ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್‍ನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹಲವು ಘೋಷಣೆಗಳನ್ನ ಮಾಡಲಾಗಿದೆ. ಅದರ ವಿವರ ಇಲ್ಲಿದೆ.
ಒಟ್ಟು ಅನುದಾನ: 4926 ಕೋಟಿ ರೂ.
Advertisement
* ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ.
* ಮಾತೃಪೂರ್ಣ ಯೋಜನೆಗೆ 302 ಕೋಟಿ – ಜುಲೈ ತಿಂಗಳಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ.
* ಕ್ಷೀರಭಾಗ್ಯ ಯೋಜನೆಯಡಿ 5 ದಿನ ಹಾಲು ವಿತರಣೆ.
* ಅಂಗನವಾಡಿ ಕಾರ್ಯಕರ್ತರಿಗೆ 1000 ರೂ ಮತ್ತು ಸಹಾಯಕರಿಗೆ 500 ರೂ. ಗೌರವಧನ ಹೆಚ್ಚಳ.
* ಅಂಗನವಾಡಿ ಕಾರ್ಯಕರ್ತರಿಗೆ ಅಪಘಾತ ವಿಮಾ ಸೌಲಭ್ಯ.
Advertisement
* ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡಲು ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸಾ ಘಟಕ.
* ಎಚ್‍ಐವಿ ಸೋಂಕಿತ ಮತ್ತು ಬಾಧಿತ 25 ಸಾವಿರ ಮಕ್ಕಳಿಗೆ ಸಹಾಯಧನ 800 ರಿಂದ 1000 ರೂ.ಗೆ ಏರಿಕೆ.
* 4 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಮಕ್ಕಳ ವಿಶೇಷ ನ್ಯಾಯಾಲಯ.
* 6,022 ಗ್ರಾಮ ಪುನರ್ವಸತಿ ಕಾರ್ಯಕರ್ತರ ಗೌರವಧನ 3 ಸಾವಿರಕ್ಕೆ ಏರಿಕೆ.
* 176 ಬಹುವಿಧ ಪುನರ್ವಸತಿ ಕಾರ್ಯಕರ್ತರ ಗೌರವ ಧನ 6 ಸಾವಿರಕ್ಕೆ ಏರಿಕೆ.
Advertisement
* ಸ್ವಾವಲಂಬಿ ವಿಮಾ ಯೋಜನೆಗೆ 4 ಕೋಟಿ ರೂ.
* 20 ಸಾವಿರ ಹಿರಿಯ ನಾಗರೀಕರಿಗೆ ಸಾಧನ ವಿತರಣೆ.
* ಸಾಧನೆ ಯೋಜನೆಯ ಅರ್ಥಿಕ ನೆರವು 50 ಸಾವಿರಕ್ಕೆ ಏರಿಕೆ.
* ಜಿಲ್ಲಾ ಸ್ತ್ರೀ ಒಕ್ಕೂಟಗಳ ಮೂಲಕ `ಸವಿರುಚಿ’ ಸಂಚಾರಿ ಕ್ಯಾಂಟಿನ್‍ಗಳ ಆರಂಭ.