ಬೆಂಗಳೂರು: ವಿಧಾನಸಭೆ ಚುನಾವಣೆಗೆ (Assembly Election) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು (Candidates) ಈಗಾಗಲೇ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿರುವ ಘಟನಾನುಘಟಿ ಅಭ್ಯರ್ಥಿಗಳ ಪ್ರಮುಖ ಆಸ್ತಿ (Property) ವಿವರಗಳು ಇದೀಗ ಬಹಿರಂಗವಾಗಿದೆ.
ರಾಜಕೀಯ ಕುಬೇರರು:
ಎಂಟಿಬಿ ನಾಗರಾಜ್, ಹೊಸಕೋಟೆ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ರೂ.
* ಚರಾಸ್ತಿ ಮೌಲ್ಯ 372 ಕೋಟಿ ರೂ.
* ಸ್ಥಿರಾಸ್ತಿ ಮೌಲ್ಯ 792 ಕೋಟಿ ರೂ.
* ಪತ್ನಿ ಹೆಸರಲ್ಲಿ 437 ಕೋಟಿ ಮೌಲ್ಯದ ಆಸ್ತಿ
* ಸಾಲ 71 ಕೋಟಿ ರೂ.
* ಕಾರುಗಳ ಮೌಲ್ಯ 1.72 ಕೋಟಿ ರೂ.
Advertisement
Advertisement
ಕುಮಾರಸ್ವಾಮಿ, ಚನ್ನಪಟ್ಟಣ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ – 46.57 ಕೋಟಿ ರೂ.
* 750 ಗ್ರಾಂ ಚಿನ್ನ, ಸಾಲ 17 ಕೋಟಿ
* ಪತ್ನಿ ಹೆಸರಲ್ಲಿ 124 ಕೋಟಿ ಮೌಲ್ಯದ ಆಸ್ತಿ, 3.8 ಕೆಜಿ ಚಿನ್ನ
* ಕುಮಾರಸ್ವಾಮಿ ವಿರುದ್ಧ 5 ಕ್ರಿಮಿನಲ್ ಕೇಸ್
Advertisement
ಹೆಚ್‌ಡಿ ರೇವಣ್ಣ, ಹೊಳೆನರಸೀಪುರ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ – 43.37 ಕೋಟಿ ರೂ.
* 9 ಕೋಟಿ ರೂ. ಸಾಲ ಮಾಡಿರುವ ರೇವಣ್ಣ
* ಪತ್ನಿ ಹೆಸರಲ್ಲಿ 38 ಕೋಟಿ ರೂ. ಮೌಲ್ಯದ ಆಸ್ತಿ (5 ಕೋಟಿ ಸಾಲ)
* 3 ಕೆಜಿ ಚಿನ್ನ, 45 ಕೆಜಿ ಬೆಳ್ಳಿ, 25 ಕ್ಯಾರೆಟ್ ವಜ್ರ
Advertisement
ವಿಜಯೇಂದ್ರ, ಶಿಕಾರಿಪುರ ಅಭ್ಯರ್ಥಿ:
* 103 ಕೋಟಿ ರೂ. ಮೌಲ್ಯದ ಆಸ್ತಿ
* ಒಂದು ಟ್ರ್ಯಾಕ್ಟರ್, ಒಂದು ಟಿಲ್ಲರ್
* ಪತ್ನಿ ಹೆಸರಲ್ಲಿ 21 ಕೋಟಿ ರೂ. ಮೌಲ್ಯ ಆಸ್ತಿ
ಎಂಬಿ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ:
* 105 ಕೋಟಿ ರೂ. ಮೌಲ್ಯದ ಆಸ್ತಿ ಇದೆ
* 34 ಕೋಟಿ ರೂ. ಸಾಲ ಹೊಂದಿದ್ದಾರೆ
* 5 ಕ್ರಿಮಿನಲ್ ಕೇಸ್ ಇದೆ
ಆರ್ ಅಶೋಕ್, ಪದ್ಮನಾಭನಗರ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ.
* ಒಟ್ಟು ಸಾಲ 97.78 ಲಕ್ಷ ರೂ.
* ಪತ್ನಿಯಿಂದಲೇ 42 ಲಕ್ಷ ರೂ. ಸಾಲ
ಮುನಿರತ್ನ, ಆರ್‌ಆರ್ ನಗರ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ 270 ಕೋಟಿ ರೂ.
* ಚರಾಸ್ತಿ ಮೌಲ್ಯ – 31.34 ಕೋಟಿ ರೂ.
* ಸ್ಥಿರಾಸ್ತಿ ಮೌಲ್ಯ – 239.29 ಕೋಟಿ ರೂ.
* ಸಾಲದ ಮೊತ್ತ – 93.48 ಕೋಟಿ ರೂ.
* ಪತ್ನಿ ಹೆಸರಲ್ಲಿ 22 ಕೋಟಿ ರೂ. ಮೌಲ್ಯದ ಆಸ್ತಿ ಇದನ್ನೂ ಓದಿ: ಭಾರೀ ಸಂಖ್ಯೆಯಲ್ಲಿ ಹೊಸಬರಿಗೆ ಮಣೆ – ಕರ್ನಾಟಕ ಬಿಜೆಪಿಯಿಂದ ಗುಜರಾತ್ ದಾಖಲೆ ಬ್ರೇಕ್
ಉದಯ್ ಗರುಡಾಚಾರ್, ಚಿಕ್ಕಪೇಟೆ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ 200.44 ಕೋಟಿ ರೂ.
* 22 ಕೆಜಿ ಚಿನ್ನಾಭರಣ ಹೊಂದಿದ್ದಾರೆ
* ಸಾಲದ ಪ್ರಮಾಣ – 47.63 ಕೋಟಿ ರೂ.
ಅರುಣಾಲಕ್ಷ್ಮಿ, ಬಳ್ಳಾರಿ ನಗರ ಅಭ್ಯರ್ಥಿ:
* 200 ಕೋಟಿ ರೂ. ಮೌಲ್ಯದ ಆಸ್ತಿ
* ಚರಾಸ್ತಿ ಮೌಲ್ಯ – 96.23 ಕೋಟಿ ರೂ.
* ಸ್ಥಿರಾಸ್ತಿ ಮೌಲ್ಯ – 104.38 ಕೋಟಿ ರೂ.
* 16.44 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇದನ್ನೂ ಓದಿ: ಲಿಂಬಾವಳಿ, ರಾಮದಾಸ್‌ಗೆ ಟಿಕೆಟ್ ಮಿಸ್- ಬಿಜೆಪಿಯ10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