ಬೆಂಗಳೂರು: ಸಿಎಂ ಸಿದ್ದರಾಮಯ್ಯ ಜನಪರ ಬಜೆಟ್ ಎಂಬ ಘೋಷವಾಕ್ಯದೊಂದಿಗೆ ಇಂದು ತಮ್ಮ 12ನೇ ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಇದಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನ ಘೋಷಿಸಿದ್ದಾರೆ. ಅದರ ವಿವರ ಇಲ್ಲಿದೆ.
ಒಟ್ಟು ಅನುದಾನ- 3154 ಕೋಟಿ ರೂ.
Advertisement
* ಐಐಎಂ, ಐಐಟಿ, ಐಐಎಸ್‍ಸಿ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹ ಧನ.
* ಮೊದಲ ಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹೆಚ್ಚಳ.
* ಹಾಸ್ಟೆಲ್ ವಿದ್ಯಾರ್ಥಿಗಳ ಪುಸ್ತಕ, ಲೇಖನ ಸಾಮಗ್ರಿ, ಕ್ಷೌರ, ಸಮವಸ್ತ್ರ ವೆಚ್ಚ ಹೆಚ್ಚಳ.
* ಸೇನೆಗೆ ಆಯ್ಕೆಯಾಗುವ ಅವಕಾಶ ಹೆಚ್ಚಿಸಲು 3000 ಅಭ್ಯರ್ಥಿಗಳಿಗೆ ತರಬೇತಿ.
* ವಿಧವೆಯರು ಆರ್ಥಿಕ ಚಟುವಟಿಕೆ ಕೈಗೊಳ್ಳಲು 40 ಸಾವಿರ ರೂ. ಆರ್ಥಿಕ ನೆರವು.
Advertisement
* ಮಡಿವಾಳ, ಸವಿತಾ ಸಮಾಜ, ತಿಗಳ, ಕುಂಬಾರ ಸಮುದಾಯ ಅಭಿವೃದ್ಧಿಗೆ 60 ಕೋಟಿ ರೂ.
* ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ.
* ವಿಶ್ವಕರ್ಮ ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಸಾಲ ಯೋಜನೆ.
* ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆ.
* ಬೆಸ್ತ, ಕಬ್ಬಲಿಗ, ಕೋಲಿ, ಗಂಗಮತ, ಮೊಗವೀರ ಉಪಜಾತಿಗಳ ಸಮಗ್ರ ಅಭಿವೃದ್ಧಿಗೆ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆ.
Advertisement
ಐಐಎಂ, ಐಐಟಿ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ.ಗಳ ಪ್ರೋತ್ಸಾಹಧನ#JanaparaBudget pic.twitter.com/l0n7kLFDs1
— Karnataka Congress (@KPCCofficial) March 15, 2017
Advertisement
* ಸಂಗೊಳ್ಳಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಆರಂಭ.
* ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯಾಗಿ ಮಾಡುವುದು.
* ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ 2 ಸಾವಿರ ರೂ.ನಿಂದ 4 ಸಾವಿರ ರೂ.ಗೆ ಏರಿಕೆ.
* 100 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ವೇತನ ಮಂಜೂರು.
* ಬುಡಬುಡಕಿ, ಗೊಂದಳಿ , ಹೆಳವ, ಪಿಚಗುಂಟ, ಜೋಗಿ, ಗೊಲ್ಲ, ಶಿಕ್ಕಲಿಗಾರ, ಹವುಗಾರ ಇತ್ಯಾದಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ 100 ಕೋಟಿ ರೂ.