ಬೆಂಗಳೂರು: ತೈಲ ಬೆಲೆ ಏರಿಕೆಗೆ ಕೇಂದ್ರವೇ ಕಾರಣ ಅಂತಾ ಆರೋಪಿಸಿರೋ ಕಾಂಗ್ರೆಸ್, ನಾಳೆ(ಸೋಮವಾರ) ಭಾರತ್ ಬಂದ್‍ಗೆ ಕರೆ ನೀಡಿದೆ. ಬಿಜೆಪಿಯೇತರ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಕಡೆ ಬಂದ್ ಜೋರಾಗುವ ಸಾಧ್ಯತೆ ಇದೆ.
ಬಂದ್‍ಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ಘೋಷಿಸಿದೆ. ಹತ್ತಾರು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗಲಿರುವ ಬಂದ್ ಮಧ್ಯಾಹ್ನ 3 ಗಂಟೆವರೆಗೆ ಇರಲಿದೆ. ಹೀಗಾಗಿ, ನಾಳೆ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಿದೆ. ವಾರಾಂತ್ಯಕ್ಕೆ ಊರುಗಳಿಗೆ ಹೋಗಿರೋ ಜನ ವಾಪಸ್ ತಮ್ಮ ಮನೆ ಸೇರಿಕೊಂಡರೆ ಒಳಿತು.
Advertisement
Advertisement
ಪೆಟ್ರೋಲ್, ಡೀಸೆಲ್ ಬೆಲೆಯ ನಾಗಾಲೋಟದ ಜೊತೆಗೆ ಗ್ಯಾಸ್ ದರ ದುಪ್ಪಟ್ಟಿನಿಂದ ಜನ ಹೈರಾಣಾಗಿದ್ದಾರೆ. ಲೀಟರ್ ಪೆಟ್ರೋಲ್ ಬೆಲೆ 90 ರೂಪಾಯಿ, ಡೀಸೆಲೆ ಬೆಲೆ 75 ರೂಪಾಯಿ ಗಡಿ ತಲುಪಿದೆ. ದೆಹಲಿಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಪೆಟ್ರೋಲ್ ಲೀಟರ್‍ಗೆ 80.50 ರೂಪಾಯಿಗೇರಿದರೆ ಡೀಸೆಲ್ 72.61 ರೂಪಾಯಿಗೇರಿದೆ. ಇನ್ನು, ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 83.12 ಪೈಸೆ ರೂಪಾಯಿ ಇದ್ರೆ, ಡೀಸೆಲ್ ಬೆಲೆ 74.95 ಪೈಸೆ ಇದ್ದು, ಹೀಗಾಗಿ ಕಾಂಗ್ರೆಸ್ ಬಂದ್ ಗೆ ಕರೆ ನೀಡಿದೆ.
Advertisement
ಭಾರತ್ ಬಂದ್ ದಿನ ಬೆಂಗಳೂರಿನಲ್ಲಿ ಏನೆಲ್ಲಾ ಇರಲ್ಲ?
1. ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್
2. ಆಟೋ, ಓಲಾ, ಉಬರ್ ಕ್ಯಾಬ್, ಐಟಿ-ಬಿಟಿ ಬಸ್‍ಗಳು
3. ಚಿತ್ರ ಪ್ರದರ್ಶನ ಬಂದ್ ಸಾಧ್ಯತೆ
4. ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ (ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು)
5. ಶಾಪಿಂಗ್ ಮಾಲ್ ಸಾಧ್ಯತೆ
6. ಖಾಸಗಿ ಶಾಲೆಗಳು, ಖಾಸಗಿ ಶಾಲಾ-ಕಾಲೇಜ್ ಬಸ್‍ಗಳು
Advertisement
ಬಂದ್ ದಿನ ಏನೆಲ್ಲಾ ಇರುತ್ತೆ
1. ಮೆಟ್ರೋ ರೈಲು ಸಂಚಾರ
2. ಔಷಧಿ ಮಳಿಗೆ
3. ಆಸ್ಪತ್ರೆ
4. ತರಕಾರಿ
5. ಹಾಲು ಸರಬರಾಜು
6. ತುರ್ತು ಸೇವೆಗಳು
ಏನೂ ನಿರ್ಧಾರ ಇಲ್ಲ
1. ಸರ್ಕಾರಿ ಕಚೇರಿ, ಶಾಲೆಗಳು
2. ಬ್ಯಾಂಕ್‍ಗಳು
3. ಅಡುಗೆ ಅನಿಲ, ತೈಲ ಪೂರೈಕೆ ವಾಹನಗಳು
4. ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ
5. ಕಟ್ಟಡ ನಿರ್ಮಾಣ ವಸ್ತು ಸಾಗಣೆದಾರರು
6. ಗಾರ್ಮೆಂಟ್ಸ್
ರಾಜ್ಯದಲ್ಲಿ ಯಾವ ಜಿಲ್ಲೆಗಳು ಬಂದ್‍ಗೆ ಬೆಂಬಲ ನೀಡಿವೆ?
* ಬಾಗಲಕೋಟೆ – ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಉಳಿದಂತೆ ಯಾವ ಸಂಘಟನೆಗಳು ಅಧಿಕೃತವಾಗಿ ಬಂದ್ ಬೆಂಬಲ ವ್ಯಕ್ತಪಡಿಸಿಲ್ಲ
* ಬೀದರ್ – ಬೀದರ್ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಉಳಿದಂತೆ ಯಾವ ಸಂಘಟನೆಗಳು ಇನ್ನು ಅಧಿಕೃತವಾಗಿ ಬಂದ್ ಬೆಂಬಲ ವ್ಯಕ್ತಪಡಿಸಿಲ್ಲ
* ವಿಜಯಪುರ– ಜಿಲ್ಲಾ ಕಾಂಗ್ರೆಸ್ ಸಜ್ಜಾಗಿ ಬಂದ್‍ಗೆ ಕರೆ ನೀಡಿದೆ
* ಚಿಕ್ಕಮಗಳೂರು– ಕಾಂಗ್ರೆಸ್, ಜೆಡಿಎಸ್‍ಗೆ ವಿವಿಧ ಕನ್ನಡ ಪರ ಸಂಘಟನೆಗಳ ಬೆಂಬಲ
* ದಾವಣಗೆರೆ– ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ
* ಕಲಬುರಗಿ- ಕಾಂಗ್ರೆಸ್ ಕಾರ್ಯಕರ್ತರ ಬೆಂಬಲ
* ಹಾಸನ – ಹಾಸನ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗುವ ಸಾಧ್ಯತೆ
* ಕಾರವಾರ- ಉತ್ತರ ಕನ್ನಡದಲ್ಲಿ ಕಾಂಗ್ರೆಸ್‍ನಿಂದ ಸಾಂಕೇತಿಕ ಪ್ರತಿಭಟನೆ
* ಕೋಲಾರ- ಕೋಲಾರ ಜನರು ಬೆಂಬಲ ಸೂಚಿಸುವಂತೆ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ ಮನವಿ
* ಮೈಸೂರು– ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಬೆಂಬಲ
* ತುಮಕೂರು- ಕಾಂಗ್ರೆಸ್ ವತಿಯಿಂದ ಬಂದ್‍ಗೆ ಕಾಲ್
* ಆನೇಕಲ್– ಕಾಂಗ್ರೆಸ್ ವತಿಯಿಂದ ಬಂದ್
* ಹಾವೇರಿ – ಕಾಂಗ್ರೆಸ್ ಬೆಂಬಲ
* ಮಂಗಳೂರು- ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್‍ಗೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv