ಬೆಂಗಳೂರು: ವಿಧಾನಸಭೆಯಲ್ಲಿ (Vidhana Sabha Session) ಸುಪಾರಿ ಗಲಾಟೆ ಜೋರಾಗಿಯೇ ನಡೆಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ (Valmiki Scam) ಬಗ್ಗೆ ಚರ್ಚೆ ವೇಳೆ ಶಿವಮೊಗ್ಗ ಬಿಜೆಪಿ (BJP) ಶಾಸಕ ಚೆನ್ನಬಸಪ್ಪ (S N Channabasappa) ಮಾಡಿದ ಆರೋಪ ಗದ್ದಲಕ್ಕೆ ಕಾರವಾಣವಾಯಿತು.
ವಾಲ್ಮೀಕಿ ನಿಯಮದ ಹಗರಣಕ್ಕೆ ಯಾರು ಬಲಿಯಾಗಿದ್ದಾರೆ? ಅವರ ಬಗ್ಗೆ ಯಾರೂ ಮಾತಾಡ್ತಿಲ್ಲ. ಶಿವಮೊಗ್ಗದ ಮತದಾರ ಆತ. ಆತನ ಕೊಲೆ ಮಾಡಿದ್ದು ಸರ್ಕಾರದ ವ್ಯವಸ್ಥೆ. ಹಿಂದೆ ರೌಡಿಗಳಿಗೆ ಸುಪಾರಿ ಕೊಡುತ್ತಿದ್ದರು. ಈಗ ಸರ್ಕಾರವೇ ಸುಪಾರಿ ಕೊಟ್ಟು ಕೊಲೆಗೆ ಕಾರಣವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು. ಈ ಹೇಳಿಕೆಗೆ ಕಾಂಗ್ರೆಸ್ (Congress) ಸದಸ್ಯರು, ಸರ್ಕಾರ ಸುಪಾರಿ ಕೊಟ್ಟಿಲ್ಲ. ಅವರ ಹೇಳಿಕೆಯನ್ನು ಕಡತದಿಂದ ತೆಗೆಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: 7 ದಿನಗಳ ಕಾಲ ಜಿ.ಟಿ ಮಾಲ್ ಮುಚ್ಚಿಸುತ್ತೇವೆ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಘೋಷಣೆ
Advertisement
Advertisement
`ಸುಪಾರಿ’ ಎಂದರೆ ಏನು ಎಂದು ಹೇಳಬೇಕು. ನಾನು ಸದನದ ಸದಸ್ಯನಾಗಿ ಕೇಳುತ್ತಿದ್ದೇನೆ. ಈ ಬಗ್ಗೆ ವಿವರಣೆ ನೀಡಬೇಕು ಎಂದು ಸಚಿವ ಬೈರತಿ ಸುರೇಶ್ ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ ಖರ್ಗೆ, ಈ ಹಿಂದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಆಗಿತ್ತು. ಹಾಗಾದರೆ ಹಿಂದಿನ ಸರ್ಕಾರ ಸುಪಾರಿ ಕೊಟ್ಟಿತ್ತಾ? ಎಂದು ಪ್ರಶ್ನಿಸಿದರು.
Advertisement
Advertisement
ಇದೇ ವೇಳೆ ಸಚಿವ ಹೆಚ್.ಕೆ ಪಾಟೀಲ್ ಮಧ್ಯಪ್ರವೇಶ ಮಾಡಿ, ಸುಪಾರಿ ಅಂದ್ರೆ ಕೊಲೆ ಮಾಡಿಸಲು ಕೊಡುವಂತಹ ಕಾಂಟ್ರ್ಯಾಕ್ಟ್. ಈ ಪದ ಬಳಸೋದು ಗೌರವವೂ ಅಲ್ಲ, ಕಡತದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿದರು. ಬಳಿಕ ಸರ್ಕಾರ `ಸುಪಾರಿ’ ನೀಡಿದೆ ಎಂಬ ಪದ ತೆಗೆಯುವಂತೆ ಸ್ಪೀಕರ್ ಪೀಠದಲ್ಲಿದ್ದ ಡೆಪ್ಯೂಟಿ ಸ್ಪೀಕರ್ ರೂಲಿಂಗ್ ನೀಡಿ ಗದ್ದಲ ತಣ್ಣಗಾಗಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲೇ ಇಂದಿರಾ ಕ್ಯಾಂಟೀನ್ ಬಂದ್ – ಬೆಂಗಳೂರಲ್ಲಿ 15ಕ್ಕೂ ಹೆಚ್ಚು ಕ್ಯಾಂಟೀನ್‌ಗಳಿಗೆ ಬೀಗ