ಬೆಂಗಳೂರು: ಯಾವುದೇ ಮುಲಾಜಿಲ್ಲದೆ ಬೆಂಗಳೂರಿನ ರಾಜಕಾಲುವೆ ತೆರವು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು.
ವಿಧಾನಸಭೆಯಲ್ಲಿ(Session) ಪ್ರಶ್ನೋತ್ತರ ವೇಳೆಯಲ್ಲಿ ಕೃಷ್ಣ ಭೈರೇಗೌಡ(Krishna Byre Gowda) ಪ್ರಸ್ತಾಪಕ್ಕೆ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಮಳೆಯಿಂದ ಬೆಂಗಳೂರಿಗೆ(Benagaluru) ಆಗುವ ಅನಾಹುತ ತಪ್ಪಿಸಲು ರಾಜಕಾಲುವೆಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಕೆರೆಗಳಿಗೆ ಸ್ಟ್ಲೂಯೀಸ್ ಗೇಟ್‌ಗಳನ್ನು ಅಳವಡಿಸಲು ಆದೇಶಿಸಿದ್ದೇವೆ ಎಂದು ಹೇಳಿದರು. ರಾಜಕಾಲುವೆಗಳ ಮಾಸ್ಟರ್ ಪ್ಲಾನ್‌ನ್ನು ಮತ್ತೆ ಪರಿಷ್ಕರಿಸುತ್ತೇವೆ. ಕಾಲಮಿತಿಯೊಳಗೆ 1,800 ಕೋಟಿ ರೂ. ವೆಚ್ಚದಲ್ಲಿ ರಾಜ ಕಾಲುವೆ ಅಭಿವೃದ್ಧಿಪಡಿಸುತ್ತೇವೆ ಎಂದರು.
Advertisement
Advertisement
ಬೆಂಗಳೂರು ನಗರದಲ್ಲಿ 859 ಕಿ.ಮೀ ರಾಜಕಾಲುವೆ ಇದೆ. ಈ ಪೈಕಿ 450 ಕಿ.ಮೀ ಅಭಿವೃದ್ಧಿಗೆ ಬಾಕಿಯಿದ್ದು, ಕಳೆದ ಬಾರಿ 1,500 ಕೋಟಿ ನೀಡಿದ್ದು, ಈ ಬಾರಿ ಮತ್ತೆ ಹೆಚ್ಚುವರಿಯಾಗಿ 300 ಕೋಟಿ ರೂ. ನೀಡುತ್ತೇವೆ. ಎರಡು ವರ್ಷದಲ್ಲಿ ನಾವು ಈ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಎಂದು ವಿಧಾನಸಭೆಗೆ ತಿಳಿಸಿದರು.
Advertisement
ಬೆಂಗಳೂರಿನ 8 ವಿಭಾಗಗಳ ಪೈಕಿ ಎರಡು ಕಡೆ ಮಾತ್ರ ರಾಜಕಾಲುವೆ ಸಮಸ್ಯೆ ಹೆಚ್ಚಿದೆ. ಅದರಲ್ಲೂ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಮಸ್ಯೆ ಹೆಚ್ಚಿದೆ. ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಅತಿಕ್ರಮಣ ಮಾಡಿರುವುದು ಅಡ್ಡಿಯಾಗಿವೆ. ಮೊದಲು ಕಟ್ಟಡ ಅತಿಕ್ರಮಣಗಳನ್ನು ತೆರವುಗೊಳಿಸಿ ರಾಜಕಾಲುವೆಗಳ ಅಭಿವೃದ್ಧಿ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಸಮಯ ಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಆಗಿದ್ದ ಕಾಮಗಾರಿಗಳು ಈಗ ನಡೆಯುತ್ತಿವೆ. ಸಂಪೂರ್ಣ ರಾಜಕಾಲುವೆಗಳ ಅಭಿವೃದ್ಧಿಗೆ ಒಂದೂವರೆ ವರ್ಷವಾದರೂ ಬೇಕಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಸಿಳಿದರು. ಇದನ್ನೂ ಓದಿ: ಗಾಯಾಳನ್ನು ಆಸ್ಪತ್ರೆಗೆ ಹೊತ್ತು ತಂದ ಬುಲ್ಡೋಜರ್
Advertisement
ಇದಕ್ಕೂ ಮೊದಲು ಪ್ರಶ್ನೆ ಕೇಳಿದ ಶಾಸಕ ಕೃಷ್ಣ ಭೈರೇಗೌಡ ಅವರು, ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಸಮಸ್ಯೆಗಳಿಂದ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆಯಾಗಿದೆ. ಸರ್ಕಾರ ಬೇರೆಯವರನ್ನು ದೂಷಿಸದೆ, ರಾಜಕಾಲುವೆಗಳ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ರಾಜಕಾಲುವೆ ಒತ್ತುವರಿ ತೆರವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಎಂದು ಮನವಿ ಮಾಡಿಕೊಂಡರು. ಅಲ್ಲದೆ ಒತ್ತುವರಿ ತೆರವಿಗೆ ವಿರೋಧ ಪಕ್ಷದವರು ಸಹಕಾರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾನೇನು ಸ್ವಂತ ಬೋಟ್‌ನಲ್ಲಿ ಹೋಗಿದ್ನಾ; ಬೇಕಿದ್ರೆ ಲಿಂಬಾವಳಿ ಕೇಳಿ?: ಸಿದ್ದು ಬೋಟ್ ಪ್ರಸಂಗ