ ವಿಸ್ತರಣೆ
– ಹನಿ, ತುಂತುರು ನೀರಾವರಿ ಘಟಕಕ್ಕೆ ಸಹಾಯ ಧನ – 375 ಕೋಟಿ
– ಕೃಷಿ ಯಂತ್ರಧಾರೆ ಕಾರ್ಯಕ್ರಮ ಹೋಬಳಿಗೆ ವಿಸ್ತರಣೆ – 122 ಕೋಟಿ
– ಕೃಷಿಯಲ್ಲಿ ಯಂತ್ರೋಪಕರಣ ಬಳಕೆಗೆ ಉತ್ತೇಜನ – ರೈತರ ಖಾತೆಗೆ ಪ್ರೋತ್ಸಾಹ ಧನ – 100 ಕೋಟಿ
– ಗ್ರಾಮೀಣ ಯುವಕರನ್ನು ಕೃಷಿಗೆ ಸೆಳೆಯಲು ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರ ಸ್ಥಾಪನೆ – 10 ಕೋಟಿ

ತೋಟಗಾರಿಕೆ ಇಲಾಖೆಗೆ 1,091 ಕೋಟಿ ರೂ. ಅನುದಾನ:

– ತೋಟಗಾರಿಕೆ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆ ಅನುಷ್ಠಾನ – 200 ಕೋಟಿ
– ರೈತರಿಗೆ ಉತ್ತಮ ಗುಣಮಟ್ಟದ ಸಸಿ ನೆಡುವ ಸಾಮಗ್ರಿ ಒದಗಿಸಲು 5 ಕೋಟಿ
– ಗೇರು ಅಭಿವೃದ್ಧಿ ಮಂಡಳಿ – 10 ಕೋಟಿ
– ತೆಂಗಿನ ತೋಟ ಪುನಶ್ಚೇತನ, ಉತ್ಪಾದನೆ ಹೆಚ್ಚಳಕ್ಕೆ 10 ಕೋಟಿ
– ಮಾವಿನ ತೋಟ ಪುನಶ್ಚೇತನ – 10 ಕೋಟಿ
– ರಾಜ್ಯಾದ್ಯಂತ 100 ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಮಾಗಿಸುವ ಸೌಲಭ್ಯ – 10 ಕೋಟಿ
– ಹನಿ ನೀರಾವರಿ ಯೋಜನೆಗೆ ಶೇ 90 ರಷ್ಟು ಸಹಾಯಧನ, 35 ಸಾವಿರ ರೈತರಿಗೆ ಯೋಜನೆಯ ಪ್ರಯೋಜನ- 233 ಕೋಟಿ
– ರೈತರಿಗೆ ನೀರಿನ ಟ್ಯಾಂಕ್ ಖರೀದಿಗೆ ಶೇ 50 ರಷ್ಟು ಪ್ರೋತ್ಸಾಹ ಧನ

ಪಶು ಸಂಗೋಪನೆ ಇಲಾಖೆಗೆ 2,245 ಕೋಟಿ ರೂ. ಅನುದಾನ:

– 1512 ಪಶುವೈದ್ಯಕೀಯ ಕೇಂದ್ರಗಳು, ಪಶುಚಿಕಿತ್ಸಾಲಯ ಮೇಲ್ದರ್ಜೆಗೆ
– ಪ್ರಮಾಣೀಕೃತ ಉತ್ಕೃಷ್ಟ ಟಗರು ತಳಿ ಉತ್ಪಾದಕ ಘಟಕ ಸ್ಥಾಪನೆ, ಹತ್ತುಸಾವಿರ ಕುರಿಮರಿಗಳ ಬೆಳೆಸೋದಕ್ಕೆ, ವರ್ಷ ಪೂರ್ತಿ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುವುದು.
– ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿಗಳ ಸಹಕಾರದಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣ- 2.75 ಕೋಟಿ
– ಮಾಂಸದಂಗಡಿಗೆ ಸಹಾಯಧನ ಪ್ರತಿ ಅಂಗಡಿಗೆ 1.25 ಲಕ್ಷ ಸಹಾಯಧನ
– 40 ಉಣ್ಣೆ ಮತ್ತು ಚರ್ಮ ಗೋದಾಮು ನಿರ್ಮಾಣ
– ಕಾಲು ಬಾಯಿ ಜ್ವರದ ಲಸಿಕೆ ಉತ್ಪಾದನ ಘಟಕ ನಿರ್ಮಾಣ – 100 ಕೋಟಿ
– ಪಶುವೈದ್ಯಕೀಯಕ್ಕೆ ಸಂಬಂಧಪಟ್ಟಂತೆ ಮೂರು ಹೊಸ ಡಿಪ್ಲೋಮಾ ಕಾಲೇಜು – ಹಾಸನ, ಕೋರಮಂಗಲ , ಚಾಮರಾಜನಗರ
– ಅಪಘಾತದಲ್ಲಿ ಸಾವಿಗೀಡಾಗುವ ಹಸುಗಳಿಗೆ 10 ಸಾವಿರ ರೂ ಪರಿಹಾರ ಧನ
– ಆರು ತಿಂಗಳೊಳಗೆ ಸಾವಿಗೀಡಾಗುವ ಕುರಿಗಳಿಗೆ 2, 500 ಪರಿಹಾರ, ಆರು ತಿಂಗಳ ಮೇಲ್ಪಟ್ಟು ಸಾವಿಗೀಡಾಗುವ ಕುರಿಗಳಿಗೆ 5,ಸಾವಿರ ಪರಿಹಾರಧನ
– ಕುರಿ ತಳಿ ಸಂವರ್ಧನೆಗೆ ಬಳ್ಳಾರಿಯಲ್ಲಿ ಕುರಿ ಸಂವರ್ಧನಾ ಕೇಂದ್ರ ನಿರ್ಮಾಣ – 1 ಕೋಟಿ ಅನುದಾನ

