Bengaluru City

ರಾಜ್ಯ ಬಜೆಟ್‍ನಲ್ಲಿ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಿಕ್ಕಿದ್ದೇನು?

Published

on

Share this

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ವಿಧಾನಸೌಧದಲ್ಲಿ 2017-18ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದೆ. ಇದರಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ 299 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ. ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ ಯೋಜನೆಗಳ ವಿವರ ಇಂತಿದೆ.

– ಅಪರಾಧ ತಡೆಗಟ್ಟಲು ಮತ್ತು ತಂತ್ರಜ್ಞಾನ ಸಾಮರ್ಥ್ಯ ಕ್ಕೆ ಒತ್ತು ನೀಡಲು `ಸೈಬರ್ ಸಕ್ಯೂರಿಟಿ ಕೇಂದ್ರಗಳ ನಿರ್ಮಾಣ.
– ಕೇಂದ್ರ ಸರ್ಕಾರ ಕೌಶಲ್ಯ ಅಭಿವೃದ್ಧಿ ಯೋಜನಯಡಿ 1 ಲಕ್ಷ 10 ಸಾವಿರ ಜನರಿಗೆ ತರಬೇತಿ ನೀಡಲು `ಯುವಯುಗ’ ಕಾರ್ಯಕ್ರಮ ಅನುಷ್ಠಾನ.
– ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿರುವ 35.69 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಾರಾಲಯಗಳನ್ನು ಡಿಸೆಂಬರ್ 2017 ರೊಳಗೆ ಕಾರ್ಯಾರಂಭ.
– ಮಡಿಕೇರಿ ಹಾಗೂ ಗದಗ್‍ನಲ್ಲಿ ತಲಾ 5.75 ಕೋಟಿ ರೂ. ವೆಚ್ಚದಲ್ಲಿ 10 ಮೀ. ಗೋಳಾಕೃತಿಯ ತ್ರಿಡಿ ಕಿರು ತಾರಾಲಯ ಸ್ಥಾಪನೆ.
– ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೈಗಾರಿಕೋದ್ಯಮ ಸಹಯೋಗದೊಂದಿಗೆ ಚೈತನ್ಯ ಪೂರ್ಣ ತಂತ್ರಜ್ಞಾನ ಸ್ಥಾಪಿಸಲು ಉದ್ದೇಶ.
– ರಾಜ್ಯದ ಎಲ್ಲಾ ಗ್ರಾ.ಪಂಚಾಯ್ತಿಗಳಲ್ಲಿ ಉಚಿತ ವೈಫೈ ಸೌಲಭ್ಯ ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಕಿಯೋನೊಕ್ಸ್ ಸಹಭಾಗಿತ್ವದಲ್ಲಿ 2500 ಗ್ರಾ.ಪಂ ಗಳಲ್ಲಿ ಉಚಿತ ವೈಫೈ ಅನುಷ್ಠಾನ. ಇದಕ್ಕೆ 50 ಕೋಟಿ ರೂ. ವೆಚ್ಚ.
– 5 ಜಿಲ್ಲೆಗಳಿಗೆ ಒಂದರಂತೆ ಸಂಚಾರಿ ತಾರಾಲಯ ವಾಹನಗಳ ನಿಯೋಜನೆ.
– ಬೆಂಗಳೂರಿನ ಐಐಐಟಿ ಸಂಸ್ಥೆಯಲ್ಲಿ ಯಾಂತ್ರಿಕ ಬುದ್ಧಿಶಕ್ತಿ ಮತ್ತು ರೋಬೋಟಿಕ್ಸ್ ಕೇಂದ್ರ ಸ್ಥಾಪನೆ. ಇದಕ್ಕೆ 5 ಕೋಟಿ ರೂ. ವೆಚ್ಚ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications