ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸುಧಾಮೂರ್ತಿ ದಂಪತಿ

Public TV
1 Min Read
sudha murthy

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections) ಹಿನ್ನೆಲೆಯಲ್ಲಿ ಕ್ಯೂನಲ್ಲಿ ನಿಂತು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ (Sudha Murthy) ದಂಪತಿ ಮತದಾನ ಮಾಡಿದರು.

ಬೆಂಗಳೂರಿನ (Bengaluru) ಜಯನಗರದಲ್ಲಿ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ (Narayana Murthy) ದಂಪತಿ ಮತ ಚಲಾಯಿಸಿದರು. ಈ ವೇಳೆ ಸುಧಾಮೂರ್ತಿ ನೆರೆದಿದ್ದ ಜನರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಸುಧಾಮೂರ್ತಿ ಜೊತೆಗೆ ಜನರು ಸೆಲ್ಫಿಗೆ ಮುಗಿಬಿದ್ದ ದೃಶ್ಯ ಕಂಡುಬಂತು.

sudha murthy vote

ನಂತರ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಬೇಕಾದರೇ ಮತದಾನ ಮಾಡಲೇಬೇಕು. ದೇಶಭಕ್ತಿ ಇಲ್ಲದೇ ಇದ್ದವರು ಮಾತ್ರ ಮತದಾನ ಮಿಸ್ ಮಾಡಿಕೊಳ್ಳತ್ತಾರೆ. ಯುವಜನರೇ ನಮ್ಮ ನೋಡಿ ಕಲಿಯಿರಿ. ಎಲ್ಲರೂ ಮತದಾನ ಮಾಡಿ. ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಳೆಯ ಮುನ್ಸೂಚನೆ ಹಿನ್ನೆಲೆ ಮೊದಲ ಅವಧಿಯಲ್ಲಿ ಬಂದು ಮತದಾನ ಮಾಡಿ: ಸುರೇಶ್ ಕುಮಾರ್ ಮನವಿ

ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ಚುನಾವಣೆ ಇಂದು ಬೀರುಸಿನಿಂದ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭ ಆಗಿದೆ. ಇದನ್ನೂ ಓದಿ: ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ನಿಮ್ಮ ಹಕ್ಕು ಚಲಾಯಿಸಿ: ಸಿದ್ದಗಂಗಾ ಶ್ರೀ

Share This Article