ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ

Advertisements

ಬೆಂಗಳೂರು: ಇಂದಿನ ಕಲಾಪದಲ್ಲಿ ಪಿಎಸ್‍ಐ (PSI) ಅಕ್ರಮ ನೇಮಕಾತಿಯ ಚರ್ಚೆಗೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ಹಾಗೂ ವಾಕ್ಸಮರವೇ ನಡೆದು ಹೋಯಿತು. ಈ ವೇಳೆ ಸಚಿವ ಮಾಧುಸ್ವಾಮಿ, ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ ಎಂದು ಗರಂ ಆದರು.

Advertisements

ಇತ್ತೀಚೆಗೆ ನಡೆದ ಘಟನೆ ಬಗ್ಗೆ ಚರ್ಚೆ ಮಾಡಬೇಕು ಅಂತ ನಿಯಮ ಹೇಳುತ್ತೆ. ಪಿಎಸ್‍ಐ ಪ್ರಕರಣ ನಡೆದು ಏಳು ತಿಂಗಳಾಗಿದೆ. ಈ ವಿಷಯದ ಚರ್ಚೆಗೆ ನನ್ನ ತಕರಾರಿದೆ ಅಂತ ಮಧುಸ್ವಾಮಿ (Madhuswamy) ಹೇಳಿದರು. ಈ ವೇಳೆ ಕಾಂಗ್ರೆಸ್ (Congress) ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿರುದ್ಧ ಸಚಿವರು ಸಿಟ್ಟಾದರು. ನಮಗೆ ಮಾತಾಡಲು ಬಿಡಿ, ಸರ್ಕಾರ ನಡೆಸ್ತಿರೋರು ನಾವು. ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ ಅಂತ ಗರಂ ಆದರು. ಆಗ ಕಾಂಗ್ರೆಸ್ ಸದಸ್ಯರು, ಕತ್ತೆ ಕಾಯೋಕೇ ಇರೋದು ಇನ್ನೇನಕ್ಕೆ ಇದ್ದೀರಿ ಅಂತ ಮಾಧುಸ್ವಾಮಿಗೆ ತಿರುಗೇಟು ಕೊಟ್ಟರು. ಪರಿಣಾಮ ಸದನದಲ್ಲಿ ಮತ್ತೆ ಕೋಲಾಹಲ ಎದ್ದಿದೆ.

Advertisements

ನಿಯಮ 60 ರ ಬದಲು ಬೇರೆ ನಿಯಮದಲ್ಲಿ ಚರ್ಚೆ ಮಾಡಿ. ನಾವೂ ಚರ್ಚೆಗೆ ಸಿದ್ಧ, ಯಾರ್ಯಾರ ಕಾಲದಲ್ಲಿ ಏನೇನು ಅಕ್ರಮ ಆಗಿದೆ ಅಂತ ಹೇಳ್ತೀವಿ. ಪ್ರಕರಣ ತನಿಖೆಗೆ ಕೊಟ್ಟವರು ನಾವು, ಎಡಿಜಿಪಿ (ADGP) ಬಂಧಿಸಿದ್ದು ನಾವು, ನಾವೂ ಚರ್ಚೆಗೆ ಸಿದ್ಧ, ಬೇರೆ ನಿಯಮದಲ್ಲಿ ಚರ್ಚಿಸೋಣ ಎಂದು ಮಧುಸ್ವಾಮಿ ಹೇಳಿದರು. ಮಾಧುಸ್ವಾಮಿಯ ಸ್ಪಷ್ಟನೆಗೆ ಸಿದ್ದರಾಮಯ್ಯ (Siddaramaiah) ಸಿಟ್ಟಾಗಿದ್ದು, ಇದೊಂದು ರಾಜಕೀಯ ಭಾಷಣ ಅಂತ ಆರೋಪಿಸಿದರು. ರಾಜಕೀಯ ಭಾಷಣ ನಮಗೂ ಬರುತ್ತೆ ಅಂದ್ರು. ಈ ವೇಳೆ ಮಧ್ಯಪ್ರವೇಶಿಸಿ ಆಕ್ಷೇಪಿಸಿದ ಸಚಿವ ಅಶ್ವಥ್ ನಾರಾಯಣ (Ashwath Narayan) ಗೆ, ನೀವು ಸಂಬಂಧಿಸಿದ ಸಚಿವರಲ್ಲ, ಮಾಧುಸ್ವಾಮಿ ಮಾತಾಡಿದ್ದಾರೆ ನೀವು ಕುಳಿತುಕೊಳ್ಳಿ ಅಂತ ಸಿದ್ದರಾಮಯ್ಯ ಕಿಡಿಕಾರಿದರು. ಇದನ್ನೂ ಓದಿ: ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು

