ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಕೆಲ ದಿನಗಳು ಬಾಕಿ ಇದ್ದು, ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಪಟ್ಟಿ ತಯಾರಾಗಿದೆ.
ಮೇ 1 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, 5 ದಿನ ವಿವಿಧ ಜಿಲ್ಲೆಗಳಲ್ಲಿ ನಡೆಯುವ 15 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ವಿಶೇಷ ಏನೆಂದರೆ ಬೆಂಗಳೂರಿನಲ್ಲಿ ಎರಡು ಬೃಹತ್ ರ‍್ಯಾಲಿಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ.
Advertisement
Advertisement
ಫೆಬ್ರವರಿ ಮೊದಲ ವಾರದಲ್ಲಿ ಮೋದಿ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಫೆಬ್ರವರಿ 27 ರಂದು ದಾವಣಗೆರೆಯಲ್ಲಿ ರೈತ ಬಂಧು ಯಡಿಯೂರಪ್ಪ ಸಮಾವೇಶದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
Advertisement
ತ್ರಿಪುರಾ ಮತ್ತು ಗುಜರಾತ್ ನಲ್ಲಿ ಚುನಾವಣೆಯ ದಿನಾಂಕ ಹತ್ತಿರ ಬಂದಾಗ ಮೋದಿ ಹಲವು ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು. ಇದರ ಪರಿಣಾಮ ಫಲಿತಾಂಶದಲ್ಲಿ ಹೆಚ್ಚಿನ ಸ್ಥಾನ ಸಿಕ್ಕಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಬಿಎಸ್‍ವೈ, ಮೋದಿಯವರು ಇನ್ನು ಪ್ರಚಾರಕ್ಕೆ ಬಂದಿಲ್ಲ. ಕೇಂದ್ರ ನಾಯಕರು ಪ್ರಚಾರಕ್ಕೆ ಇಳಿದ ಬಿಜೆಪಿ ಅಲೆ ಜಾಸ್ತಿಯಾಗಿ ಬಹುಮತದೊಂದಿಗೆ ಯಾರ ಬೆಂಬಲ ಪಡೆಯದೇ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದರು.
Advertisement
ಯಾವ ದಿನ? ಎಲ್ಲಿ ಕಾರ್ಯಕ್ರಮ?
ಮೇ 01- ಚಾಮರಾಜನಗರ, ಉಡುಪಿ, ಬೆಳಗಾವಿ
ಮೇ 03- ಕಲಬುರಗಿ, ಬಳ್ಳಾರಿ, ಬೆಂಗಳೂರು
ಮೇ 05 – ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ
ಮೇ 07 – ರಾಯಚೂರು, ಚಿತ್ರದುರ್ಗ, ಕೋಲಾರ
ಮೇ 08 – ಬಿಜಾಪುರ, ಮಂಗಳೂರು, ಬೆಂಗಳೂರು
PM Shri @narendramodi will be visiting Udupi on May 1st, 2018. He will be first visiting Udupi's Shri Krishna Mutt, and will later address a massive public rally in Udupi.#ModiIsComing pic.twitter.com/GTaUZghI2w
— BJP Karnataka (@BJP4Karnataka) April 22, 2018