– ಚುನಾವಣೋತ್ತರ ಸಮೀಕ್ಷೆ ಖುಷಿ ತಂದಿದೆ ಎಂದ ವಿಪಕ್ಷ ನಾಯಕ
ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯನ್ನು ಸ್ವಾಗತಿಸುತ್ತೇನೆ. ನಮ್ಮದು ಎರಡು ಅಜೆಂಡಾ. ಒಂದು ಮತ್ತೆ ನರೇಂದ್ರ ಮೋದಿ, ಮತ್ತೊಂದು 400 ಗಡಿ ದಾಟುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆ (Exit Polls) ಕುರಿತು ಮಾತನಾಡಿದ ಅವರು, ಸಮೀಕ್ಷೆಯು ಖುಷಿ ತಂದಿದೆ. ನಮ್ಮದು ಎರಡು ಅಜೆಂಡಾ. ಒಂದು ಮತ್ತೆ ನರೇಂದ್ರ ಮೋದಿ, ಮತ್ತೊಂದು 400 ದಾಟೋದು. ಒಂದಂತು ಆಗಿದೆ. ಇನ್ನೊಂದು ರಿಯಲ್ ಪೋಲ್ ರಿಸಲ್ಟ್‌ನಲ್ಲಿ ರೀಚ್ ಆಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Exit Polls | ಮೋದಿ ಹ್ಯಾಟ್ರಿಕ್ – 350ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎನ್‌ಡಿಎ
ಒಟ್ಟಾರೆ ಇಂದಿನ ಎಕ್ಸಿಟ್ ಪೋಲ್ ರಿಸಲ್ಟ್‌ನಿಂದ ಕಾರ್ಯಕರ್ತರಲ್ಲೂ ಖುಷಿ ಇರಲಿದೆ. ಕಳೆದ ವಿಧಾನಸಭೆ ಸೋತಿದ್ದೆವು. ಈ ರಿಸಲ್ಟ್ ಕರ್ನಾಟಕದ ಕಾರ್ಯಕರ್ತರಿಗೆ ಬೂಸ್ಟ್ ಕೊಡಲಿದೆ. ಅದೇ ರೀತಿ ಕಾಂಗ್ರೆಸ್ ಅವನತಿ ಶತಸಿದ್ಧ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಕೆಲ ಸರ್ವೇಯಲ್ಲಿ 250 ಸ್ಥಾನ ಕೊಟ್ಟಿದ್ದರು. 272 ಬರಲ್ಲ ಅಂದಿದ್ದರು. ಆದರೆ 303 ಕ್ಕೆ ಹೋಗಿದ್ದೆವು. ಈ ಬಾರಿ 300 ಸ್ಥಾನ ಕೊಟ್ಟಿದ್ದಾರೆ. ನೋಡೋಣ, ಎನ್‌ಡಿಎ 400 ರೀಚ್ ಆಗೋದು ಸ್ಪಷ್ಟ ಅಭಿಪ್ರಾಯ ಇದೆ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ತೀವಿ ಅಂತ ಹೇಳಿದ್ರು. ಸಿದ್ದರಾಮಯ್ಯ ಅವರು 18-20 ಎಂದು ಹೇಳಿದ್ದರು. ಎಕ್ಸಿಟ್ ಪೋಲ್‌ನಲ್ಲಿ ಐದಾರು ಸ್ಥಾನ ಬರ್ತಾ ಇದೆ. ಕಾಂಗ್ರೆಸ್ ಭಾವನೆ ಫೇಲ್ಯುರ್ ಆಗಿದೆ. ಕಾಂಗ್ರೆಸ್‌ಗೆ ಇದೇ ರಿಸಲ್ಟ್ ಬಂದರೆ ಭಾರಿ ಹಿನ್ನಡೆ ಆಗಲಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: Exit Polls: ಕರ್ನಾಟಕದಲ್ಲಿ 20 ರ ಗಡಿ ದಾಟಿದ ಬಿಜೆಪಿ – ಕಾಂಗ್ರೆಸ್‌ಗೆ ಎಷ್ಟು?
ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ನೋವಿನಿಂದ ಮನೆಗೆ ಹೋಗೋ ಪರಿಸ್ಥಿತಿ. ಕಾಂಗ್ರೆಸ್ ಎಂಎಲ್ಎಗಳು ಬೇರೆ ದಾರಿ ಹುಡುಕಿಕೊಳ್ಳುತ್ತಾರೆ. ರಾಜ್ಯದಲ್ಲಿ ಹಿನ್ನಡೆ ಪ್ರಶ್ನೆ ಇಲ್ಲ. ಕಳೆದ ಬಾರಿಯ ಕಾಂಗ್ರೆಸ್ ಮೈತ್ರಿ ಜನ ಒಪ್ಪಲಿಲ್ಲ. ದೇವೇಗೌಡರ ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರೇ ಪ್ರಯತ್ನ ಮಾಡಿದ್ರು. ಅದೇ ರೀತಿ ಜೆಡಿಎಸ್ ಮಾಡಿತು. ಹಾಗಾಗಿ ಕಾಂಗ್ರೆಸ್‌ಗೆ ಹಿನ್ನಡೆ ಆಯ್ತು. ಇಲ್ಲದಿದ್ದರೆ ಕಳೆದ ಬಾರಿ ಕಾಂಗ್ರೆಸ್ 5-6 ಸೀಟು ಗೆಲ್ಲುತ್ತಿದ್ದರು. ಒಬ್ಬರೆ ಇದ್ದರೆ ಇದು ಸಾಧ್ಯ ಆಗೋದು ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಚುನಾವಣೆಗೂ ಮುನ್ನವೇ ನಾವು 23-24 ಗೆಲ್ಲೋದಾಗಿ ಹೇಳಿದ್ದೆವು. ಸಮೀಕ್ಷೆ ಕೂಡ ಹತ್ತಿರ ಹೇಳುತ್ತಿದೆ. ಫಲಿತಾಂಶ ದಿನವು ಕಾಂಗ್ರೆಸ್‌ಗೆ ಇದೇ ರಿಸಲ್ಟ್ ಇರಲಿದೆ. ಹಾಸನ ಗೆಲ್ಲೋದಾಗಿ ಮಾಹಿತಿ ಇದೆ. ದಕ್ಷಿಣ ಭಾರತದಲ್ಲಿ ಈ ಬಾರಿ ಉತ್ತಮ ಪರ್ಫಾರ್ಮೆನ್ಸ್ ಇದೆ. ಆಂಧ್ರದಲ್ಲಿ ಕಾಂಗ್ರೆಸ್ 0, ನಾವು 18 ಗೆಲ್ಲೋದಾಗಿ ಮಾಹಿತಿ ಇದೆ. ತೆಲಂಗಾಣ ಕಳೆದ ಬಾರಿ 4, ಈ ಬಾರಿ ಎಂಟಕ್ಕೆ ಏರಿಕೆ ಆಗುತ್ತಿದೆ. ತಮಿಳುನಾಡು, ಕೇರಳ ಖಾತೆ ಓಪನ್ ಆಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಸ್ವಲ್ಪ ಕಡಿಮೆಯಾದರೂ ಒಟ್ಟಾರೆ ದಕ್ಷಿಣ ಭಾರತದಲ್ಲಿ ಉತ್ತಮ ರಿಸಲ್ಟ್ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Exit Polls | ಕೇರಳದಲ್ಲೂ ಖಾತೆ ತೆರೆಯಲಿದೆ ಬಿಜೆಪಿ