ಬೆಂಗಳೂರು: ಕರ್ನಾಟಕ ಬಂದ್ (Karnataka Bandh) ವೇಳೆ ಬಿಜೆಪಿ (BJP) ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ಸರ್ಕಾರ ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ ಭಾಗ್ಯವನ್ನು ಪರಿಚಯಿಸಿದೆ ಎಂದು ಕಿಡಿಕಾರಿದೆ.
ಟ್ವಿಟ್ಟರ್‌ನಲ್ಲಿ ಬಿಜೆಪಿ, ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬುದು ಹಳೇ ಗಾದೆ. ಊರು ಕೊಳ್ಳೆ ಹೊಡ್ಸಿದ್ರು, ಆಮೇಲೆ ಕೋಟೆ ಬಾಗಿಲು ಹಾಕುವ ನಾಟಕ ಆಡಿಸಿದರು. ಇದು ಕ್ರಾಂಗೆಸ್ ಸರ್ಕಾರ ನೋಡಿ ಮಾಡಿರುವ ಹೊಸ ಗಾದೆ ಎಂದು ವ್ಯಂಗ್ಯವಾಡಿದೆ. ಇದನ್ನೂ ಓದಿ: ಕಾವೇರಿ ತವರು ಕೊಡಗಿನಲ್ಲೇ ತಟ್ಟದ ಬಂದ್ ಬಿಸಿ
ಕರ್ನಾಟಕದ ಕಾವೇರಿಯನ್ನು (Cauvery Water) ಸ್ಟಾಲಿನ್ ನಾಡಿನ ರೈತರಿಗೆ ಎರೆಡೆರಡು ಬೆಳೆ ಬೆಳೆಯಲು ಹರಿಸಲಾಗುತ್ತಿದೆ. ಸರ್ಕಾರ ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ `ಕರ್ನಾಟಕ ಮಾಡೆಲ್’ನ್ನು ಪರಿಚಯಿಸುತ್ತಿದೆ. ಇದು ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.
ರಾಜ್ಯದೆಲ್ಲೆಡೆ ಕಾವೇರಿ ವಿಚಾರವಾಗಿ ಕೂಗು ಕೇಳಿಬರುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದೆ. ಪ್ರತಿಭಟನೆ ವೇಳೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ನಡುವೆಯೇ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ
Web Stories