ರೇಷ್ಮೆ ಇಲಾಖೆಗೆ 429 ಕೋಟಿ ರೂ. ಅನುದಾನ:

– ರೇಷ್ಮೆ ಹುಳು ಮೊಟ್ಟೆ/ಚಾಕಿ ಗುಣಮಟ್ಟ ಪ್ರಾಧಿಕಾರ ಸ್ಥಾಪನೆ
– ರೇಷ್ಮೆ ಕೃಷಿಯ ಬಗ್ಗೆ ತರಭೇತಿ ನೀಡಲು ಆರ್ಥಿಕ ನೆರವು
– ಹಾಸನ ಜಿಲ್ಲೆಯಲ್ಲಿ ಹೊಸ ರೇಷ್ಮೆ ತರಬೇತಿ ಕೇಂದ್ರ ಸ್ಥಾಪನೆ
– ಮೈಸೂರಿನಲ್ಲಿ ನೇಯ್ಗೆ ಕೇಂದ್ರ ಸ್ಥಾಪನೆ, ಐದು ಕೋಟಿ ಅನುದಾನ

ಮೀನುಗಾರಿಕಾ ಇಲಾಖೆಗೆ 337 ಕೋಟಿ ರೂ. ಅನುದಾನ ಪ್ರಕಟ:

– ಮಲ್ಪೆ ಹಾಗೂ ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ದೋಣಿ ಸುರಕ್ಷಿತ ಇಳಿದಾಣಕ್ಕೆ ಐದು ಕೋಟಿ
– ಮತ್ಸ್ಯ ಕೃಷಿ ಆಶಾಕಿರಣ ಯೋಜನೆ ಜಾರಿ -ಮೀನು ಉತ್ಪಾದನೆಗೆ ಆರ್ಥಿಕ ಸಹಾಯ – 6.75 ಕೋಟಿ ಮೀಸಲು
– ಸಾಂದ್ರೀಕೃತ ಮೀನಿಗೆ ಶೇ 50ರಷ್ಟು ಸಹಾಯಧನ, ಮೀನುಗಾರರಿಗೆ 10 ಲಕ್ಷ ಮೌಲ್ಯದ ಮನೆ ನಿರ್ಮಾಣಕ್ಕೆ ಶೇ 75ರಷ್ಟು ಸಹಾಯಧನ-

ಸಹಕಾರ ಸಂಘಗಳ ಸಭಿವೃದ್ಧಿಗೆ 1,663 ಕೋಟಿ ರೂ. ಅನುದಾನ:

– ಶೂನ್ಯ ಬಡ್ಡಿದರಲ್ಲಿ ಮೂರು ಲಕ್ಷದವೆರೆಗಿನ ಅಲ್ಪಾವಧಿ ಕೃಷಿ ಸಾಲ , ಮೂರು ಲಕ್ಷ ಮೇಲ್ಪಟ್ಟು -10 ಲಕ್ಷದ ಒಳಗಿನ ಸಾಲಕ್ಕೆ ಶೇ 3ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ – 13 ಸಾವಿರದ ಐನೂರು ಕೋಟಿ
– ಪ್ರತಿಯೊಂದು ಗ್ರಾಮದಲ್ಲೂ ಪ್ರಾಥಮಿಕ ಕೃಷಿ ಸಹಕಾರ ಸಂಘದ ಸ್ಥಾಪನೆ
– ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ
– ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಡಿಜಿಟಲ್ ಟಚ್-ಇ ಸೌಲಭ್ಯಕ್ಕಾಗಿ ಶೇ 25ರಷ್ಟು ನೆರವು

ಕೃಷಿ ಮಾರುಕಟ್ಟೆ ಯೋಜನೆ:

– ಗದಗದಲ್ಲಿ ಈರುಳ್ಳಿ ಗೋದಾಮು ಸ್ಥಾಪನೆಗೆ ಐದು ಕೋಟಿ
– ಜಾನುವಾರ ಮಾರುಕಟ್ಟೆ ಆಧುನೀಕರಣಕ್ಕೆ ಐದು ಕೋಟಿ
– ತರಕಾರಿ ಮಾರುಕಟ್ಟೆಯ ಸಾಮಾಗ್ರಿಗಳಿಗೆ 5 ಕೋಟಿ

ಜಲಸಂಪನ್ಮೂಲ ಯೋಜನೆಗೆ 15,929 ಕೋಟಿ ರೂ. ಅನುದಾನ:

– ಜಯಪುರದ ಮುದ್ದೇಬಿಹಾಳದಲ್ಲಿ ನಾಗರಬೆಟ್ಟ ಏತನೀರಾವರಿ ಯೋಜನೆ
– ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಯಳ್ಳಿಗುತ್ತಿ ಗ್ರಾಮಕ್ಕೆ ನೀರು ಒದಗಿಸೋ ಯೋಜನೆ
– ಸನ್ನತಿ ಯೋಜನೆ ಮೂಲಕ ಯಾದಗಿರಿ ತಾ 35 ಕೆರೆಗೆ ನೀರು ತುಂಬಿಸೋ ಯೋಜನೆ
– ಆಲಮಟ್ಟಿ ಎಡದಂಡೆ ಆಧುನಿಕರಣ
– ಬೆಳಗಾವಿ ಜಿಲ್ಲೆಯ ರಾಯಭಾಗ ತಾ 10 ಗ್ರಾಮಗಳ 17 ಕೆರೆಗಳಿ ಕೃಷ್ಣ ನದಿಯಿಂದ ನೀರು ತುಂಬಿಸುವ ಯೋಜನೆ
– ಹರಪ್ಪನ ಹಳ್ಳಿ ತಾ 60 ಕೆರೆಗಳನ್ನ ತುಂಗಾಭದ್ರ ನದಿಯಿಂದ ನೀರು ತುಂಬಿಸೋ ಯೋಜನೆ
– ಬೆಳಗಾವಿ ಜಿಲ್ಲೆಯ ತಾಲೂಕಿಗೆ ಮಲಪ್ರಭ ನದಿಯಿಂದ ನೀರು ತುಂಬಿಸೋ ಯೋಜನೆ
– ಕಾವೇರಿ ಕೊಳ್ಳದಲ್ಲಿ 374 ಕಿ ಮೀ ನಾಲಾಭಿವೃದ್ಧಿ ಯೋಜನೆ – 599 ಕೋಟಿ ವೆಚ್ಚ
– ಕಣ್ವ ನಾಲೆಗಳ ಆಧುನೀಕರಣ
– ತೀವ್ರ ಬರಗಾಲ ಎದುರಿಸ್ತಾ ಇರೋ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಯೋಜನೆ – 30 ಕೋಟಿ ಮೀಸಲು

ಸಣ್ಣ ನೀರಾವರಿ ಯೋಜನೆಗೆ 2,099 ಕೋಟಿ ರೂ. ಅನುದಾನ ಪ್ರಕಟ:

– ಕೆರೆ ಹೂಳು ಎತ್ತಲು ಕೆರೆ ಸಂಜೀವಿನಿ ಯೋಜನೆ- 100 ಕೋಟಿ
– ಪಶ್ಚಿಮ ವಾಹಿನಿ ಯೋಜನೆಯಡಿ ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮಾ¨ಭಿಮುಖವಾಗಿ ಹರಿಯುವ ನೀರನ್ನ ಸಂಗ್ರಹಿಸಲು ಕಿಂಡಿ ಅಣೆಕಟ್ಟು ನಿರ್ಮಾಣ – 100 ಕೋಟಿ
– ಅಂತರ್ ಜಲ ತೀವ್ರವಾಗಿ ಕುಸಿದಿರುವ ಬೀದರ್, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು ಹಾಸನದಲ್ಲಿ 50 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ

ರೈತ ಸಾರಥಿ (ಹೊಸ ಯೋಜನೆ) ಘೋಷಣೆ:

– ರೈತ ಸಾರಥಿ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಟ್ರಾಕ್ಟರ್ ಮತ್ತು ಟ್ರೈಲರ್‍ಗಳ ಅನುಕೂಲಕ್ಕಾಗಿ ರೈತರಿಗೆ ತರಬೇತಿ ಮತ್ತು ಕಲಿಕಾ ಲೈಸೆನ್ಸ್.

Click to comment

Leave a Reply

Your email address will not be published. Required fields are marked *

Advertisement
Advertisement