ಬೆಳಗಾವಿ: ಕಾಗವಾಡ (Kagawad) ಮತಕ್ಷೇತ್ರದಲ್ಲಿ ಇದುವರೆಗೆ ಸಪ್ಪೆಯಾಗಿದ್ದ ಕಾಂಗ್ರೆಸ್ (Congress) ಪಕ್ಷ ಸವದಿ ಪಕ್ಷ ಸೇರುತ್ತಿದ್ದಂತೆ ಫಿನಿಕ್ಸ್ ಪಕ್ಷಿಯಂತೆ ಎದ್ದಿದೆ. ಕಳೆದ ಬಾರಿ ಕೈ ಪಡೆ ಬಿಟ್ಟು ಬಿಜೆಪಿ ಸೇರಿದ್ದ ಶ್ರೀಮಂತ ಪಾಟೀಲ್ (Shrimant Patil) ಅವರು ಕಾಂಗ್ರೆಸ್ ಹಾಲಿ ಅಭ್ಯರ್ಥಿ ರಾಜು ಕಾಗೆ ವಿರುದ್ಧ ಗೆದ್ದಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಲ್ಲಿ ಸವದಿ ಪ್ರಚಾರ ಹಾಗೂ ಲಿಂಗಾಯತ ಮತಗಳ ಕ್ರೋಢಿಕರಣದಿಂದಾಗಿ ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ಇನ್ನೂ ಮರಾಠ ಸಮುದಾಯದ ಶ್ರೀಮಂತ ಪಾಟೀಲ್ ಅವರಿಗೆ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗಿದ್ದು, ಈ ಬಾರಿ ಈ ಕ್ಷೇತ್ರದಲ್ಲೂ ಟಫ್ ಫೈಟ್ ಇದೆ.
ಬಿಜೆಪಿ ಧನಾತ್ಮಕ ಅಂಶಗಳು: ಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ್ ಅವರು ಸಚಿವರಾಗಿ ಶಾಸಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಬಿಜೆಪಿ ಭದ್ರಕೋಟೆಯಾಗಿದ್ದು, ಪಾಟೀಲ್ ಸೌಮ್ಯ ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಧನಾತ್ಮಕ ಅಂಶಗಳಾಗುತ್ತದೆ.
Advertisement
Advertisement
ಬಿಜೆಪಿ ಋಣಾತ್ಮಕ ಅಂಶಗಳು: ಕ್ಷೇತ್ರದಲ್ಲಿ ಇರದೇ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಇರುತ್ತಾರೆ ಎನ್ನುವ ಆರೋಪಗಳಿವೆ. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜೊತೆಗೆ ಬೆಲೆ ಏರಿಕೆ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.
Advertisement
ಕಾಂಗ್ರೆಸ್ ಧನಾತ್ಮಕ ಅಂಶಗಳು: ಬಿಜೆಪಿ (BJP) ನಾಯಕರ ಸರ್ವಾಧಿಕಾರಿ ಧೋರಣೆಯಿಂದ ಕ್ಷೇತ್ರದ ಜನರು ಬೇಸತ್ತಿರುವುದು ಕಾಂಗ್ರೆಸ್‍ನ ಪ್ಲಸ್ ಪಾಯಿಂಟ್ ಆಗಿದೆ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಕ್ಷೇತ್ರದ ಕೆಲ ಕಡೆಗಳಲ್ಲಿ ಬಿಜೆಪಿ ಶಾಸಕರ ವಿರುದ್ಧ ಅಸಮಾಧಾನ ಇರುವುದು ಕಾಂಗ್ರೆಸ್‍ಗೆ ಸಹಾಯವಾಗುವ ಸಾಧ್ಯತೆಯಿದೆ. ನೆರೆ ಹಾವಳಿ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಿರುವುದು ಸಹಕಾರಿಯಾಗಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ (Congress) ಅಭ್ಯರ್ಥಿ ಲಿಂಗಾಯತ ಸಮುದಾಯಕ್ಕೆ ಸೇರಿರುವವರಾಗಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ.
Advertisement
ಕಾಂಗ್ರೆಸ್ ಋಣಾತ್ಮಕ ಅಂಶಗಳು: ಕ್ಷೇತ್ರದಲ್ಲಿ ನಾಯಕತ್ವದ ಕೊರತೆಯಿದ್ದು, ಚುನಾವಣೆ ಸಂದರ್ಭದಲ್ಲಿ ಕಾಣಸಿಗುವ ಅಭ್ಯರ್ಥಿ ಎಂಬುದು ಜನರಲ್ಲಿ ಇದೆ. ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ವರ್ಚಸ್ಸು ಅಷ್ಟೊಂದಾಗಿ ಇಲ್ಲದಿರುವುದು ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕ್ಷೇತ್ರದ ಕೆಲವು ಮುಖಂಡರು ಕೈಕೊಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುವ ಸಾಧ್ಯತೆಯಿದೆ.
ಕಾಗವಾಡ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ: ಕಾಗವಾಡ ವಿಧಾನಸಭಾ ಕ್ಷೇತ್ರದ ಒಟ್ಟು 1,91,050 ಮತದಾರರಿದ್ದಾರೆ. ಅದರಲ್ಲಿ 97,707 ಪುರುಷರು ಹಾಗೂ 93,343 ಮಹಿಳೆಯರಿದ್ದಾರೆ.
ಯಾರ ವೋಟು ಎಷ್ಟು?:
ಲಿಂಗಾಯತರು: 60,000
ಬ್ರಾಹ್ಮಣರು: 7,000
ಎಸ್ಸಿ, ಎಸ್ಟಿ: 35,000
ಮುಸ್ಲಿಂ: 15,000
ಮರಾಠ: 35,000
ಉಪ್ಪಾರ: 4,500
ಜೈನ್: 30,000