ಬೆಂಗಳೂರು: ರಾಜ್ಯದಲ್ಲಿ ಚುನಾವಣೆ(Election) ಚಟುವಟಿಕೆಗಳು ಜೋರಾಗುತ್ತಿವೆ. 224 ಕ್ಷೇತ್ರಗಳಲ್ಲಿ ಕಾಂಗ್ರೆಸ್(Congress) ಟಿಕೆಟ್‍ಗಾಗಿ ಸೋಮವಾರ ಸಂಜೆಯವರೆಗೆ 1,056 ಜನ ಅರ್ಜಿ ಸಲ್ಲಿಸಿದ್ದಾರೆ.
ಈ ಪೈಕಿ ಎಸ್‍ಸಿ/ಎಸ್‍ಟಿಗಳು 350, ಸಾಮಾನ್ಯ ವರ್ಗದ 700 ಜನ ಅರ್ಜಿ ಗುಜರಾಯಿಸಿದ್ದಾರೆ. ಅರ್ಜಿಗೆ 5 ಸಾವಿರ, ಎಸ್‍ಸಿ/ಎಸ್‍ಟಿಗಳಿಗೆ 1 ಲಕ್ಷ, ಸಾಮಾನ್ಯ ವರ್ಗದವರಿಗೆ 2 ಲಕ್ಷ ನಿಗದಿ ಪಡಿಸಲಾಗಿತ್ತು. ಹೀಗಾಗಿ, ಡಿಡಿ ಜೊತೆಗೆ ಕೆಪಿಸಿಸಿಗೆ 450 ಅರ್ಜಿಗಳು ಸಲ್ಲಿಕೆಯಾಗಿವೆ.
Advertisement
Advertisement
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಅರ್ಜಿ ಸ್ವೀಕಾರ ದಿನಾಂಕವನ್ನು ನ.21ರವರೆಗೆ ವಿಸ್ತರಣೆ ಮಾಡಲಾಗಿದೆ. ಟಿಕೆಟ್ ವಿಷಯದಲ್ಲೂ ಈಗ ಸಿದ್ದು-ಡಿಕೆ ಬಣ ಎಂದು ಗುರುತಿಸಲಾಗುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಸಿದ್ದು-ಡಿಕೆ(Siddaramaiah-DK Shivakumr) ಬಣದಿಂದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು 1ನೇ ಕ್ಲಾಸಿಗೆ ಸೇರಿಸಲು 6 ವರ್ಷ ಕಡ್ಡಾಯ – ಸರ್ಕಾರದಿಂದ ಅಧಿಕೃತ ಆದೇಶ
Advertisement
ಕ್ಷೇತ್ರ ಸಿದ್ದು ಬಣ ಡಿಕೆ ಬಣ
ನಂಜನಗೂಡು ಎಚ್‍ಸಿ ಮಹದೇವಪ್ಪ ಧ್ರುವ ನಾರಾಯಣ್
ಶಿವಾಜಿನಗರ ರಿಜ್ವಾನ್ ಅರ್ಷದ್ ಮೊಹಮ್ಮದ್ ನಲ್ಪಾಡ್
ಪುಲಕೇಶಿನಗರ ಅಖಂಡ ಶ್ರೀನಿವಾಸಮೂರ್ತಿ ಪ್ರಸನ್ನ ಕುಮಾರ್
ಮಹದೇವಪುರ ಪುಷ್ಪ ಅಮರನಾಥ್ ಕಮಲಾಕ್ಷಿ ರಾಜಣ್ಣ
ಕಲಘಟಗಿ ಸಂತೋಷ್ ಲಾಡ್ ನಾಗರಾಜ್ ಛಬ್ಬಿ
ತೀರ್ಥಹಳ್ಳಿ ಕಿಮ್ಮನೆ ರತ್ನಾಕರ್ ಮಂಜುನಾಥ್ ಗೌಡ
ಮೂಡಿಗೆರೆ ನಾಗರತ್ನ/ಬಿನ್ನಾಡಿ ಪ್ರಭಾಕರ್ ನಯನ ಮೋಟಮ್ಮ
Advertisement