ಬೆಂಗಳೂರು: ನಾಗಸಾಧುಗಳು ನಮ್ಮನೆಗೆ ಭೇಟಿ ನೀಡಿ ಅರ್ಧಗಂಟೆಗಳ ಕಾಲ ನನ್ನ ಜೊತೆ ಮಾತುಕತೆ ನಡೆಸಿದರು. ಕೇಂದ್ರದ ಮೋದಿ ಆಡಳಿತದ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿ ಆಶಿರ್ವಾದ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಾಧುಗಳ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಾಧುಗಳ ಭೇಟಿ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿ ಮಾತನಾಡಿದರು. ಸಾಮಾನ್ಯವಾಗಿ ನಾಗ ಸನ್ಯಾಸಿಗಳು ಯಾರ ಮನೆಗೂ ಹೋಗುವುದಿಲ್ಲ ಅದೂ ಅತೀ ಅಪರೂಪ. ಮೊನ್ನೆ ಇದ್ದಕ್ಕಿದ್ದ ಹಾಗೇ ನಮ್ಮ ಮನೆಗೆ ಸುಮಾರು 18 ಜನರ ನಾಗಾ ಸನ್ಯಾಸಿಗಳು ಗುಂಪು ಬಂದು ಅರ್ಧಗಂಟೆ ಕಾಯ್ದಿದ್ದಾರೆ, ನಾನು ದೇವನಹಳ್ಳಿಯಲ್ಲಿ ಬಿಜೆಪಿ ವಿಸ್ತಾರಕರ ಸಭೆಯಲ್ಲಿದ್ದೆ. ನಾಗಸಾಧುಗಳು ಮನೆಗೆ ಭೇಟಿ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದ ನಾನು ಓಡಿ ಬಂದೆ. ಬಳಿಕ ಸಾಧುಗಳ ಜೊತೆ ಅರ್ಧಗಂಟೆಗಳ ಕಾಲ ರಾಜಕೀಯ ಬೆಳವಣಿಗೆ ಕುರಿತು ಮಾತುಕತೆ ನಡೆಸಿದರು ಎಂದು ತಿಳಿಸಿದರು.
Advertisement
Advertisement
ಕೇಂದ್ರದಲ್ಲಿ ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶಂನೀಯ ಮಾತುಗಳನ್ನಾಡಿದರು. ಅಲ್ಲದೇ ಬರೋ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಪಕ್ಷ ಆಡಳಿತಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಚುನಾವಣೆ ಆದ ಮೇಲೆ ಮತ್ತೊಮ್ಮೆ ನಾವೆಲ್ಲಾ ನಿಮ್ಮನೆಗೆ ಭೇಟಿ ನೀಡುತ್ತೇವೆ ಎಂದು ಹೇಳಿ ನಾಗಸಾಧುಗಳು ಆಶಿರ್ವಾದ ಮಾಡಿದ್ದಾರೆ ಎಂದರು.
Advertisement
Advertisement
ಸಾಧುಗಳ ಆಶಿರ್ವಾದ ಅನಿರೀಕ್ಷಿತ, ನಮ್ಮ ಪೂರ್ವ ಜನ್ಮದ ಪುಣ್ಯಫಲ. ಹುಡುಕಿಕೊಂಡು ಹೋದರೂ ಸಿಗದ ಅಪರೂಪದ ವ್ಯಕ್ತಿಗಳು. ಅವರೇ ನೇರವಾಗಿ ನಮ್ಮ ಮನೆಗೆ ಬಂದು ಆಶಿರ್ವಾದ ಮಾಡಿ ಹೋಗಿದ್ದಾರೆ. ಇದು ನನ್ನ ಭಾಗ್ಯ ಎಂದು ಸಾಧುಗಳ ಭೇಟಿಯ ಬಗ್ಗೆ ಸ್ಪಷ್ಟಪಡಿಸಿದರು.