ಬೆಂಗಳೂರು: ಈ ಬಾರಿ ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಪಕ್ಷಗಳ ನಡುವೆ ಫೈಟ್ ಏರ್ಪಟ್ಟಿದ್ದು, ಬಿಎಸ್‍ಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ.
ಇದಕ್ಕೂ ಮೊದಲು 18 ವರ್ಷ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (A Narayanaswamy) ಆನೆಕಲ್ ಬಿಜೆಪಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಹಾಲಿ ಶಾಸಕ ಶಿವಣ್ಣ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ 10 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
Advertisement
Advertisement
ಅಭ್ಯರ್ಥಿಗಳ ಹೆಸರು:
ಕಾಂಗ್ರೆಸ್ – ಬಿ.ಶಿವಣ್ಣ(ಹಾಲಿ ಶಾಸಕ)
ಬಿಜೆಪಿ – ಹುಲ್ಲಹಳ್ಳಿ ಶ್ರೀನಿವಾಸ್
ಜೆಡಿಎಸ್ – ಕೆ.ಪಿ.ರಾಜು
ಬಿಎಸ್ಪಿ – ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ
ಎಎಪಿ – ಮುನೇಶ್
Advertisement
ಕಾಂಗ್ರೆಸ್ ಧನಾತ್ಮಕ ಅಂಶಗಳು: ಸಿದ್ದರಾಮಯ್ಯ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿತ್ತು. ಬಿಜೆಪಿ ಕಡೆಯಿಂದ ಪ್ರಬಲ ಅಭ್ಯರ್ಥಿ ಘೋಷಣೆ ಮಾಡದಿರುವುದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಶಿವಣ್ಣನಿಗೆ ಲಾಭವಾಗುವ ಸಾಧ್ಯತೆ ಇದೆ. ಜೊತೆಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದವರ ಭಿನ್ನಮತ ಸ್ಫೋಟ ಕಾಂಗ್ರೆಸ್‍ಗೆ ಸಹಾಯವಾಗುವ ಸಾಧ್ಯತೆಯಿದೆ.
Advertisement
ಕಾಂಗ್ರೆಸ್ ಋಣಾತ್ಮಕ ಅಂಶಗಳು: ಕಳೆದ 5 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ಯಾವುದು ಸಹ ಕ್ಷೇತ್ರದಲ್ಲಿ ನಡೆದಿಲ್ಲ. ಇದರ ಜೊತೆಗೆ ನಡೆದಿರುವ ಕಾಮಗಾರಿಗಳು ಕಳಪೆ ಮಟ್ಟದ ಕಾಮಗಾರಿಗಳು ಅನೇಕ ಮಂದಿ ಹಿರಿಯ ಮುಖಂಡರನ್ನು ಕಾಂಗ್ರೆಸ್‍ನ ಶಾಸಕ ಶಿವಣ್ಣ ಗಣನೆಗೆ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಇವೆ. ಇದರಿಂದ ಸಾಕಷ್ಟು ಸಮಸ್ಯೆಗಳಾಗುವ ಸಾಧ್ಯತೆಯಿದೆ.
ಜೆಡಿಎಸ್ ಪಕ್ಷದ ಅಭ್ಯರ್ಥಿ ಕಾಂಗ್ರೆಸ್ ಮತಗಳನ್ನು ಸೆಳೆದರೆ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಬಿಎಸ್‍ಪಿ ಪಕ್ಷದ ಚಿನ್ನಪ್ಪ ಚಿಕ್ಕ ಆ ಕಡೆ ಸಹ ಮತಗಳನ್ನು ಸೆಳೆಯುವ ಎಲ್ಲಾ ರೀತಿಯ ಸಾಧ್ಯತೆಗಳು ಸಹ ಇವೆ. ಇದನ್ನೂ ಓದಿ: ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯವಿದೆ : ಕಟೀಲ್
ಬಿಜೆಪಿ ಧನಾತ್ಮಕ ಅಂಶಗಳು: ಬಿಜೆಪಿ ಪಕ್ಷದಲ್ಲಿ ಇದಕ್ಕೂ ಮೊದಲು ಶಾಸಕರಾಗಿದ್ದ ನಾರಾಯಣಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು ಮುನ್ನಡೆ ನೀಡುವ ಸಾಧ್ಯತೆ ಇದೆ. ಜೊತೆಗೆ ಕಾಂಗ್ರೆಸ್ ಶಾಸಕರಿಂದ ಈ ಬಾರಿ ಆಗದ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಪ್ಲಸ್ ಆಗುತ್ತದೆ. ಇದನ್ನೂ ಓದಿ: ಡಿಕೆಶಿಗೆ ಸೋಲಿನ ಭಯ ಕಾಡ್ತಿದೆ, ಅದಕ್ಕಾಗಿ ಮಾಟ-ಮಂತ್ರ ಮಾಡಿಸ್ತಿದ್ದಾರೆ: ಆರ್.ಅಶೋಕ್
ಬಿಜೆಪಿ ಋಣಾತ್ಮಕ ಅಂಶಗಳು: ಶ್ರೀನಿವಾಸ್ ಕಣಕ್ಕಿಳಿಯುತ್ತಿರುವುದು ಸಾಕಷ್ಟು ಮಂದಿ ಬಿಜೆಪಿ ಆಕಾಂಕ್ಷಿಗಳಿಗೆ ಹಾಗೂ ಮುಖಂಡರಿಗೆ ಇಷ್ಟವಿಲ್ಲ. ಹಿರಿಯ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳದೇ ಉಲ್ಲಹಳ್ಳಿ ಶ್ರೀನಿವಾಸ್ ಸಾಕಷ್ಟು ಬಾರಿ ಆಗೌರವ ತೋರಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಕೆಲವು ಆಕಾಂಕ್ಷಿಗಳು ಈಗಾಗಲೇ ಬಂಡಾಯ ಹೇಳುವ ಎಲ್ಲಾ ಸಾಧ್ಯತೆಗಳು ಸಹ ಕಾಣಿಸುತ್ತಿವೆ. ಇನ್ನು 2 ಬಾರಿ ಶಿವಣ್ಣನವರನ್ನು ಆಯ್ಕೆ ಮಾಡಿ ಬದಲಾವಣೆ ಬಯಸುವಂತಹ ಸಾರ್ವಜನಿಕರು ಬಿಜೆಪಿಗೆ ಮತ ಚಲಾಯಿಸುವಂತಹ ಸಾಧ್ಯತೆಗಳಿವೆ.
ಯಾರ ವೋಟು ಎಷ್ಟು?:
ಒಟ್ಟು ಮತದಾರರು: 3,48,102
ಗಂಡು: 1,84,795
ಹೆಣ್ಣು: 1,63,228
ಇತರೆ: 79
ಜಾತಿ ಲೆಕ್ಕಾಚಾರ:
ಪರಿಶಿಷ್ಟ ಜಾತಿ ಮತ್ತು ಪಂಗಡ- 1,50,000
ಒಕ್ಕಲಿಗ- 40,000
ರೆಡ್ಡಿ- 44,500
ಅಲ್ಪಸಂಖ್ಯಾತರು- 65,500
ಕುರುಬ- 15,000
ಬಲಜಿಗ- 12,000
ಸವಿತಾ ಸಮಾಜ- 9,000
ಲಿಂಗಾಯುತ- 12,000