ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ 5ನೆ ಬಜೆಟ್ ಮಂಡನೆಯಾಗಿದ್ದು, ಇಂಧನ ಇಲಾಖೆಗೆ ಸಿಕ್ಕ ಅನುದಾನ ಮತ್ತು ಘೋಷಣೆಗಳ ಮಾಹಿತಿ ಇಲ್ಲಿದೆ.
ಒಟ್ಟು ಅನುದಾನ – 14,094 ಕೋಟಿ
Advertisement
– ಭಾಗ್ಯಜ್ಯೋತಿ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಮಿತಿಯನ್ನ 18 ಯುನಿಟ್‍ನಿಂದ 40 ಯುನಿಟ್‍ಗಳಿಗೆ ಹೆಚ್ಚಳ.
– ವಿಧಾನಸಭಾ ಸದಸ್ಯರ ಮತಕ್ಷೇತ್ರ ವ್ಯಾಪ್ತಿಯ 5 ಗ್ರಾಮಗಳನ್ನ ಮಾದರಿ ವಿದ್ಯುತ್ ಗ್ರಾಮಗಳಾಗಿ ಪರಿವರ್ತಿಸಲು ಉದ್ದೇಶ.
– ಪ್ರಸರಣ ಜಾಲವನ್ನ ಬಲಪಡಿಸುವ ನಿಟ್ಟಿನಲ್ಲಿ 40 ಹೊಸ ಉಪಕೇಂದ್ರಗಳ ಸ್ಥಾಪನೆ.
– ಯರಮರಸ್ ಯೋಜನೆಯಿಂದ 1600 ಮೆಗಾ ವ್ಯಾಟ್, ಪಾವಗಡದ ಸೌರಶಕ್ತಿ ಇಂಧನ ಪಾರ್ಕ್‍ನಿಂದ 1000 ಮೆ.ವ್ಯಾ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ 1375 ಮೆ. ವ್ಯಾ ಸೇರಿದಂತೆ 2017-18ನೇ ಸಾಲಿನ್ಲಲಿ ಒಟ್ಟು 3975 ಮೆ. ವ್ಯಾ ಸಾಮಥ್ರ್ಯ ಸೇರ್ಪಡೆ ಮಾಡಲು ಉದ್ದೇಶ