ಬೆಂಗಳೂರು: ಮೋದಿ (Narendra Modi) ಹೋಗಿದ್ದಕ್ಕೆ ವಿಶ್ವಕಪ್ ಫೈನಲಿನಲ್ಲಿ ಭಾರತ (Team India) ಸೋತಿತು ಎಂದ ರಾಹುಲ್ ಗಾಂಧಿಗೆ (Rahul Gandhi) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತಿರುಗೇಟು ನೀಡಿದ್ದು, ರಾಹುಲ್ ಎಂದರೆ ರಾಹು ಗ್ರಹ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್‌ಗೆ (Congress) ಆವರಿಸಿದ ಮೇಲೆ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಹುಡುಕಾಡುವ ಪರಿಸ್ಥಿತಿ ತಲುಪಿತು ಎಂದು ಕಾಂಗ್ರೆಸಿಗರೇ ಬೀದಿಯಲ್ಲಿ ನಿಂತು ಮಾತನಾಡಿಕೊಳ್ಳುತ್ತಾರೆ. ರಾಹುಗ್ರಹ ಬಿಡಿಸಲೆಂದೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾನ್ಯ ಖರ್ಗೆಯವರು (Mallikarjun Kharge) ಬಂದು ಕುಳಿತ್ತಿದ್ದಾರೆ. ಆದರೆ ರಾಹು ಎಂಬ ರಿಮೋಟ್ ಕಂಟ್ರೋಲ್ ಇನ್ನೂ ತಗುಲಿಕೊಂಡಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಅಪಶಕುನ, ಐರೆನ್ ಲೆಗ್- ವಿಶ್ವಕಪ್‌ನಲ್ಲಿ ಸೋತಿದ್ದಕ್ಕೆ ಪ್ರಧಾನಿಯನ್ನು ಹೀಯಾಳಿಸಿದ ರಾಗಾ
Advertisement
Advertisement
ವಿಶ್ವ ಮಟ್ಟದಲ್ಲಿ ಭಾರತವನ್ನು ಮೂಂಚೂಣಿ ಸಾಲಿಗೆ ತಂದು ಇವತ್ತು 4ನೇ ಸ್ಥಾನದಲ್ಲಿ ಭಾರತವನ್ನು ನಿಲ್ಲಿಸಿದ ಪ್ರಧಾನಿ ಮೋದಿಯವರು ಯಾವುದರ ಸಂಕೇತ? ವಿಜಯದ ಸಂಕೇತ, ಅಭಿವೃದ್ಧಿಯ ಸಂಕೇತ , ಸಾಮರ್ಥ್ಯದ ಸಂಕೇತ ಎಂದು ಜಗತ್ತು ಹೇಳುತ್ತಿದೆ. ಇದನ್ನೂ ಓದಿ: ಸಹಿ ಯಾಕೆ ಮಾಡಬಾರದು? ಮಾಡಿದ್ರೆ ತಪ್ಪೇನು? – ಒಕ್ಕಲಿಗ ಸಂಘದ ಪತ್ರಕ್ಕೆ ಸಹಿ ಹಾಕಿದ್ದನ್ನು ಒಪ್ಪಿಕೊಂಡ ಡಿಕೆಶಿ
Advertisement
ಕಾಲಿಟ್ಟಲ್ಲಿ ಕಾಂಗ್ರೆಸ್ ಮುಳುಗಿಸಿದ ರಾಹುಲ್ ಗಾಂಧಿ ಶಕುನದ ಬಗ್ಗೆ ಮಾತನಾಡಿ ತಾವು ಯಾವ ಶಕುನ ಎಂದು ಜನತೆಗೆ ನೆನಪಿಸಿಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
Advertisement