ಬೆಂಗಳೂರು: ರಾಜ್ಯಾದ್ಯಂತ ಕರೆ ನೀಡಿರುವ ಬಂದ್ ಗೆ ಅವಕಾಶ ಇಲ್ಲ ಎಂದು ಉತ್ತರ ವಿಭಾಗದ ಡಿಸಿಪಿ ಲಾಬೂರಾಂ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ.
ನೋಟಿಸ್ ನಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬಂದ್‍ಗೆ ಕರೆ ನೀಡಿದವರೇ ಜವಾಬ್ದಾರರಾಗಿರುತ್ತಾರೆ. ಹೀಗಾಗಿ ಬಂದ್ ವೇಳೆ ರಾಜ್ಯದಲ್ಲಿ ಯಾವುದಾದರೂ ಅಹಿತರ ಘಟನೆಗಳು ನಡೆದರೆ ಅದಕ್ಕೆ ಬಂದ್ ಗೆ ಕರೆ ನೀಡಿರುವವರೇ ಹೊಣೆಗಾರರು ಅಂತಾ ತಿಳಿಸಲಾಗಿದೆ.
ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಬಂದ್‍ಗೆ ಕರೆ ನೀಡಿದೆ. ಆದ್ರೆ ಈ ಬಂದ್ ಗೆ ಇದೀಗ ರಾಜ್ಯದ ಬಹುತೇಕ ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ: ಬೆಂಗ್ಳೂರಲ್ಲಿ ಎಂದಿನಂತೆ ಬಿಎಂಟಿಸಿ ಬಸ್‍ಗಳ ಓಡಾಟ
ಬೆಂಗಳೂರಿನಲ್ಲಿ ಈಗಾಗಲೇ ಬಿಎಸಂಟಿಸಿ ಬಸ್ ಗಳು ಸೇರಿದಂತೆ ಎಲ್ಲಾ ವಾಹನಗಳು ರಸ್ತೆಗಿಳಿದಿವೆ. ಆದ್ರೆ ಚಲನಚಿತ್ರ ಪ್ರದರ್ಶಗಳು ಇಂದು ರದ್ದಾಗುವ ಸಾಧ್ಯತೆಗಳಿವೆ.