ಕನ್ನಡಪರ ಸಂಘಟನೆಗಳು ನೀಡಿದ ಕರ್ನಾಟಕದ ಬಂದ್ ಕರೆಯನ್ನು ಗಂಭೀರವಾಗಿ ಸ್ವೀಕರಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (Film Chamber), ತನ್ನ ಅಂಗ ಸಂಸ್ಥೆಗಳೊಂದಿಗೆ ಜೊತೆಯಾಗಿ ಇಂದು ಬೀದಿಗೆ ಇಳಿದು ಹೋರಾಟ ಮಾಡಲಿದೆ. ಬೆಳಗ್ಗೆಯಿಂದಲೇ ಎಲ್ಲ ಚಿತ್ರಮಂದಿರಗಳು ಬಾಗಿಲು ಹಾಕಿವೆ. ಕರ್ನಾಟಕದಲ್ಲಿ ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ. ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ಚಿತ್ರೀಕರಣಕ್ಕೆ ಯಾವುದೇ ಅಡೆತಡೆ ಇಲ್ಲ.
Advertisement
ಇಂದು ಬೆಳಗ್ಗೆ ಹತ್ತು ಗಂಟೆಗೆ ವಾಣಿಜ್ಯ (Sandalwood) ಮಂಡಳಿಯ ಪಕ್ಕದಲ್ಲಿರುವ ಕಲ್ಯಾಣ ಮಂಟಪದಲ್ಲಿ ಕಲಾವಿದರು ಮತ್ತು ತಂತ್ರಜ್ಞರು ಒಗ್ಗೂಡಲಿದ್ದಾರೆ. ಅಲ್ಲಿಂದ ಯಾವ ರೀತಿ ಹೋರಾಟ ಮಾಡಬೇಕು ಎನ್ನುವ ಕುರಿತಂತೆ ಚರ್ಚಿಸಿ ನಂತರ ಮುಂದಿನ ಹೋರಾಟಕ್ಕೆ ಕಲಾವಿದರು ಇಳಿಯಲಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:ಟಾಲಿವುಡ್‌ನಲ್ಲಿ ರುಕ್ಮಿಣಿ ವಸಂತ್‌ಗೆ ಭರ್ಜರಿ ಡಿಮ್ಯಾಂಡ್
Advertisement
Advertisement
ಈಗಾಗಲೇ ಹಲವು ಕಲಾವಿದರು ಹೋರಾಟದಲ್ಲಿ ಭಾಗಿಯಾಗುವ ಕುರಿತು ಸಮ್ಮತಿ ಸೂಚಿಸಿದ್ದಾರೆ. ಇನ್ನೂ ಹಲವು ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಕೆಲವು ಕಲಾವಿದರು ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲೂ ಭಾಗಿಯಾಗಿದ್ದಾರೆ.
Advertisement
ಇಂದು ನಡೆಯುವ ಹೋರಾಟದಲ್ಲಿ (Cauvery Protest) ಶಿವರಾಜ್ ಕುಮಾರ್ (Shivaraj Kumar) ನೇತೃತ್ವ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಈ ಕುರಿತು ಯಾರೂ ಮಾಹಿತಿಯನ್ನು ಹಂಚಿಕೊಂಡಿಲ್ಲ. ಕರ್ನಾಟಕ ಬಂದ್ ದಿಢೀರ್ ಆಗಿರುವಂತಹ ಪ್ರತಿಭಟನೆ ಆಗಿರುವುದರಿಂದ ಕೆಲವು ಕಲಾವಿದರು ಮೊದಲೇ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
Web Stories