ಕಾಂಗ್ರೆಸ್‍ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ತಂದೆ, ಮಕ್ಕಳಿಗೆ ಟಿಕೆಟ್

Public TV
1 Min Read
shamanur shivashankarappa ss mallikarjun

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕಾಂಗ್ರೆಸ್‍ನಿಂದ (Congress) ಮೊದಲ ಪಟ್ಟಿ ಬಿಡುಗಡೆಗೊಂಡಿದೆ. ಮೊದಲ ಪಟ್ಟಿಯಲ್ಲಿ ತಂದೆ – ಮಕ್ಕಳಿಗಿಬ್ಬರಿಗೂ ಟಿಕೆಟ್ ನೀಡಲಾಗಿದೆ.

ಪ್ರಮುಖ ನಾಯಕರು ಹಾಗೂ ಅವರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅದರಲ್ಲಿ ಕೆ.ಹೆಚ್. ಮುನಿಯಪ್ಪ ಅವರಿಗೆ ದೇವನಹಳ್ಳಿ ಟಿಕೆಟ್ ಘೋಷಣೆ ಮಾಡಲಾಗಿದೆ. ಅದೇ ರೀತಿ ಕೆ. ಹೆಚ್. ಮುನಿಯಪ್ಪ ಅವರ ಮಗಳು ಹಾಗೂ ಹಾಲಿ ಶಾಸಕಿ ರೂಪಾಕಲಾ ಎಂ. ಅವರಿಗೂ ಟಿಕೆಟ್ ಘೋಷಣೆಯಾಗಿದ್ದು, ಕೆಜಿಎಫ್‍ನಿಂದ ಟಿಕೆಟ್ ಅಂತಿಮವಾಗಿದೆ. ಇದನ್ನೂ ಓದಿ: ಮಾಜಿ ಸಂಸದ ಧ್ರುವನಾರಾಯಣ್ ಪುತ್ರನಿಗೆ ನಂಜನಗೂಡು ಟಿಕೆಟ್

Congress 1

ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಅವರ ಮಗ ಎಸ್.ಎಸ್ ಮಲ್ಲಿಕಾರ್ಜುನ್ (SS Mallikarjun) ಅವರಿಗೆ ದಾವಣಗೆರೆ ಉತ್ತರದಿಂದ ಟಿಕೆಟ್ ಘೋಷಣೆ ಮಾಡಿದೆ. ಇನ್ನೂ ವಿಜಯನಗರ ಕ್ಷೇತ್ರಕ್ಕೆ ಎಂ. ಕೃಷ್ಣಪ್ಪ ಸ್ಪರ್ಧಿಸಿದರೆ, ಗೋವಿಂದರಾಜನಗರ ಕ್ಷೇತ್ರದಿಂದ ಪ್ರಿಯಕೃಷ್ಣ ಸ್ಪರ್ಧಿಸಲಿದ್ದಾರೆ. ಬಿಟಿಎಂ ಲೇಔಟ್‌ನಿಂದ ರಾಮಲಿಂಗ ರೆಡ್ಡಿ ಹಾಗೂ ಜಯನಗರದಿಂದ ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಇದನ್ನೂ ಓದಿ: ಗೊಂದಲಕ್ಕೆ ತೆರೆ- ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ

Share This Article
Leave a Comment

Leave a Reply

Your email address will not be published. Required fields are marked *