ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‍ನಲ್ಲಿ ಕಾರ್ಮಿಕ ಇಲಾಖೆಗೆ ಸಿಕ್ಕಿದ್ದೇನು? ಇಲ್ಲಿದೆ ಅದರ ವಿವರ
ಒಟ್ಟು ಅನುದಾನ – 469 ಕೋಟಿ
Advertisement
> ಖಾಸಗಿ ಉದ್ಯೋಗಿಗಳ ನಿವೃತ್ತಿ ವಯಸ್ಸು 58 ರಿಂದ 60ಕ್ಕೆ ಏರಿಕೆ.
> ಖಾಸಗಿ ವಲಯದ ಉದ್ದಿಮೆಗಳಲ್ಲಿ ಸಿ, ಡಿ ದರ್ಜೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಮತ್ತು ವಿಕಲಚೇತನರಿಗೆ ಶೇಕಡ 5 ರಷ್ಟು ಆದ್ಯತೆ.
> ಖಾಸಗಿ ವಲಯದ ಸಂಸ್ಥೆಗಳಲ್ಲಿ ಎಸ್‍ಸಿ, ಎಸ್‍ಟಿ ಕಾರ್ಮಿಕರಿಗೆ ಉದ್ಯೋಗ ದೊರಕಿಸಲು ಆಶಾದೀಪ ಯೋಜನೆ.
> ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ – 33 ಕೋಟಿ ರೂ.
> 61 ಹೊಸ ಇಎಸ್‍ಐ ಚಿಕಿತ್ಸಾಲಯ
> ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಇಎಸ್‍ಐ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ 100ಕ್ಕೆ ಏರಿಕೆ.
> ಇಂದಿರಾನಗರದ ಇಎಸ್‍ಐ ಆಸ್ಪತ್ರೆ ಉನ್ನತೀಕರಣ, ಸೂಪರ್ ಸ್ಪೆಷಾಲಿಟಿ ವಿಭಾಗಗಳ ಆರಂಭ.
> ಎಲ್ಲಾ ಇಎಸ್‍ಐ ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗ ಆರಂಭ.
> ಎಲ್ಲಾ ಇಎಸ್‍ಐ ಆಸ್ಪತ್ರೆಗಳಲ್ಲಿ ಡಯಾಲಿಸಿಸ್, ಐಸಿಯು, ಎಂಐಸಿಯು, ಪಿಐಸಿಯು ವಿಭಾಗಳನ್ನ ಹೊರಗುತ್ತಿಗೆ ಮುಖಾಂತರ ನಿರ್ವಹಣೆ
> ಹಮಾಲರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು, ಚಿಂದಿ ಆಯುವವರಿಗೆ 10 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‍ಕಾರ್ಡ್ ಒದಗಿಸುವ ಮೂಲಕ ಅಪಘಾತ ಪರಿಹಾರ, ಭವಿಷ್ಯ ನಿಧಿ ಪಿಂಚಣಿ.
> ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆ ಸಮಗ್ರ, ಭವಿಷ್ಯ ನಿಧಿ ಪಿಂಚಣಿ ಯೋಜನೆ.
> ಅಪಾಯಕಾರಿ ಕೈಗಾರಿಕೆಗಳ ಉಸ್ತುವಾರಿ ಕೋಶ ಸ್ಥಾಪನೆ.
Advertisement