ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಮಂಡನೆಯಾಗಿದೆ. ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಹಲವು ಘೋಷಣೆಗಳನ್ನ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕಕಿದ್ದೇನು ಎಂಬುದರ ವಿವರ ಇಲ್ಲಿದೆ.
> ಪ್ರತಿ ಜಿಲ್ಲೆಗೆ ತಲಾ 1 ಕೋಟಿ ರೂ. ಅನುದಾನ ಘೋಷಣೆ.
> 30 ಮೊರಾರ್ಜಿ ವಸತಿ ಶಾಲೆಗಳು ಮೇಲ್ದರ್ಜೆಗೆ.
> ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ವಿದ್ಯಾರ್ಥಿಗಳ ಭೋಜನ ವೆಚ್ಚ 1400 ರೂ.ನಿಂದ 1500 ರೂ.ಗೆ ಹೆಚ್ಚಳ.
> ಎಸ್‍ಸಿ, ಎಸ್‍ಟಿ ಹಾಸ್ಟೆಲ್‍ಗಳಲ್ಲಿ ಪುಸ್ತಕ ಬ್ಯಾಂಕ್‍ಗಳ ಸ್ಥಾಪನೆ.
> ಎಸ್‍ಸಿ, ಎಸ್‍ಟಿ 1 ಲಕ್ಷ ನಿರುದ್ಯೋಗಿಗಳಿಗೆ ಕೌಶಲ ತರಬೇತಿ.
> ಎಸ್‍ಸಿ, ಎಸ್‍ಟಿ ವಿದ್ಯಾರ್ಥಿ ಡೇ ಸ್ಕಾಲರ್‍ಶಿಪ್ ಹೆಚ್ಚಳ – ದಿನಕ್ಕೆ 250 ರೂ.
> 5 ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡಗಳ ಕಚೇರಿ.
Advertisement
> ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವೆಚ್ಚ ಹೆಚ್ಚಳ – 2.50 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಏರಿಕೆ – ಸಬ್ಸಿಡಿ 2 ರಿಂದ 2.5 ಲಕ್ಷಕ್ಕೆ ಹೆಚ್ಚಳ.
> ಎಸ್‍ಸಿ, ಎಸ್‍ಟಿ ಭೂ ರಹಿತ ಕಾರ್ಮಿಕರ ಜಮೀನು ಖರೀದಿಗೆ ವೆಚ್ಚ ಹೆಚ್ಚಳ.
> 1400 ಪರಿಶಿಷ್ಟ ಜಾತಿ, 600 ಪರಿಶಿಷ್ಟ ಪಂಗಡ ನಿರುದ್ಯೋಗಿ ಯುವಕರಿಗೆ ತಲಾ 5 ಲಕ್ಷ ರೂ. – ಸಬ್ಸಿಡಿ 2.5 ಲಕ್ಷ ರೂ.
> ಚಾಲನಾ ಪರವಾನಗಿ ಇರುವ ಎಸ್‍ಸಿ, ಎಸ್‍ಟಿ 5 ಸಾವಿರ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ ಖರೀದಿಗೆ 3 ಲಕ್ಷ ರೂ. ಸಹಾಯಧನ.
> ಚಾಮರಾಜನಗರ, ಹಾಸನ, ಕೊಪ್ಪಳ, ಯಾದಗಿರಿ, ಹಾವೇರಿಯಲ್ಲಿ 5 ಭಿಕ್ಷುಕ ಕೇಂದ್ರಗಳ ಸ್ಥಾಪನೆ.
> ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ಭಾಗ್ಯ.
Advertisement
> ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ 2 ರಿಂದ 5 ಸಾವಿರ ರೂ.ಗೆ ಹೆಚ್ಚಳ
> ಆದಿವಾಸಿ ಸಮುದಾಯ ಭವನ ನಿರ್ಮಾಣಕ್ಕೆ 15 ಕೋಟಿ ರೂ.
> ದಾವಣಗೆರೆ ಸೇವಾ ಲಾಲ್ ಟ್ರಸ್ಟ್‍ಗೆ 5 ಕೋಟಿ ರೂ.
> ಎಸ್‍ಸಿ, ಎಸ್‍ಟಿ ವಿಧವೆಯರ ಮರು ಕಲ್ಯಾಣಕ್ಕೆ 3 ಲಕ್ಷ ರೂ. ಪ್ರೋತ್ಸಾಹಧನ.
> ಎಸ್‍ಸಿ, ಎಸ್‍ಟಿ ಯುವಕ, ಯುವತಿಯರು ಅಂತರ್ಜಾತಿ ವಿವಾಹವಾದರೆ 2 ಲಕ್ಷ ರೂ. ಪ್ರೋತ್ಸಾಹ ಧನ.
> ಎಸ್‍ಸಿ, ಎಸ್‍ಟಿ ಉದ್ದಿಮೆದಾರರಿಗೆ ಸಾಲ- 100 ಕೋಟಿ ರೂ. ನಿಧಿ ಸ್ಥಾಪನೆ.
Advertisement
> ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ.
> ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಿಗೆ ಸರ್ಕಾರದಿಂದಲೇ ತರಬೇತಿ
> ಆದಿವಾಸಿ ಸಮುದಾಯಕ್ಕೆ ಉದ್ಯೋಗ ಕಲ್ಪಿಸಲು 200 ಕೋಟಿ ರೂ. ಅನುದಾನ.
> ಗಾರ್ಡ್, ವಾಚರ್‍ಗಳಿಗೆ ವಿಶೇಷ ನಿಯಮಾವಳಿ
> ಎಸ್‍ಸಿ, ಎಸ್‍ಟಿ ಆರ್ಥಿಕ ಅಭಿವೃದ್ಧಿಗೆ 15 ಸಾವಿರ ರೂ. ನೇರ ಸಾಲ
> ಎಸ್‍ಸಿ, ಎಸ್‍ಟಿ 2 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ – 100 ಕೋಟಿ ರೂ.