ಬೆಂಗಳೂರು: ರಾಜ್ಯ ಬಿಜೆಪಿ ಆಂತರಿಕ ಕಿತ್ತಾಟಕ್ಕೆ ಕೊನೆಗೂ ಹೈಕಮಾಂಡ್ ಕಠಿಣ ಸಂದೇಶವನ್ನು ಕಳಿಸಿದೆ. ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಮೂಲಕ ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿರೋ ಬಿಜೆಪಿ ಹೈಕಮಾಂಡ್, ಯಾರು ಕೂಡ ಬಹಿರಂಗವಾಗಿ ಮಾತಾಡದಂತೆ ಸೂಚಿಸಿದೆ.
ವಿಪಕ್ಷ ನಾಯಕ ಅಶೋಕ್ ಅವರನ್ನ ಬಿಜೆಪಿ ಕಚೇರಿಗೆ ಕರೆಸಿಕೊಂಡು ಸುಧಾಕರ್ ರೆಡ್ಡಿ ಮಾತುಕತೆ ನಡೆಸಿದರು. ಅಲ್ಲದೇ, ಯಾವುದೇ ನಾಯಕರು ಬಹಿರಂಗವಾಗಿ ಮಾತಾಡದಂತೆ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಬಹಿರಂಗವಾಗಿಯೇ ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿದರು.
Advertisement
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸುಧಾಕರ್ ರೆಡ್ಡಿ, ನಾನು ಪ್ರತಿಯೊಬ್ಬರಿಗೂ ಹೇಳುತ್ತೇನೆ. ಎಲ್ಲರೂ ಅತಿ ಮುಖ್ಯ ಹಿರಿಯರು. ಮಾಧ್ಯಮ ಮೂಲಕ ನಾವು ಎಲ್ಲರ ವ್ಯೂ ನೋಡಿದ್ದೇವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಆಂತರಿಕ ಚುನಾವಣಾ ಮುಕ್ತಾಯ ಆಗಿದೆ. ಕರ್ನಾಟಕದಲ್ಲಿ ಕೂಡ ಆ ಪ್ರೊಸಿಜರ್ ನಡೆಯುತ್ತಿದೆ. ಈಗಾಗಲೇ ಅನೇಕ ಜಿಲ್ಲಾಧ್ಯಕ್ಷರ ಆಯ್ಕೆ ಆಗಿದೆ. ಯಾರೇ ಮಾತಾಡುವುದು ಇದ್ದರೂ ಪಾರ್ಟಿ ವೇದಿಕೆಯಲ್ಲಿ ಮಾತಾಡಿ ಎಂದು ಮನವಿ ಮಾಡಿದರು.
Advertisement
ರಾಜ್ಯದ ಯಾವುದೇ ನಾಯಕರು ಆಗಲಿ A ಅಥವಾ B ಯಾರೇ ಆಗಲಿ, ಒಂದು ವೇದಿಕೆಯಲ್ಲಿ ಚರ್ಚೆ ಮಾಡಲಿ. ಪಾರ್ಟಿಯ ಗೈಡ್‌ಲೈನ್ಸ್ ಅಡಿ ನಡೆಯಬೇಕು. ಭ್ರಷ್ಟಾಚಾರದ ಕಾಂಗ್ರೆಸ್ ಇದೆ. ಜನರ ವಿರೋಧ ಕಾಂಗ್ರೆಸ್ ಮೇಲೆ ಇದೆ. ಸ್ವತಃ ಸಿದ್ದರಾಮಯ್ಯ ಆರೋಪ ಹೊತ್ತಿದ್ದಾರೆ. ಹೀಗಾಗಿ ಎಲ್ಲರೂ ಶಾಂತ ರೀತಿಯಲ್ಲಿ, ಸಹೋದರ ಭಾವದಲ್ಲಿ ಶಿಸ್ತಿನಿಂದ ನಡೆಯಬೇಕು. ಏನೇ ಸಮಸ್ಯೆ ಇದ್ದರೂ ಪಕ್ಷ ಅದನ್ನು ನೋಡಿಕೊಳ್ಳಲಿದೆ ಎಂದು ತಿಳಿಸಿದರು.