Advertisements

ಡಿಕೆ ರವಿ (D K Ravi), ಗಣಪತಿ (Ganapathi) ಕೇಸ್ ಕೋರ್ಟ್ ನಲ್ಲಿ ಇದ್ಸಾಗ, ಇಲ್ಲಿ ಚರ್ಚೆ ಆಗಿಲ್ವಾ..?, ಹಿಂದೆ ನಮ್ಮ ಸರ್ಕಾರ ಇದ್ದಾಗ ನೀವು ಇಲ್ಲಿ ಚರ್ಚೆ ಮಾಡಿಲ್ವಾ..?, ಪ್ರಭು ಚೌಹಾನ್ (Prabhu Chauhan) ಅವ್ರು ಸಿಎಂ ಗೆ ಪತ್ರ ಬರೆದಿಲ್ವಾ..?. ಹೀಗಾಗಿ ಇದರ ಚರ್ಚೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು. ಆಗ ಮಾಧುಸ್ವಾಮಿ, ಪ್ರಕರಣದ ಚರ್ಚೆಯೇ ಬೇಡ ಅಂತ ಸರ್ಕಾರ ಹೇಳ್ತಿಲ್ಲ. ಈ ನಿಯಮ ಬೇಡ, ಬೇರೆ ನಿಯಮದಲ್ಲಿ ಚರ್ಚೆ ಮಾಡೋಣ. ಪಿಎಸ್‍ಐ ನೇಮಕಾತಿಯ ಹಾಗೆ ಆಗಿರುವ ಬೇರೆ ಪ್ರಕರಣಗಳ ಬಗ್ಗೆಯೂ ಚರ್ಚೆ ಆಗಬೇಕು ಅಂತ ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಆಗ್ರಹ, ಎಲ್ಲ ತನಿಖೆ ಆಗಲಿ, ,2006 ರಿಂದಲೇ ತನಿಖೆ ಮಾಡಿ ಅಂತ ಆಗ್ರಹಿಸಿದರು. ತನಿಖಾ ಆಯೋಗ ರಚಿಸಿ ತನಿಖೆ ಮಾಡಿ ಅಂತ ಸಿದ್ದರಾಮಯ್ಯ ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶಸಿದ ಸ್ಪೀಕರ್, ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಚರ್ಚೆ ನಿಯಮ 60 ರಡಿ ಕೊಡಲ್ಲ. ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಕೊಡುತ್ತೇನೆ. ಸದ್ಯ ಅತಿವೃಷ್ಟಿ ಚರ್ಚೆ ನಡೀತಿದೆ, ಅತಿವೃಷ್ಟಿ ಚರ್ಚೆ ಬಳಿಕ ಪಿಎಸ್‍ಐ ನೇಮಕಾತಿ ಪ್ರಕರಣದ ಚರ್ಚೆಗೆ ಅವಕಾಶ ಕೊಡುತ್ತೇನೆ. ಸ್ಪೀಕರ್ ರೂಲಿಂಗ್ ಗೆ ಕಾಂಗ್ರೆಸ್ ಸದಸ್ಯರು ಒಪ್ಪಿಕೊಂಡರು. ಇದನ್ನೂ ಓದಿ: ಬೆಟ್ಟ ಕುರುಬ ಸೇರಿದಂತೆ ಒಟ್ಟು 12 ಜಾತಿಗಳು ಎಸ್‌ಟಿ ವರ್ಗಕ್ಕೆ ಸೇರ್ಪಡೆ: ಮೋದಿಗೆ ಬಿಎಸ್‌ವೈ ಅಭಿನಂದನೆ

Live Tv

Advertisements
Exit mobile version