Bengaluru City

2018ರ ಏಪ್ರಿಲ್ 1 ರಿಂದ 2 ಸ್ಟ್ರೋಕ್ ಆಟೋ ರಿಕ್ಷಾ ರದ್ದು: ಸಾರಿಗೆ ಇಲಾಖೆಗೆ ಸಿಕ್ಕಿದ್ದು ಏನು?

Published

on

Share this

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ತಮ್ಮ ಬಜೆಟ್‍ನಲ್ಲಿ ಸಾರಿಗೆ ಇಲಾಖೆಗೆ ಒಟ್ಟು 2354 ಕೋಟಿ ರೂ. ಅನುದಾನವನ್ನು ಪ್ರಕಟಿಸಿದ್ದಾರೆ. ಬಜಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು ಇಲ್ಲಿದೆ.

ಸಾರಿಗೆ
* ರೈತ ಸಾರಥಿ ಯೋಜನೆಯಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ತರಬೇತಿ – 2 ಕೋಟಿ
* 5 ಕೋಟಿ ವೆಚ್ಚದಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ರಚನೆ
* 2018ರ ಏಪ್ರಿಲ್ 1 ರಿಂದ 2 ಸ್ಟ್ರೋಕ್ ಆಟೋ ರಿಕ್ಷಾಗಳ ರದ್ದು

* 4 ಸ್ಟ್ರೋಕ್ ಎಲ್‍ಪಿಜಿಯ 10 ಸಾವಿರ ಆಟೋಗಳಿಗೆ ತಲಾ 30 ಸಾವಿರ ಸಹಾಯಧನ-30 ಕೋಟಿ
* ಚಿಂತಾಮಣಿ, ರಾಣೆಬೆನ್ನೂರು, ಬಂಟ್ವಾಳದಲ್ಲಿ 3 ಆರ್‍ಟಿಓ ಕಚೇರಿ ಆರಂಭ
* ಪ್ರಸಕ್ತ ಸಾಲಿನಲ್ಲಿ 3 ಸಾವಿರ ಹೊಸ ಬಿಎಂಟಿಸಿ ಬಸ್‍ಗಳ ಸೇರ್ಪಡೆ
* 1500 ಹೊಸ ಬಸ್‍ಗಳ ಖರೀದಿ – 1500 ಬಸ್‍ಗಳು ಗುತ್ತಿಗೆ ಮೂಲಕ

* ಸಾರಿಗೆ ನಿಗಮಗಳಿಂದ 3250 ಹೊಸ ಬಸ್‍ಗಳ ಖರೀದಿ
* ವಾಯುವ್ಯ ಕರ್ನಾಟಕ ಸಾರಿಗೆಯಿಂದ 1050 ಬಸ್‍ಗಳು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ 700 ಬಸ್‍ಗಳು, ಕೆಎಸ್‍ಆರ್‍ಟಿಸಿಯಿಂದ 1500 ಬಸ್‍ಗಳು
* ಕೇಂದ್ರ ಅನುದಾನದೊಂದಿಗೆ ಬೆಂಗಳೂರಿನಲ್ಲಿ 150, ಮೈಸೂರಿನಲ್ಲಿ 50 ಎಲೆಕ್ಟ್ರಿಕ್ ಬಸ್‍ಗಳ ಸಂಚಾರ
* ಶಿವಮೊಗ್ಗದಲ್ಲಿ ಹೊಸ ವಿಭಾಗ ಆರಂಭ

* ಸಾರಿಗೆ ನಿಗಮಗಳ ಮೂಲಕ 44 ಹೊಸ ಬಸ್ ನಿಲ್ದಾಣಗಳು, 14 ಹೊಸ ಬಸ್ ಡಿಪೋಗಳು ಮತ್ತು ತರಬೇತಿ ಕೇಂದ್ರ ಸ್ಥಾಪನೆ
* ಕರ್ನಾಟಕದ ಗೋವಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅರ್ಜುನ ಮತ್ತು ಖೇಲ್‍ರತ್ನ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ಬಸ್ ಪಾಸ್
* ಬಿಎಂಟಿಸಿ ಮೊಬೈಲ್ ಆ್ಯಪ್‍ನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತಾ ದೃಷ್ಟಿಯಿಂದ ಎಸ್‍ಒಎಸ್ ಮತ್ತು ಟ್ರ್ಯಾಕಿಂಗ್ ಸೌಲಭ್ಯ
* ಉಚಿತ ಹಾಗೂ ರಿಯಾಯಿತಿ ಧರದ ಬಸ್ ಹೊಂದಿರುವವರಿಗೆ ಸ್ಮಾರ್ಟ್ ಕಾರ್ಡ್
* ಚಾಲಕರು ಮತ್ತು ಮೆಕ್ಯಾನಿಕ್‍ಗಳಿಗೆ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ – ಈಗಿರುವ ಕೇಂದ್ರಗಳು ಮೇಲ್ದರ್ಜೆಗೆ

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications