ಹಾಸನ: ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 3 ಪಕ್ಷಗಳ ಜೊತೆಗೆ ಪಕ್ಷೇತರ ಅಭ್ಯರ್ಥಿಯ ನಡುವೆ ಫೈಟ್ ಇದೆ. ಇಲ್ಲಿ ಈ ಬಾರಿ ಐತಿಹಾಸಿಕವಾಗಿ ರಾಮನಾಥಪುರ, ಕೊಣನೂರು ತೂಗು ಸೇತುವೆ, ತಂಬಾಕು ಮಾರುಕಟ್ಟೆ ಇದ್ರೂ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ವಿಷಯವೇ ಚುನಾವಣಾ ವಿಷಯ ಆಗಲಿದೆ. ಅಷ್ಟೇ ಅಲ್ಲದೇ ಈವರೆಗೆ ಅರಕಲಗೂಡು ಕ್ಷೇತ್ರದಲ್ಲಿ 7 ಬಾರಿ ಕಾಂಗ್ರೆಸ್ ಗೆದ್ದಿದೆ. 3 ಬಾರಿ ಜನತಾಪಕ್ಷ, ಒಂದು ಬಾರಿ ಬಿಜೆಪಿ, 2 ಬಾರಿ ಜೆಡಿಎಸ್, 2 ಬಾರಿ ಸ್ವತಂತ್ರರು ಗೆದ್ದಿದ್ದಾರೆ.
ಅರಕಲಗೂಡು ಕ್ಷೇತ್ರದ ಅಭ್ಯರ್ಥಿಗಳು:
ಯೋಗಾ ರಮೇಶ್ (ಬಿಜೆಪಿ)
ಎ.ಮಂಜು (ಜೆಡಿಎಸ್)
ಶ್ರೀಧರ್ ಗೌಡ (ಕಾಂಗ್ರೆಸ್)
ಎಂ.ಟಿ.ಕೃಷ್ಣೇಗೌಡ (ಸ್ವತಂತ್ರ)
Advertisement
Advertisement
ಯೋಗಾ ರಮೇಶ್ ಪ್ಲಸ್: ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್ ಹಿಂದೆ 2 ಬಾರಿ ಸೋತಿದ್ದರು ಎಂಬ ಅನುಕಂಪ ಜನರಿಗಿದೆ. ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಬಿಜೆಪಿ ಸೇರಿರುವುದು ಯೋಗಾ ರಮೇಶ್‍ಗೆ ಧನಾತ್ಮಕ ಅಂಶವಾಗಿದೆ.
Advertisement
ಮೈನಸ್: ಬಿಜೆಪಿ ಅಭ್ಯರ್ಥಿ ಸೋತ ನಂತರ ಕ್ಷೇತ್ರದಲ್ಲಿ ಸಕ್ರಿಯರಾಗದೇ ಇರುವುದು. ಬಿಜೆಪಿಯಿಂದ ರಾಜಕೀಯ ಆರಂಭಿಸಿ ನಡುವೆ ಕಾಂಗ್ರೆಸ್‍ಗೆ ಹೋಗಿ ಪುನಃ ಬಿಜೆಪಿಗೆ ಬಂದಿದ್ದು ಪರಿಣಾಮ ಬೀರುವ ಸಾಧ್ಯತೆಯಿದೆ.
Advertisement
ಎ.ಮಂಜು ಪ್ಲಸ್: ಹಿರಿಯ ರಾಜಕಾರಣಿ, ಕಳೆದ ಬಾರಿ ಶಾಸಕ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋಲಿನ ಅನುಕಂಪ ಜನರಲ್ಲಿದೆ. ಜೆಡಿಎಸ್ ವರ್ಚಸ್ಸು ಹಾಗೂ ತಮ್ಮ ಎದುರಾಳಿ ಎ.ಟಿ.ರಾಮಸ್ವಾಮಿ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡದೇ ಇರುವುದು ಲಾಭವಾಗಲಿದೆ.
ಮೈನಸ್: ಪಕ್ಷಾಂತರ ಮಾಡುತ್ತಾರೆ ಎಂಬ ಆರೋಪವಿದೆ. ಹಿಂದೆ ಶಾಸಕ, ಸಚಿವರಾಗಿದ್ದಾಗ ಅಭಿವೃದ್ಧಿ ಮಾಡಿಲ್ಲ ಎಂಬ ದೂರಿದೆ.
ಶ್ರೀಧರ್ ಗೌಡ ಪ್ಲಸ್: ಕಾಂಗ್ರೆಸ್ ಅಭ್ಯರ್ಥಿ ಶ್ರೀಧರ್ ಗೌಡ ಚುನಾವಣಾ ರಾಜಕೀಯಕ್ಕೆ ಹೊಸ ಮುಖ. ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿರುವುದು, ಇವರ ಸಹೋದರ ಪೇದೆ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯ ಪ್ರವೇಶಿಸಿ ಮೊದಲ ಬಾರಿಗೆ ಜಿ.ಪಂ ಸದಸ್ಯರಾಗಿದ್ದರು ಇದು ಅವರಿಗೆ ಲಾಭವಾಗಲಿದೆ.
ಮೈನಸ್: ಅರಕಲಗೂಡು ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿಯಿದೆ. ಇವರಂತೆಯೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಟಿ.ಕೃಷ್ಣೇಗೌಡ ಅವರು ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವುದು ಪಕ್ಷದ ಮೇಲೆ ಪರಿಣಾಮ ಬೀರಬಹುದು. ಇದನ್ನೂ ಓದಿ: ಸೋಮಣ್ಣ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ – ಓರ್ವನಿಗೆ ಗಾಯ
ಎಂ.ಟಿ.ಕೃಷ್ಣೇಗೌಡ ಪ್ಲಸ್: ಸಾಮಾಜಿಕ ಸೇವೆಯಲ್ಲಿ ಇಡೀ ಕುಟುಂಬ ತೊಡಗಿಸಿಕೊಂಡು ಜನರಿಗೆ ತಮ್ಮದೇ ಆದ ಸಹಾಯ ಮಾಡಿರುವುದು ಪಕ್ಷೇತರ ಅಭ್ಯರ್ಥಿ ಎಂ.ಟಿ ಕೃಷ್ಣೇಗೌಡರಿಗೆ ಲಾಭವಾಗಲಿದೆ.
ಮೈನಸ್: ಚುನಾವಣಾ ರಾಜಕೀಯಕ್ಕೆ ಹೊಸ ಮುಖ, ಯಾವುದೇ ಪಕ್ಷದ ಬೆಂಬಲ ಸಿಗದೇ ಇರುವುದು ಇವರಿಗೆ ಮೈನಸ್ ಆಗಿದೆ. ಇದನ್ನೂ ಓದಿ: ಯಾವ್ಯಾವ ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಘೋಷಿಸಬೇಕು – ಮಾಹಿತಿ ಕೋರಿ ಏಜೆಂಟ್‌ಗಳಿಗೆ ಕರಂದ್ಲಾಜೆ ಪತ್ರ
ಒಟ್ಟು ಮತಗಳೆಷ್ಟು?:
ಮತದಾರ ಸಂಖ್ಯೆ – 2,20,014
ಪುರುಷ – 1,08,779
ಮಹಿಳಾ – 1,01,235
ಜಾತಿವಾರು ಲೆಕ್ಕಾಚಾರ:
ಒಕ್ಕಲಿಗ – 66,000
ಕುರುಬ – 48,000
ಎಸ್‍ಸಿ – 29,000
ಲಿಂಗಾಯತರು – 19,000
ಎಸ್‍ಟಿ – 18,000
ಮುಸ್ಲಿಂ – 7000