ಬೆಂಗಳೂರು: ಶಕ್ತಿ ಯೋಜನೆ (Shakti Scheme) ಜಾರಿಯಾಗಿದ್ದರಿಂದ ಮಹಿಳೆಯರೇನೋ ಪುಲ್ ಖುಷ್ ಆಗಿದ್ದಾರೆ. ಆದರೆ ಖಾಸಗಿ ಸಾರಿಗೆ ಸಂಘಟನೆಗಳು ಹಾಗೂ ಸರ್ಕಾರದ ಜಟಾಪಟಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸೋಮವಾರ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮುಖ್ಯಮಂತ್ರಿಗಳು ಕರೆದ ಸಭೆಯನ್ನು ಕೆಲ ಖಾಸಗಿ ಸಾರಿಗೆ ಸಂಘಟನೆಗಳು ಬಹಿಷ್ಕರಿಸಿವೆ. ಜೊತೆಗೆ ಸರ್ಕಾರಕ್ಕೆ ಮತ್ತೊಮ್ಮೆ ಬೆಂಗಳೂರು ಬಂದ್ (Bengaluru Bandh) ಅಥವಾ ಕರ್ನಾಟಕ ಬಂದ್ (Karnataka Bandh) ಮಾಡುವ ಎಚ್ಚರಿಕೆ ನೀಡಿವೆ.
ಶಕ್ತಿ ಯೋಜನೆ ಜಾರಿ ಆದ ನಂತರ ಖಾಸಗಿ ಸಾರಿಗೆ ಉದ್ಯಮಕ್ಕೆ ಎದುರಾದ ಸಂಕಷ್ಟಗಳ ಕುರಿತಂತೆ ಆಗಾಗ್ಗೆ ಆಕ್ರೋಶ ವ್ಯಕ್ತವಾಗುತ್ತಿತ್ತು. ಇದರ ಗಂಭೀರತೆ ಅರಿತ ಸಚಿವ ರಾಮಲಿಂಗಾರೆಡ್ಡಿ ಹಲವು ಸುತ್ತಿನ ಮಾತುಕತೆ ಸಹ ನಡೆಸಿದ್ದರು. ಆದರೆ ಯಾವುದಕ್ಕೂ ತಾರ್ಕಿಕ ಅಂತ್ಯ ಸಿಗದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ನೇತತ್ವದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಸಾರಿಗೆ ಒಕ್ಕೂಟದ ಸದಸ್ಯರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
Advertisement
Advertisement
ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗಿ ಆಗಿದ್ದರು. ಆದರೆ ಈ ಸಭೆಗೆ ಬಂದ್‌ಗೆ ಕರೆಕೊಟ್ಟಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಅಧ್ಯಕ್ಷ ಹಾಗೂ ಖಾಸಗಿ ಬಸ್ ಸಂಘಟನೆಯ ಅಧ್ಯಕ್ಷ ನಟರಾಜಶರ್ಮಾ, ಪೀಸ್ ಆಟೋ ಅಸೋಸಿಯೇಷನ್‌ನ ರಾಘು, ರಾಧಾಕೃಷ್ಣ ಹೊಳ್ಳ ಸಂಘಟನೆಯವರು ಸಿಎಂ ಸಭೆಯನ್ನು ಬಹಿಷ್ಕರಿಸಿದರು.
Advertisement
ಈ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ, ಸಾರಿಗೆ ಸಚಿವರ ಆಶ್ವಾಸನೆ ಮೇರೆಗೆ ಬಂದ್ ವಾಪಾಸ್ ಪಡೆದಿದ್ದೆವು. ಆದರೆ ಹೋರಾಟಕ್ಕೆ ಬೆಂಬಲ ಸೂಚಿಸದ ಸಂಘಟನೆಗಳನ್ನು ಸಭೆಗೆ ಕರೆಯಲಾಗಿದೆ. ಸಾರಿಗೆ ಅಡಿಷನಲ್ ಕಮೀಷನರ್, ಹೇಮಂತ್ ಕುಮಾರ್ ಸಂಘಗಳನ್ನು ಒಡೆಯೋ ಕೆಲಸ ಮಾಡುತ್ತಾರೆ. ಹೇಮಂತ್ ಕುಮಾರ್ ವರ್ಗಾವಣೆಗೆ ಕಮಿಷನರ್‌ಗೆ ಮನವಿ ಮಾಡಿದ್ದೇವೆ. ಸಿಎಂ ಸಭೆಗೆ 32 ಸಂಘಟನೆಗಳು ಬಹಿಷ್ಕರಿಸಿದ್ದೇವೆ. ಸಿಎಂ ಸಭೆಯನ್ನು ತುಚ್ಚವಾಗಿ ನೋಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನೂ 10 ದಿನ ಕಾಲಾವಕಾಶವಿದ್ದು ಅಷ್ಟರೊಳಗೆ ಮತ್ತೆ ಎಲ್ಲಾ ಸಂಘಟನೆಗಳು ಸೇರಿ ಸಭೆ ಕರೆಯಬೇಕು. ಇಲ್ಲದಿದ್ದರೆ ಹೋರಾಟದ ದಾರಿ ಹಿಡಿಯುತ್ತೇವೆ. ಸೆಪ್ಟೆಂಬರ್ 1 ರಂದು ಬೆಂಗಳೂರು ಅಥವಾ ಕರ್ನಾಟಕ ಬಂದ್ ದಿನಾಂಕ ಪ್ರಕಟಿಸುತ್ತೇವೆ ಎಂದರು.
Advertisement
ಸೋಮವಾರದ ಸಿಎಂ ಸಭೆಯಲ್ಲಿ ಭಾಗವಹಿಸಿದ ಆದರ್ಶ್ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಸಭೆಯಲ್ಲಿ ಭಾಗಿಯಾದ ಮಂಜುನಾಥ್ ಮಾತನಾಡಿ, ಆಟೋ ಅಸೋಸಿಯೇಷನ್‌ನ ಬೇಡಿಕೆಗೆ ಮನವಿ ಮಾಡಿದ್ದೇವೆ. 30 ರವರೆಗೆ ಗಡವು ನೀಡಲಾಗಿದೆ. ಬೇಡಿಕೆ ಈಡೇರದೇ ಇದ್ದರೆ ಮತ್ತೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇನ್ಮುಂದೆ ಲಗೇಜ್‌ಗಳನ್ನು ಸಾಗಿಸಲು ರಸ್ತೆಗಿಳಿಯಲಿದೆ KSRTC ಲಾರಿ
ಒಟ್ಟಿನಲ್ಲಿ ಸಿಎಂ ಆಶ್ವಾಸನೆಗೆ ಕೆಲ ಒಕ್ಕೂಟಗಳು ಸಮ್ಮತ ವ್ಯಕ್ತಪಡಿಸಿದರೆ ಇನ್ನೂ ಕೆಲವು ಸಂಘಟನೆಗಳು ವಿರೋಧಿಸಿವೆ. ಯಾವಾಗ ಈ ಭರವಸೆಗಳು ಕಾರ್ಯರೂಪಕ್ಕೆ ಬರುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. ಇಲ್ಲದಿದ್ದರೆ ಸಾರಿಗೆ ಒಕ್ಕೂಟಗಳು ಮತ್ತೆ ಹೋರಾಟದ ಹಾದಿ ತುಳಿಯುವುದು ಪಕ್ಕ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಓಡಾಡುವವರೇ ಎಚ್ಚರ – ಇಂದು ಕಾವೇರಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ
Web Stories