ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾಸೌಧದಲ್ಲಿ 2017-18ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿರುವ ಅನುದಾನದ ಮಾಹಿತಿ ಇಲ್ಲಿದೆ.
ಒಟ್ಟು ಅನುದಾನ: 5118 ಕೋಟಿ ರೂ.
Advertisement
- ಆಶಾ ಕಾರ್ಯಕರ್ತರು ಈಗಾಗಲೇ ಪಡೆಯುತ್ತಿರುವ ಪ್ರೋತ್ಸಾಹ ಧನದ ಜೊತೆ 1000 ರೂ ಗೌರವಧನ.
- ತಲಾ 25 ಕೋಟಿ ವೆಚ್ಚದಲ್ಲಿ 5 ಸೂಪರ್ ಸ್ಪೆಷಾಲಿಸಿ ಆಸ್ಪತ್ರೆ – ದಾವಣಗೆರೆ, ರಾಮನಗರ, ತುಮಕೂರು, ವಿಜಯಪುರ ಮತ್ತು ಕೋಲಾರದಲ್ಲಿ ಸ್ಥಾಪನೆ.
- ಮಂಗಳೂರು ವೆನ್ಲಾಕ್ ಆಸ್ಪತ್ರೆ 10 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದು.
- 15 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದೂರು ಇರುವ ಗ್ರಾಮಗಳಲ್ಲಿ 150 ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಸ್ಥಾಪನೆ.
- 10 ರಿಂದ 15 ಕಿ.ಮೀ ಸುತ್ತಳತೆಯಲ್ಲಿ 35 ಸಾವಿರ ಜನಸಂಖ್ಯೆಗೆ ಒಂದರಂತೆ ಆಂಬುಲೆನ್ಸ್ ಸೇವೆ.
- 64 ಸಂಚಾರಿ ಆರೋಗ್ಯ ಘಟಕಗಳ ಆರಂಭ.
- ಎಸ್‍ಇ/ಎಸ್‍ಟಿ ಜನಸಂಖ್ಯೆ ಹೊಂದಿರುವ ಗ್ರಾಮಗಳ ಜನರ ಆರೋಗ್ಯ ಸೇವೆಗೆ 25.34ಕೋಟಿ ಅನುದಾನ.
- ಬೆಳಗಾವಿಯ ಲಸಿಕಾ ಸಂಸ್ಥೆಯ ಆವರಣದಲ್ಲಿ 5 ಕೋಟಿ ವೆಚ್ಚದಲ್ಲಿ ಆಯುಷ್ ಔಷಧ ತಯಾರಿಕಾ ಕೇಂದ್ರಗಳ ಸ್ಥಾಪನೆ.
- 4.5 ಕೋಟಿ ವೆಚ್ಚದಲ್ಲಿ 150 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶವಾಗಾರ ನಿರ್ಮಾಣ.
- ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಗಳ ಸಂಯೋಜಿತ ಆಯುಷ್ ಆಸ್ಪತ್ರೆಗಳ ಸ್ಥಾಪನೆಗೆ 6 ಕೋಟಿ ರೂ.
- ರಾಜ್ಯದಲ್ಲಿ ಜನೌಷಧ ಔಷಧ ಮಳಿಗೆಗಳು ಮತ್ತು 200 ಜನರಿಕ್ ಔಷಧಿ ಮಳಿಗೆಗಳ ಸ್ಥಾಪನೆ
ವೈದ್ಯಕೀಯ ಶಿಕ್ಷಣ:
Advertisement
- ಕಲಬುರಗಿ, ಮೈಸೂರು, ಬೆಳಗಾವಿಯಲ್ಲಿ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ 310 ಕೋಟಿ ರೂ.
- ಇಂದಿರಾನಗರದಲ್ಲಿ 35 ಕೋಟಿ ವೆಚ್ಚದಲ್ಲಿ ಕರ್ನಾಟಕ ಇನ್ಸ್ ಸ್ಟಿಟ್ಯೂಟ್ ಆಫ್ ಎಂಡೋಕ್ರೈನಾಲಿಜಿಯ ಹೊಸ ಆಸ್ಪತ್ರೆ.
- ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ 5 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋದನ ಕೇಂದ್ರ ಘಟಕ.
- ಮಿಂಟೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ.
- ಬೆಂಗಳೂರಿನ ಕ್ಷಯ ರೋಗ ಆಸ್ಪತ್ರೆ ಆವರಣದಲ್ಲಿ 10 ಕೋಟಿ ವೆಚ್ಚದಲ್ಲಿ ಚರ್ಮರೋಗ ಸಂಸ್ಥೆ.
- ಬಳ್ಳಾರಿ ವಿಮ್ಸ್ ಭೋದನಾ ಆಸ್ಪತ್ರೆ 25 ವೆಚ್ಚದಲ್ಲಿ ನವೀಕರಣ.
In our fight to reduce infant, maternal mortality we will pay an honorarium to ASHA workers, over &above incentives #JanaparaBudget pic.twitter.com/LA0FeqXXxq
— CM of Karnataka (@CMofKarnataka) March 15, 2017