ಡಿ.13ರಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನ

Public TV
1 Min Read
suvarna vidhana soudha

ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಡಿ.13 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಕರೆಯುವಂತೆ ಅಧಿಸೂಚನೆ ಹೊರಡಿಸಲಾಗಿದೆ.

GEHLOT 2

ಈ ಸಂಬಂಧ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಡಿ.13 ರಿಂದ 24 ರವರೆಗೆ ಚಳಿಗಾಲದ ಅಧಿವೇಶನಕ್ಕೆ ನಿರ್ಧರಿಸಲಾಗಿದ್ದು, 10 ದಿನ ಕಲಾಪ ನಡೆಯಲಿದೆ. ಇದನ್ನೂ ಓದಿ: ಈಗಲೂ ರೈತರು ಪ್ರತಿಭಟನೆ ಮಾಡುತ್ತಿರುವುದು ಯಾಕೆ – ಅಮರಿಂದರ್ ಪ್ರಶ್ನೆ

belagavi winter session

ಪ್ರವಾಹ ಹಾಗೂ ಕೋವಿಡ್‌ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಿರಲಿಲ್ಲ. ಇದೀಗ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಉಪಚುನಾವಣೆಯಲ್ಲಿ ಹಿನ್ನಡೆ, ಪಂಚರಾಜ್ಯಗಳ ಚುನಾವಣೆಯ ಮೇಲೆ ಕಣ್ಣು – ಕೃಷಿ ಕಾಯ್ದೆ ವಾಪಸ್‌!

Share This Article
Leave a Comment

Leave a Reply

Your email address will not be published. Required fields are marked *