ಕೋರ್ ಕಮಿಟಿ ಸಭೆಯಲ್ಲಿ ನಾಯಕರಿಗೆ ಬಿಸಿ ಮುಟ್ಟಿಸಿದ ಜಾವಡೇಕರ್, ಗೋಯಲ್

Public TV
1 Min Read
prakash javadekar piyush goyal

ಬೆಂಗಳೂರು: ಮೊದಲ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪಿಯೂಶ್ ಗೋಯಲ್ ಬಿಸಿ ಮುಟ್ಟಿಸಿದ್ದಾರೆ.

ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಂಬರ್ 1 ಸ್ಥಾನದಲ್ಲಿದ್ರೂ ನೀವ್ಯಾಕೆ ಸುಮ್ಮನಾಗಿದ್ದೀರಾ.? ಮೊದಲು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ. ಆಮೇಲೆ ಕಾಂಗ್ರೆಸ್ ಮುಕ್ತ ಭಾರತ ತನ್ನಿಂದ ತಾನೇ ಆಗುತ್ತದೆ ಎನ್ನುವುದನ್ನು ಜಾವಡೇಕರ್ ಹೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಹೊಸಬರಿಗೆ ಟಿಕೆಟ್ ಗ್ಯಾರಂಟಿ ನೀಡುತ್ತೇವೆ ಎಂದು ಯಾರು ಮಾತು ಕೊಡಬೇಡಿ. ಬಂದವರಿಗೆಲ್ಲಾ ಟಿಕೆಟ್ ನೀಡಲು ಸಾಧ್ಯವಿಲ್ಲ. ಟಿಕೆಟ್ ಬಗ್ಗೆ ಜನವರಿ ಬಳಿಕ ನೋಡೋಣ ಎನ್ನುವುದಾಗಿ ತಿಳಿಸಿ ಎಂದು ಯಡಿಯೂರಪ್ಪ ಸೇರಿ ಹಲವು ನಾಯಕರಿಗೆ ಜಾವಡೇಕರ್ ಸೂಚಿಸಿದ್ದಾರೆ.

ಯಾರಿಗೆ ಟಿಕೆಟ್ ಹಂಚಿಕೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ಧರಿಸುತ್ತಾರೆ. ಇದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಕೇಂದ್ರ ಸಚಿವರು ಎಚ್ಚರಿಸಿದ್ದಾರೆ. ಈ ಮಧ್ಯೆ ಜಾವಡೇಕರ್ ಬಿಜೆಪಿ ಕಚೇರಿಗೆ ಬಂದಾಗ ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ್, ಮುಧೋಳ ಶಾಸಕ ಗೋವಿಂದ ಕಾರಜೋಳ ಮಾತ್ರ ಇದ್ದರು.

ಯಡಿಯೂರಪ್ಪನವರು ಕೇಂದ್ರ ಸಚಿವರ ಹೆಸರು ಹೇಳುವಾಗ ಅನಂತ್‍ಕುಮಾರ್ ಹೆಗಡೆ ಹೆಸರನ್ನ ಮರೆತುಬಿಟ್ಟಿದ್ದರು. ಆಗ ಈಶ್ವರಪ್ಪ ಅನಂತ್‍ಕುಮಾರ್ ಹೆಗಡೆ ಹೆಸರನ್ನು ನೆನಪಿಸಿದರು. ಈ ವೇಳೆ ಕರ್ನಾಟಕ ಅನಂತಮಯವಾಗಿದೆ ಅಂತ ಯಡಿಯೂರಪ್ಪ ತಮಾಷೆ ಮಾಡಿದರು.

Share This Article