ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಅಲ್ಪಸಂಖ್ಯಾತ ಕಲ್ಯಾಣ ಮತ್ತು ಹಜ್ ಇಲಾಖೆಗೆ 2750 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು
– ಮೌಲಾನ ಅಬ್ದುಲ್ ಕಲಾಂ ಆಜಾದ್ ಭವನ, ಉರ್ದು ಕನ್ವೆಷನ್ ಹಾಲ್ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಿಸಲು – 20 ಕೋಟಿ
– ವಕ್ಫ್ ಸಂಸ್ಥೆ ನಿರ್ವಹಣೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ಕೇಂದ್ರ
– ಸರ್ಕಾರಿ ಉರ್ದು ಶಾಲೆ ಜಾಗದಲ್ಲಿ 200 ಮೌಲಾನ ಆಜಾದ್ ಶಾಲೆಗಳು
– ಮಹಿಳೆಯರಿಗಾಗಿ 2 ಕೋಟಿ ವೆಚ್ಚದಲ್ಲಿ 10 ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್
– ಐಐಎಂ, ಐಐಟಿ, ಐಐಎಸ್‍ಸಿ ಯಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹ ಧನ
Advertisement
– ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 20 ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿಪೂರ್ವ ಕಾಲೇಜು, 2 ಮಾದರಿ ವಸತಿ ಶಾಲೆ, 25 ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆ
– ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 175 ಕೋಟಿ
– ಪೇಷ್ ಇಮಾಮ್ ಅವರ ಗೌರವ ಧನ 3,100 ರೂ ಇಂದ 4,000ಕ್ಕೆ ಏರಿಕೆ
– ಮೌಜಾನ್ ಅವರ ಗೌರವಧನ 2500 ರಿಂದ 3000ಕ್ಕೆ ಹೆಚ್ಚಳ
– ಮಂಗಳೂರಲ್ಲಿ 10 ಕೋಟಿ ವೆಚ್ಚದಲ್ಲಿ ಹಜ್ ಭವನ ಸ್ಥಾಪನೆ
Advertisement
– 500 ಮಂದಿ ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿಸಲು ತಲಾ 3 ಲಕ್ಷ ರೂ. ಸಹಾಯ ಧನ ಹಾಗೂ ಉಳಿದ ಹಣಕ್ಕೆ ಬ್ಯಾಂಕ್ ಸಾಲ
– ಕಾನೂನು ಪದವಿಧರರ ಮಾಸಿಕ ತರಬೇತಿ ಭತ್ಯೆ 2 ಸಾವಿರ ರೂ.ಗಳಿಂದ 4 ಸಾವಿರ ರೂ.ಗಳಿಗೆ ಹೆಚ್ಚಳ
Advertisement