ಕೋಲಾರ: ಇಂದು ಕನ್ನಡಪರ ಸಂಘಟನೆಗಳು ನೀಡಿದ್ದ `ಕರ್ನಾಟಕ ಬಂದ್’ಗೆ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೆ ಬಹುತೇಕ ಮದುವೆಗೆ ಬರಬೇಕಾದ ಜನ ಬರದೇ ಮಂಟಪಗಳು ಬಿಕೋ ಎನ್ನುತ್ತಿದ್ದವು.
ನಗರದ ವಕೀಲ ಕೋದಂಡಪ್ಪನವರ ಮಗ ವೀರೇಂದ್ರ ಹಾಗೂ ಚಿತ್ರಾ ಎಂಬವರ ಮದುವೆಗೂ ಬಂದ್ ಬಿಸಿ ತಟ್ಟಿತ್ತು. ಬಂದ್‍ನಿಂದಾಗಿ ಮದುವೆಗಳಿಗೆ ಬರಬೇಕಾದ ಬಂಧುಗಳು ಹಾಗು ಸ್ನೇಹಿತರು ಬರದೇ ಇದ್ದಿದರಿಂದ ಕಲ್ಯಾಣ ಮಂಟಪಗಳು ಜನರಿಲ್ಲದೇ ಖಾಲಿ ಖಾಲಿಯಾಗಿತ್ತು.
ಬಂಧುಗಳು ಬರದೇ ಇದಿದ್ದರಿಂದ ಮಾಡಿದ್ದ ಅಡುಗೆ ಹಾಗೆಯೇ ಉಳಿದಿತ್ತು. ಮದುವೆ ಮನೆಯವರ ಆಹ್ವಾನದ ಮೇರೆಗೆ ಹೋರಾಟಗಾರರೆಲ್ಲರೂ ಬಂದು ಊಟ ಮಾಡಿದ್ದಾರೆ. ಪ್ರತಿಭಟನೆ ಮಾಡಿ ಸುಸ್ತಾಗಿದ್ದ ಪ್ರತಿಭಟನಾಕಾರರು ರುಚಿಯಾದ ಊಟ ಮಾಡಿ ತಮ್ಮ ಹಸಿವು ನೀಗಿಸಿಕೊಂಡರು.
https://www.youtube.com/watch?v=8OR7M716AWI